ಮುಖಪುಟ / ಪುಸ್ತಕ ಸಂಪದ / ರಾಯರ ಕಥೆಗಳು
ರಾಯರ ಕಥೆಗಳು

ರಾಯರ ಕಥೆಗಳು

ಲೇಖಕರು: ಕೆ. ರಾಧಾಕೃಷ್ಣ ರಾವ್

₹150.00 ದಾಸ್ತಾನು ಖಾಲಿ

ಪುಸ್ತಕದ ಬಗ್ಗೆ

ರಾಯರ ಇಲ್ಲಿನ ಕಥೆಗಳನ್ನು ಕಥಾವಸ್ತುಗಳ ಹಿನ್ನೆಲೆಯಲ್ಲಿ ಗಮನಿಸಿದರೆ ಕೌಟುಂಬಿಕ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳೇ ಮುಖ್ಯವಾಗಿವೆ. ಸಮಸ್ಯೆಗಳೇ ವಸ್ತುಗಳಾದರೂ ಕೇವಲ ಅವುಗಳ ಚಿತ್ರಣ ನೀಡದೆ ಅಂತಹ ಸಮಸ್ಯೆಗಳಿಗೆ ಪರಿಹಾರದ ಬೆಳಕಿಂಡಿಗಳನ್ನು ತೆರೆದು ತೋರುತ್ತಾರೆ. ಆ ಮೂಲಕ ಒಂದು ಸಂದೇಶವನ್ನು ಸಾರುತ್ತಾರೆ. ರಾಯರು ಸ್ತ್ರೀವಾದಿ ನೆಲೆಯಲ್ಲೂ ಚಿಂತಿಸುವವರೇ ಆಗಿದ್ದಾರೆ. ವರದಕ್ಷಿಣೆ, ಅತ್ತೆಯ ಅಧಿಕಾರ, ತಾಯಿಯನ್ನು ಮಿತಿಮೀರಿ ಆರಾಧಿಸುವ ಮಗನಿಂದ ಬಂದ ಸೊಸೆಗೆ ಆಗುವ ಮಾನಸಿಕ ಹಿಂಸೆಗಳಿಗೆ ಪ್ರತಿಯಾಗಿ ಒಬ್ಬ ವಿದ್ಯಾವಂತ ಹೆಣ್ಣು ವಿಚ್ಛೇದನ ಪಡೆದು ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳುವುದನ್ನು ಸರಿ ಎಂದು ಕಥೆಯಲ್ಲಿ ಪ್ರತಿಪಾದಿಸುತ್ತಾರೆ. ಅವರು ತನ್ನ ನಡೆ, ನುಡಿಯಲ್ಲಿ ಹಾಸ್ಯ ಪ್ರಿಯರು ಎನ್ನುವುದನ್ನು ಕಥೆಗಳು ಕೂಡಾ ಸಾಬೀತುಪಡಿಸುತ್ತವೆ. ಇಲ್ಲಿನ ಎಲ್ಲ ಕಥೆಗಳಲ್ಲಿ ಅವರ ಆಶಯಗಳ ವಿಸ್ತರಣೆಯನ್ನು ಕಾಣಬಹುದಾಗಿದೆ.

ಮತ್ತೆ ಲಭ್ಯವಾದಾಗ ನಿಮಗೆ ಇಮೇಲ್ ಮೂಲಕ ತಿಳಿಸುತ್ತೇವೆ.

ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?