ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲಕ್ಸ್ಮಣ ರೇಖೆ

ಹಿಂದಿ ಮೂಲ: ಗುಲ್ ಶನ್ ನಂದಾ, ಕನ್ನಡಕ್ಕೆ: ಎಂ ವಿ ನಾಗರಾಜ ರಾವ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೨೭ ವೀಕ್ಷಣೆ ೦
ಬೆಲೆ
₹220
ಖ್ಯಾತ ಹಿಂದಿ ಕಾದಂಬರಿಕಾರ ಗುಲ್ ಶನ್ ನಂದಾ ಬರೆದ ಕೃತಿಯೊಂದು 'ಲಕ್ಸ್ಮಣ ರೇಖೆ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಎಂ ವಿ ನಾಗರಾಜ ರಾವ್. "ನ್ಯೂಯಾರ್ಕ್‌ ಪ್ರೈಟ್‌ನ ಪ್ರಯಾಣಿಕರು ಕಸ್ಟಮ್ಸ್‌ಗಾಗಿ ನಿಂತಿದ್ದ ಕೌಂಟರಿನ ಕಡೆ ಮುಕ್ತಾ ಗುಂಪಿನಲ್ಲಿ ನುಸುಳಿಕೊಂಡು ದಾರಿ ಮಾಡಿಕೊಂಡು ಓಡೋಡಿ ಬಂದಳು. ದೂರದಲ್ಲಿ ರಜತ ನಿಂತಿರುವುದನ್ನು ಕಂಡು ಹೃದಯ ತುಂಬಿ ಬಂತು. ಮುಕ್ತಾ ಅವನತ್ತ ನಡೆದಳು. ಆದರೆ ಪ್ರಯಾಣಿಕರ ಗುಂಪಿನ ಮಧ್ಯೆ ದಾರಿ ಮಾಡಿಕೊಂಡು ಅವನು ನಿಂತಿದ್ದ ಜಾಗಕ್ಕೆ ಮುಕ್ತಾ ಬರುವಷ್ಟರಲ್ಲಿ ರಜತ ಒಳಗೆ ಹೊರಟು ಹೋಗಿದ್ದ. "ರಜತ್.... ರಜತ್...." ಅವಳ ಕೂಗು ಪ್ರಯಾಣಿಕರ ಗದ್ದಲ ಗಲಾಟೆಯ ಮಧ್ಯೆ ಕೇಳಿಸದಾಯಿತು. ಆಸೆಯ ಕಣ್ಣುಗಳಿಂದ ಮುಕ್ತಾ ಕಸ್ಟಮ್ಸ್ ಹಾಲ್‌ನಲ್ಲಿ ಇಣುಕಿ ನೋಡಿದಳು. ಆದರೆ ರಜತ ಅಲ್ಲೆಲ್ಲು ಕಾಣಿಸಲಿಲ್ಲ. ನಿರಾಶಳಾಗಿ ಹಿಂದೆ ಬಂದಾಗ ಎದುರಿಗೆ ಕಬ್ಬಿಣದ ಕಂಬವನ್ನೊರಗಿ ನಿಂತಿದ್ದ ಶೀತಲ್ ಕಾಣಿಸಿದಳು.... ಬಹುಶಃ ಅವಳು ಬಹಳ ಹೊತ್ತಿನಿಂದ ತನ್ನ ನೋಡುತ್ತಿರಬಹುದು ಎನಿಸಿತು.! (ಬೆನ್ನುಡಿಯಲ್ಲಿ)

ಕೊನೆಯ ನವೀಕರಣ: ಆಗಸ್ಟ್ ೦೪, ೨೦೨೬