ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಂದ್ರಶೇಖರ ಕಂಬಾರ

ಚಂದ್ರಶೇಖರ ಕಂಬಾರ

೧೯೩೭

ಇತರ ಹೆಸರುಗಳು: ಕಂಬಾರ, Chandrashekhara Kambara

೦ ೪೦೫
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಜೀವನ ಪರಿಚಯ

ಚಂದ್ರಶೇಖರ ಕಂಬಾರರು ಜನವರಿ 2, 1937ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಜನಿಸಿದರು. ತಮ್ಮ ಸಾಹಿತ್ಯದಲ್ಲಿ ಜಾನಪದ ಶೈಲಿ ಹಾಗೂ 'ಶಿವಾಪುರ' ಎಂಬ ಕಾಲ್ಪನಿಕ ಗ್ರಾಮದ ಹಿನ್ನೆಲೆಯನ್ನು ಹೆಚ್ಚಾಗಿ ಬಳಸಿಕೊಂಡಿದ್ದಾರೆ. ಇವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಉಪಕುಲಪತಿಯಾಗಿ, ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ (NSD) ನಿರ್ದೇಶಕರಾಗಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯ ಕೃತಿಗಳು

ಪ್ರಮುಖ ಕೃತಿಗಳು ನಾಟಕಗಳು: ಜೋಕುಮಾರಸ್ವಾಮಿ, ಸಿರಿಸಂಪಿಗೆ, ಜೈಸಿದ್ಧನಾಯಕ, ಕಾಡುಕುದುರೆ, ನಾಯಿಕಥೆ, ಹರಕೆಯ ಕುರಿ, ಮಹಾಮಾಯಿ, ಬೋಳೆಶಂಕರ. ಕಾದಂಬರಿಗಳು: ಕರಿಮಾಯಿ, ಸಿಂಗಾರವ್ವ ಮತ್ತು ಅರಮನೆ, ಜಿ.ಕೆ. ಮಾಸ್ತರರ ಪ್ರಣಯ ಪ್ರಸಂಗ, ಶಿಖರ ಸೂರ್ಯ, ಅಣ್ಣತಂಗಿ. ಕಾವ್ಯ ಸಂಕಲನಗಳು: ಮುಗುಳು, ಹೇಳತೇನ ಕೇಳ, ತಕರಾರಿನವರು, ಸಾವಿರಾರು ನೆರಳು, ಬೆಳ್ಳಿ ಮೀನು, ಹಂಪಿಯ ಕಲ್ಲುಗಳು.

ಪ್ರಶಸ್ತಿ ಮತ್ತು ಗೌರವಗಳು

ಜ್ಞಾನಪೀಠ ಪ್ರಶಸ್ತಿ: 2010 (ಕನ್ನಡ ಸಾಹಿತ್ಯಕ್ಕೆ ನೀಡಿದ ಸಮಗ್ರ ಕೊಡುಗೆಗಾಗಿ). ಪದ್ಮ ಪ್ರಶಸ್ತಿಗಳು: ಪದ್ಮಶ್ರೀ (2001) ಮತ್ತು ಪದ್ಮಭೂಷಣ (2021). ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ: 1991 ('ಸಿರಿಸಂಪಿಗೆ' ನಾಟಕಕ್ಕೆ). ಇತರ ಗೌರವಗಳು: ಪಂಪ ಪ್ರಶಸ್ತಿ, ಕಬೀರ್ ಸಮ್ಮಾನ್, ಕಾಳಿದಾಸ ಸಮ್ಮಾನ್, ನಾಡೋಜ ಗೌರವ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ

ಸಂಪದ ಶ್ರಾವ್ಯದಲ್ಲಿ ಇವರೊಂದಿಗೆ

ಸಂಪದ ಶ್ರಾವ್ಯ · ಸಂಚಿಕೆ ೨
ಎರಡನೆಯ ಸಂಚಿಕೆ - ಕಂಬಾರರೊಂದಿಗೆ
ಎಲ್ಲಾ ಸಂಚಿಕೆಗಳು →

ಇವರ ಪುಸ್ತಕಗಳು

Maarikaadu

Chandrashekhara Kambara

ಸಪ್ನ ಬುಕ್ ಹೌಸ್

೧೫೭

Chakori

Chandrashekhara Kambara

ಅಂಕಿತ ಪುಸ್ತಕ

೧೪೩

ಸಂಪಾದನೆ ಸೂಚಿಸಲು ಅಥವಾ ಈ ಪುಟವನ್ನು ವರದಿ ಮಾಡಲು ಲಾಗಿನ್ ಆಗಿ.