ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಸ್ಯ ಶ್ಯಾಮಲ

ಶ್ರೀ ಎಂ. ದಿನೇಶ್ ನಾಯಕ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೮೩ ವೀಕ್ಷಣೆ ೧
ಬೆಲೆ
₹500
ಶ್ರೀ ಎಂ. ದಿನೇಶ್ ನಾಯಕರು ಪರಿಸರಾಸಕ್ತ ವಲಯದಲ್ಲಿ ‘ಸಸ್ಯಶ್ಯಾಮಲಾ ದಿನೇಶ್ ನಾಯಕ’ ಎಂದೇ ಪ್ರಸಿದ್ಧರಾದವರು. ಪರಿಸರದಲ್ಲಿನ ಬಣ್ಣಗಳ ಚಿತ್ತಾರಕ್ಕೆ ಬೆರಗಾಗಿ ಫೋಟೋಗ್ರಫಿಯ ಹವ್ಯಾಸವನ್ನು ಬೆಳೆದು ಸಸ್ಯಪ್ರಪಂಚದ ಅಪೂರ್ವ ಚಿತ್ರಗಳನ್ನು ಸೆರೆಹಿಡಿದವರು. ಅವುಗಳ ವೈಜ್ಞಾನಿಕ ಹೆಸರು, ಸ್ಥಳೀಯ ಹೆಸರುಗಳನ್ನು ಮತ್ತು ಮಹತ್ವವನ್ನು ತಿಳಿದುಕೊಳ್ಳುತ್ತ ದಾಖಲಿಸಿಕೊಂಡವರು. ಸಂಶೋಧಕರು, ಅಧ್ಯಯನಕಾರರು. ಇವರ ಸ್ಮೃತಿಪಟಲದಲ್ಲೇ ದಾಖಲಾಗಿದ್ದ ಅಷ್ಟೂ ಪರಿಸರ ಮಾಹಿತಿಗಳನ್ನು ಸಂರಕ್ಷಿಸಿಡಬೇಕೆಂಬ ಮಹದಾಸೆಯಿಂದ ಮಂಗಳೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಮತ್ತು ಈಗ ಕಾರ್ಡೊಲೈಟ್ ಸ್ಪೆಷಾಲಿಟಿ ಕೆಮಿಕಲ್ಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾಗಿರುವ ಶ್ರೀ ದಿವಾಕರ ಕದ್ರಿಯವರು ಇದು ಕೃತಿರೂಪದಲ್ಲಿ ಪ್ರಕಟವಾಗಲು ಕಾರಣೀಭೂತರಾದುದು ಶ್ಲಾಘನೀಯ.

ಕೊನೆಯ ನವೀಕರಣ: ಆಗಸ್ಟ್ ೦೪, ೨೦೨೬