ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
"ಸಿರಿಸಂಪಿಗೆಯ ಕವಿ ಚಂದ್ರಶೇಖರ ಕಂಬಾರರನ್ನು ಕನ್ನಡಿಗರಿಗೆ ಪರಿಚಯಿಸುವ ಅಗತ್ಯವಿಲ್ಲ. ಜಾನಪದವನ್ನು ತಮ್ಮ ಕೃತಿಗಳ ಕಸುವಾಗಿಸಿಕೊಂಡು ಜನಭಾಷೆಯಲ್ಲಿ ಕಾವ್ಯ ರಚಿಸಿದವರು ಕಂಬಾರರು. ಕನ್ನಡ ವಿಶ್ವ ವಿದ್ಯಾಲಯದ ಸ್ಥಾಪಕ ಕುಲಪತಿಗಳಾಗಿ ವಿಶ್ವ ವಿದ್ಯಾಲಯವನ್ನು ಕಟ್ಟಿದ ಕಂಬಾರರು ಈಗ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು. ಸಂಪದ ಬಳಗ ಇವರ ಸಂದರ್ಶನವನ್ನು ಪ್ರಸ್ತುತಪಡಿಸುತ್ತಿದೆ. ಚಂದ್ರಶೇಖರ ಕಂಬಾರರ ಸಂದರ್ಶನ ನಡೆಸಿಕೊಟ್ಟವರು: ಎನ್.ಎ.ಎಂ.ಇಸ್ಮಾಯಿಲ್.
ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. (18 MB) ಈ ಸಂದರ್ಶನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನೂ, ಅದರಲ್ಲಿ ಚರ್ಚಿಸಲಾಗಿರುವ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನೂ ಸಂಪದದಲ್ಲಿ ಕಾಮೆಂಟ್ ಮೂಲಕ ನೀವು ಸೇರಿಸಬಹುದು. ಸಂದರ್ಶನದ ವೇಳೆ ತೆಗೆದ ಕೆಲವು ಫೋಟೋಗಳು: ಇಸ್ಮಾಯಿಲ್ ರವರೊಂದಿಗೆ ಕಂಬಾರರು.
ಸೂ: ನಿಮ್ಮ ಬಳಿಯೂ ಕನ್ನಡಕ್ಕೆ ಸಂಬಂಧಿಸಿದ ಯಾವುದೇ ಧ್ವನಿಮುದ್ರಣವಿದ್ದಲ್ಲಿ ಅದನ್ನು 'ಸಂಪದ'ದಲ್ಲಿ ಪ್ರಕಟಿಸಲು ನನಗೆ ಇ-ಮೇಯ್ಲ್ ಮೂಲಕ ಕಳುಹಿಸಿ.
ಸಿರಿಸಂಪಿಗೆಯ ಕವಿ ಚಂದ್ರಶೇಖರ ಕಂಬಾರರನ್ನು ಕನ್ನಡಿಗರಿಗೆ ಪರಿಚಯಿಸುವುದು ಅಗತ್ಯವಿಲ್ಲ. ಜಾನಪದವನ್ನು ತಮ್ಮ ಕೃತಿಗಳ ಕಸುವಾಗಿಸಿಕೊಂಡು ಜನ ಭಾಷೆಯಲ್ಲಿ ಕಾವ್ಯ ರಚಿಸಿದವರು ಕಂಬಾರರು. ಕನ್ನಡ ವಿಶ್ವವಿದ್ಯಾಲಯದ ಸ್ಥಾಪಕ ಕುಲಪತಿಗಳಾಗಿ ವಿಶ್ವವಿದ್ಯಾಲಯವನ್ನು ಕಟ್ಟಿದ ಕಂಬಾರರು ಈಗ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು. ಸಂಪದದಲ್ಲಿ ಇವರ ಸಂದರ್ಶನವನ್ನು ಪ್ರಸ್ತುತ ಪಡಿಸಲಾಗುತ್ತಿರುವುದು ಸಂತಸದ ವಿಷಯ. ಚಂದ್ರಶೇಕರ ಕಂಬಾರರ ಸಂದರ್ಶಕ ಎನ್.ಎ.ಎಂ. ಇಸ್ಮಾಯಿಲ್. ಇವರು ಉದಯವಾಣಿಯಲ್ಲಿ ಹಿರಿಯ ಸಂಪಾದಕರಾಗಿದ್ದಾರೆ. ಸಂಪದ ಬಳಗದ ಸಕ್ರಿಯ ಸದಸ್ಯರು ಮತ್ತು ನಿರ್ವಾಹಕರಲ್ಲಿ ಒಬ್ಬರು. ಎರಡನೆಯ ಸಂಚಿಕೆಯ ಈ ಪಾಡ್ಕ್ಯಾಸ್ಟ್ ಅನ್ನು ನಿಮ್ಮ ಮುಂದೆ ಇರಿಸುತ್ತಿದ್ದೇವೆ ಕೇಳಿ.
ತಾವು administrator ಆಗಿ ಮತ್ತು ಸರ್ಕಾರಿ ವ್ಯವಸ್ಥೆಯಲ್ಲಿ ಹೇಗೆ creative ಆಗಿ ಕೆಲಸ ಮಾಡಬಹುದು ಅನ್ನೋದನ್ನ ಈಗಾಗಲೇ ತೋರಿಸಿಕೊಟ್ಟಿದ್ದೀರಿ. ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಅದಕ್ಕಿಂತಾ ಮೊದಲೂ ಉಪನ್ಯಾಸಕರಾಗಿ ಈ ತರಹದಲ್ಲೆಲ್ಲಾ ತೋರಿಸಿದ್ದೀರಿ. ಈಗ exactly ಇದು active politics ಅಂತ ಹೇಳಲಿಕ್ಕಾಗದಿದ್ದರೂ ಬಹಳಾ active politician ಜೊತೆ ಇರುವ academician ಆಗಿದ್ದೀರಿ ನೀವು. ಈ ಅನುಭವದ ಬಗ್ಗೆ ನಮ್ಮ ಹತ್ತಿರ ಏನಾದರೂ ಹಂಚಿಕೊಳ್ಳಲಿಕ್ಕೆ ಆಗುವಂತಹದಿದ್ರೆ ಹೇಳಿಕೊಳ್ಳಬೇಕು.
ಉತ್ತರ
ಮೊದಲು ರಾಜಕಾರಣ ಇದೆಯಲ್ಲ, ನಮ್ಮ ರಾಜಕಾರಣ ಬಹಳ ಒಳ್ಳೆ ರಾಜಕಾರಣ ಅಲ್ಲ ಇದು. ನನಗೆ ಬೇಕಾಯ್ತು ಅಂತ ಹೇಳಿದ್ರೆ ನನಗೆ ಅನಾಕೂಲವಾಗುವಂತಹ ಮೌಲ್ಯಗಳನ್ನೂ ಸೃಷ್ಟಿ ಮಾಡಿ ಚಲಾವಣೆಯಲ್ಲಿ ಬಿಟ್ಟು ಬಿಡಬಹುದು ನಾನು. ಅದು ಅಪಾಯಕಾರಿ ನೋಡಿ. ಇವತ್ತು ನಾನು ಯಾವ ಒಂದು ಮಾತು ಹೇಳಿದ್ರೆ ಆ ಮಾತಿಗೆ ವಿರುದ್ಧವಾಗಿ ಹೇಳುವಂತಹ ಮತ್ತು ನಿಮ್ಮನ್ನು convince ಮಾಡುವಂತಹ ಒಂದು ಜಾಣತನವನ್ನ ಬೆಳೆಸಿಕೊಂಡು ಬಿಟ್ಟೆ ಅಂದ್ರೆ ಬಚಾವ್ ಆಗಬಹುದು. ಇಂಥಲ್ಲಿ ಈ ರಾಜಕಾರಣ creative ಅಲ್ಲ. ನಿರ್ಲಿಪ್ತ ವಾಗಿ ಇರೋದಕ್ಕೆ ಇಷ್ಟ ಪಡ್ತೀರಿ ನೀವು ಆವಾಗ. ಯಾವಾಗ entry ಆಗೋಕ್ಕೆ ಇಷ್ಟಾ ಅಂದ್ರೆ creative ಆಗಿರಬೇಕು ಅದು. creativity ಯಾವಾಗಲೂ ಬಹಳ ಪರಿಶುದ್ಧವಾಗಿ ಇರುತ್ತದೆ ನೋಡ್ರಿ and ಒಂದ್ challenge ಅದು. challenge ಎಂತಹದ್ದು ಅಂದ್ರೆ, ಬೇಂದ್ರೆ ಅವರ ಜಾತ್ರೆ ನಾಟಕ ಇದೆಯಲ್ಲ ಅದರಲ್ಲಿ ರಾಜ ಹೇಳ್ತಾನೆ, ಕಾಲರಾ ಬಂದಿದೆ ಅಂತಾ. ಕಾಲರಾ ಇದೇ! ಯಾಕಿದೆ ಅಂತ ಹೇಳಿದ್ರೆ? ನಾನ್ ರಾಜ ಹೇಳ್ತೀನಿ ಅದಕ್ಕೆ ಅಂತಾ, ಕಾಲರಾ ಇಲ್ಲ! ಯಾಕೆ ಅಂತ ಅಂದ್ರೆ? ನಾನ್ ರಾಜ ಹೇಳ್ತೀನಿ ಅದಕ್ಕೆ ಅಂತಾ. ಅಂದ್ರೆ ಇದೇ ಅಥವಾ ಇಲ್ಲ ಅನ್ನೋದನ್ನ ನಾನು ಸೃಷ್ಟಿ ಮಾಡಬಲ್ಲೆ ಅಂತಾ. ಇದು creativity ಅಲ್ಲರೀ. ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಇಂಥವೆಲ್ಲ concept ಕೊಟ್ಟ್ರು, ಸೃಷ್ಟಿ ಮಾಡಿದ್ರು ನೋಡಿ ಇದು creativity , politician ಅನ್ನೋದು creativity ಹಿಂಗ್ ಇದ್ರಾ ಅದರ್ ಜೋಡಿ ಆಟಾಡೋದು ಚಂದ್ ಪಾ. ಇದು ಸ್ವಾರ್ಥಕ್ಕಾಗಿ ಏನ್ ಏನೋ ನೀವು valueಗಳನ್ನ ಮೌಲ್ಯಾಧಾರಿತ ಅನ್ನೋದು ಆಮೇಲೆ ಮಾರನೆ ದಿವಸ ಯಾರು ಮೌಲ್ಯಗಳನ್ನ ಮೀರೋದಿಲ್ಲ ಅನ್ನೂದು! ಮೌಲ್ಯಗಳನ್ನ ಮೀರದವರು ಯಾರಿರಲ್ಲ. ಇದು creativity ಅಲ್ಲ ಇಂಥಲ್ಲಿ ಆಟಾಡೋದು ಚಂದ್ ಅಲ್ಲ.
ಪ್ರಶ್ನೆ ೨
ತಾವು ವಿಧಾನ ಮಂಡಲದ ಮೇಲ್ಮನೆ ಸದಸ್ಯರಾಗಿದಿರಿ. ಈ ಅನುಭವಗಳ ಹಿನ್ನಲೆಯಲ್ಲಿ ಈ ನಿಮ್ಮ ಮೌಲ್ಯಗಳು ಹೇಗೆ ಅನ್ನಿಸುತ್ತೆ.
ಉತ್ತರ
ಇಲ್ಲಿ ಅಂಥದ್ದೇನು ಅನ್ನಿಸುತ್ತ ಇಲ್ಲ ನನಗೆ. ನಾನು ಒಟ್ಟಾರೆ ನಮ್ಮ politics ದು ಹೇಳ್ತಾ ಇದೀನಿ. ಅಂದ್ರೆ ಯಾವಾಗ ತೋಮಸ್ ಮನ್ (Thomas Mann ___LINK_OPEN_href="http://en.wikipedia.org/wiki/Thomas_Mann"___http://en.wikipedia.org/wiki/Thomas_Mann) ಹೇಳಿಬಿಟ್ಟ ನೋಡಿ ನಮ್ಮ ೨೦ನೇ ಶತಮಾನದ ಮನುಷ್ಯನ ದೈವ, ರಾಜಕಾರಣದ ಮೂಲಕವೇ ಪ್ರತ್ಯಕ್ಷವಾಗಬೇಕು ಇನ್ನ ಬೇರೆ ಇಲ್ಲ ಅಂತಾ. ಪ್ರಜಾಪ್ರಭುತ್ವದ ಮಜಾನೆ ಅದು, but ನಮ್ಮ ದೈವ ಪ್ರತ್ಯಕ್ಷ ಆಗ್ತಾ ಇಲ್ಲ ಇಲ್ಲಿ, ನಮ್ಮ ಒಳಗಿನ ರಾಕ್ಷಸ ಪ್ರತ್ಯಕ್ಷ ಆಗ್ತಾ ಇದಾನೆ. ಅಂದ್ರೆ ಇದು ನಾವು ಆಡೋ ಆಟಾ ಅಲ್ಲ ಅಂತಾ. (ನಾನ್ ಹೇಳಿದ್ದು ಅರ್ಥ ಆಯ್ತಲ್ಲ್ಲ) ಆಡೋ ಆಟಾ ಯಾವಾಗ ತಿಳ್ಯುತ್ತೆ ಅಂದ್ರೆ ಅದು ದೈವ ಪ್ರತ್ಯಕ್ಷ ಆಗಬೇಕು, ರಾಮಾಯಣದಲ್ಲಿ ಎಂತ ಎಂತ ಮೌಲ್ಯಗಳ ಮಧ್ಯೆ ತಿಕ್ಕಾಟ ನಡೀತದೆ ನೋಡಿ? ಏನೋ ನಾವು ರಾವಣ ರಾಮ ಅಂತೀವಿ ಅಥವಾ ಮಹಾಭಾರತದ ಕಾಲದಲ್ಲಿನೆ, ಎಷ್ಟು ಮೌಲ್ಯಗಳ ತಾಕಲಾಟ ಇತ್ತು, ತಾಕಲಾಟ ಇದ್ದಾಗ ಈಗಲೂ ಕೂಡ ನಾವು ಕೆಟ್ಟದಾಗಿ ಬೆಲೆ ಕಟ್ಟುತ್ತೀವಿ . ಬೆಲೆ ಕಟ್ಟಿ ಇದು ತಪ್ಪು ಇದು ಸರಿ ಅಂತ ಹೇಳ್ತೀವಿ ನಾವು ಅಲ್ವೇ? ಆ ರೀತಿಯ game ಇದ್ರೆ ಮಜಾ, ಇಲ್ಲದೆ ಹೋದ್ರೆ ಅದರ ಮಜಾ ಸಿಕ್ಕೊದಿಲ್ಲ ಅಂತ ಹೇಳಿದೆ ನಾನು.
ಪ್ರಶ್ನೆ ೩
ಸಮಕಾಲೀನ ಬರಹಗಾರರೆಲ್ಲರಿಗಿಂತ ಭಿನ್ನವಾದ ಅಭಿವ್ಯಕ್ತಿ ಮಾರ್ಗವನ್ನು ತಾವು ಆರಿಸಿ ಕೊಂಡಿದ್ದೀರ. ಎಲ್ಲಾ ಬಗೆಯ ಬರಹಗಳಲ್ಲೂ folk wisdom ಜಾನಪದ ಜ್ಞಾನದ ಒಂದು ಛಾಪು ಕಾಣಿಸುತ್ತೆ. ಇದು ನಿಮ್ಮ ಪ್ರಜ್ಞಾಪೂರ್ವಕವಾದ ಆಯ್ಕೆ ಆಗಿತ್ತೋ ಅಥವಾ ತಮ್ಮ ಕಾವ್ಯದ ಹಾದಿಯಲ್ಲಿ ಅದರಷ್ಟಿಗೆ ಅದೇ ರೂಪಗೊಂಡಿತೋ ಅನ್ನೋ ಕುತೂಹಲ ನಮಗಿದೆ.
ಉತ್ತರ
ಮೊದಮೊದಲು ಅದರಷ್ಟಿಗೆ ಅದೇ ರೂಪಗೊಂಡಿದ್ದು. ಆಮೇಲೆ ಇವರೆನ್ನೆಲ್ಲಾ ನೋಡಿದ ಮೇಲೆ ಇದು ವ್ಯರ್ಥ, ಇದು ಸರಿಯಾದ್ದಲ್ಲ ಅಂತ ನನಗೆ ಯಾವಾಗ ಅನ್ನಿಸಿತೋ, ಆಗಿನಿಂದ ಬಹಳಾ ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಳ್ಳುತ್ತಾ ಬಂದೆ. ಆಮೇಲೆ ಬರ್ತಾ ಬರ್ತಾ ನನಗೆ ಅದರ ಅಧ್ಯಯನ ಮಾಡುತ್ತಾ ಹೋದಹಾಗೆ ಅದರಲ್ಲಿರುವಂತಹ world view, ಒಂದು ದರ್ಶನ ಆಗಲಿ ಅಥವಾ ಬರಿಬೇಕಾದರೆ ಒಂದು ಜವಾಬ್ದಾರಿಯಾಗಲಿ ಇದು ಈ ಜನಗಳಲ್ಲಿ ಇಲ್ಲ ಅಂತ ಅನ್ನಿಸಿತು. ಆವಾಗ ಬಹಳ ಪ್ರಜ್ಞಾಪೂರ್ವಕವಾಗಿ, ಹ್ಯಾಗೆ ನಮ್ಮ ವಚನಕಾರರು ಬರವಣಿಗೆಯನ್ನಾಗಲಿ ಅಥವಾ ಸಾಹಿತ್ಯ ರಚನೆಯನ್ನಾಗಲಿ ಒಂದು ಅತ್ಯಂತ ಜವಾಬ್ದಾರಿಯ ಕರ್ತವ್ಯ ಅಂತ ತಿಳಿದುಕೊಂಡಿದ್ರೋ ಆ ಬಗೆಯ ಭಾವನೆಯನ್ನ ನಾನು ತಳಿತಾ ಹೋದೆ. ಜನ ಬದುಕ ಬೇಕೆಂದು ಬರೀತಾ ಹೋಗೋದು, ಲಘುವಾದ್ದನ್ನ ಬರೀಬಾರದು, ಅಕ್ಷರಗಳು ಮಂತ್ರ ಅದನ್ನ ಲಘುವಾಗಿ ಬಳಸಬಾರದು, ಇದೆಲ್ಲ ಅಲ್ಲಿಂದ ಕಲಿತ ನಾನು, ಆಮೇಲೆ ಅದರ vision ಇದೆಯಲ್ಲ, ಆ ದಾರ್ಶನಿಕತೆ ನಮ್ಮ ನವ್ಯರಲ್ಲಾಗಲಿ ಅಥವಾ ನಮ್ಮ ಹಿಂದಿನ ಕವಿಗಳಲ್ಲಾಗಲಿ ಕಂಡುಬರುತ್ತೆ. ಏಕೆಂದರೆ ನಮ್ಮಲ್ಲಿ ಎರಡನ್ನು ಗಮನಿಸಲೇಬೇಕಾದದ್ದು. ಪಶ್ಚಿಮದ ತಿಳುವಳಿಕೆ ಇಂದ ಬಹಳಾ ಪ್ರಭಾವಿತರಾಗಿದ್ದೇವೆ - ಪಶ್ಚಿಮದ ತಿಳುವಳಿಕೆ ಎಲ್ಲ ಎಂತಹದ್ದು ಅಂದ್ರೆ - narcissus attitude ಇಂದ ಪ್ರಭಾವಿತರಾಗಿರೋದು. ಅದು ಇರೋದು ಎಂತಹದ್ದು ಅಂತ ಅಂದ್ರೆ "art is reflection of life " . ಅಂದ್ರೆ ಕ್ಯಾಮೆರಾ ಕಣ್ಣಿಗೆ ಏನು ಸಿಗುತ್ತೋ ಅದು. ಕ್ಯಾಮೆರಾ ಕಣ್ಣಿಗೆ ಸಿಗದೇ ಇರುವಂತಹದ್ದು ಬಹಳಷ್ಟು ಇದೇ ಅಂತ ಹೇಳಿ ನಿಮಗೆ ನಂಬಿಕೆ ಬಂದ್ರೆ, "art is reflection of life " (ಕಲೆ ಜೀವನದ ಪ್ರತಿಬಿಂಬ)ಅಂತ ಹೇಳೋದು ಸಾಲೋದಿಲ್ಲ, ನಿಮಗೆ ಯಾವಾಗ ಅದು ಸಾಲೋದಿಲ್ಲವೋ ಅದನ್ನ follow ಮಾಡಲಿಕ್ಕೆ ಆಗೋದಿಲ್ಲ. "literature is reflection of life " (ಸಾಹಿತ್ಯ ಜೀವನದ ಪ್ರತಿಬಿಂಬ)ಅಂತ ಅನ್ನೋದಾದ್ರೆ ರಾಮಾಯಣ ಮಹಾಭಾರತಗಳನ್ನ ನಾವು ಎಂದಾದರೂ ಆ ಮಾತಿನಿಂದ ತಿಳಿದುಕೊಳ್ಳಲಿಕ್ಕೆ ಆಗುತ್ತಾ? ಆಗೋದಿಲ್ಲ. ಆದ್ದರಿಂದ ಇದು ತಪ್ಪು ಅನ್ನುವಂತಹದ್ದು. ಕಲೆ ಜೀವನದ ಪ್ರತಿಬಿಂಬ ಅಂತ ನಿಮಗೆ ಯಾವಾಗ ಅನ್ನಿಸುತ್ತೆ ಅಂತ ಅಂದ್ರೆ ನಾನು ಎಲ್ಲವನ್ನೂ ನೋಡ ಬಲ್ಲೆ ಎಲ್ಲವನ್ನೂ ಪ್ರತಿಬಿಂಬಿಸಬಲ್ಲೆ ಅನ್ನೋ ಅಹಂಕಾರ ಅಥವಾ ಸೊಕ್ಕು ಇರುತ್ತೆ. ಅದಕ್ಕೆ ಅಲ್ಲಿ ಯಾವ emotion ಮುಖ್ಯ ಅಂತ ಅಂದ್ರೆ ವ್ಯಕ್ತಿತ್ವದ ಬಗೆಗೆ narcissistic attitude ಇದೆಯಲ್ಲ ಅದು ಇರುತ್ತದೆ, ಅದು ಸೊಕ್ಕದು. ನಮ್ಮಲ್ಲಿ ಏನ್ ಹೇಳ್ತಾರೆ, ನೀನೂ ಕನ್ನಡಿ ನೋಡ್ಕೊಂಡ್ರೆ ಒಬ್ಬನೇ ಕಾಣಿಸ್ತೀಯ ಬಹಳ ಸುಂದರವಾಗಿ ಕಾಣುಸ್ತೀಯ, ಹೊಂಡದಲ್ಲಿ ನೋಡ್ಕೋ ಕನ್ನಡಿಲಿ ನಿನ್ನ ಮುಖ ನೋಡ್ಕೋಬೇಡ. ಹೊಂಡದಾಗೆ ನೋಡ್ಕೊಂಡ್ರೆ ದಂಡಿ ಇರುತ್ತೆ ಗಿಡ ಮರ ಇರುತ್ತೆ ಮೇಲೆ ಆಕಾಶ ಇರ್ತದ ಹಕ್ಕಿ, ಸೂರ್ಯ, ಚಂದ್ರ, ಗಿಡ, ಬಳ್ಳಿ ಇವೆಲ್ಲ ಇರುತ್ತೆ. ನೀನೂ ನಿನ್ನ ಬಳಗದ ಜೊತೆ ನೀನೂ ಮೂಡಿರ್ತೀಯ. ಕನ್ನಡಿ ನೋಡ್ಕೊಂಡ್ರೆ ನೀನೂ ಒಬ್ನೇ ಇರ್ತೀಯ, ಇದು ಅಲ್ಲ. ಈ ತಿಳುವಳಿಕೆ ಇದೆಯಲ್ಲ, ಇದರಿಂದ ನಿಮ್ಮ ಬರಹ ಶುರುಆಗ್ಬೇಕು. ಅಂದ್ರೆ ಆ ಜವಾಬ್ದಾರಿ ಇರುತ್ತೆ. ಹೀಗಾಗಿ ನಾನು ಭಿನ್ನ.ಅದಕ್ಕಾಗಿ ನಮ್ಮ ವಿಮರ್ಶಕರಿಗೆ ಸುಲಭ ವಾದಂತಹದ್ದನ್ನ ನಾನು ಕೊಡೋದಿಲ್ಲ ಅಥವಾ ನನ್ನನ್ನ ಹ್ಯಾಗೆ ವಿಮರ್ಶೆ ಮಾಡೋದು ಅನ್ನೋದನ್ನ ಕಲಿಸಿಕೊಳ್ಳುತ್ತಾನೆ literature ಬರೆಯೋದಕ್ಕೆ ಆಗೋದಿಲ್ಲ. ನಾನು different ಅಂತ ಗೊತ್ತಿದೆ. ನನ್ನನ್ನು ಬಹಳ ಕಡಿಮೆ ಯಾಗಿ ಇವರು ಗ್ರಹಿಸ್ತಾರೆ ಅನ್ನೋದನ್ನ ಮೊದಲಿನಿಂದ ಗೊತ್ತಿದೆ. ಅದಕ್ಕೇನು ನನಗೆ ದುಃಖ ಇಲ್ಲ.
ಪ್ರಶ್ನೆ ೪
ನಿಮ್ಮದೇ ಹಾದಿಯಲ್ಲಿ ಬೇರೆ ಕೆಲವು ಲೇಖಕರು ಕೂಡ ಕನ್ನಡದಲ್ಲಿ ಬರೆದ್ರು, ಅಂದ್ರೆ ಜಾನಪದ ಪ್ರಭಾವವನ್ನ ಬಹಳ ದಟ್ಟವಾಗಿ ಇಟ್ಟುಕೊಂಡು ಕೆಲವರು ಬರೆದ್ರು. ಅವರು ತುಂಬಾ intellectual ಆಗ್ತಾ ಹೋದ್ರು, ನೀವು ಅದಕ್ಕೆ ಭಿನ್ನವಾಗಿ ಹೆಚ್ಚು ಜನಗಳ ಹತ್ತಿರ ತಲಪುತ್ತ ಹೋದ್ರಿ ಅಥವಾ ಹೆಚ್ಚು ಜನ ಭಾಷೆಯನ್ನ ಬರೀತಾ ಹೋದ್ರಿ, ಇದನ್ನೇ ಪ್ರಜ್ಞಾಪೂರ್ವಕವಾಗಿ ಆಯ್ಕೆ ಅಂತ ಹೇಳಿದ್ರಿ ಆದರೆ ಕಾವ್ಯದ ಮಟ್ಟಿಗೆ ಬಂದ್ರೆ ಇಷ್ಟೊಂದು ಪ್ರಜ್ಞಾಪೂರ್ವಕವಾಗಿ ಮಾಡಲಿಕ್ಕೆ ಸಾಧ್ಯ ಇದೇನಾ?
ಉತ್ತರ
ನಾನು ಆ ಅರ್ಥದಲ್ಲಿ ಹೇಳಲಿಲ್ಲ, ನಾನು ಈ ಅರ್ಥದಲ್ಲಿ ಹೇಳಿದ್ದು. ಯಾಕೆ ಅಂತಂದ್ರೆ ನಿಮ್ಮ ಕಾವ್ಯಕ್ಕೆ ಪ್ರಮಾಣ ಯಾವುದು ಅನ್ನೋದನ್ನ ಮೊದಲು ನೀವೇ ತೀರ್ಮಾನ ಮಾಡಿಕೊಳ್ಳಿ, ಕಾವ್ಯಕ್ಕೆ ಪ್ರಮಾಣ ಯಾವುದು ಅಂದ್ರೆ, ಅನುಭವವೇ ಪ್ರಮಾಣವೆ ಹೊರತು ಬೌದ್ಧಿಕತೆ ಅಲ್ಲ. ಬೌದ್ಧಿಕತೆಗೆ ಅರ್ಥಗಳಿರ್ತಾವೆ, ಅನುಭವ ಇರೋದಿಲ್ಲ. ಅರ್ಥ ಇರುವಲ್ಲಿ ಅನುಭವ ಇರೋದಿಲ್ಲ, ನೀವು ಅನುಭವ ಏನು ಅಂತ ಹೇಳಿ ಒಂದು ಸಲ ತಿಳ್ಕೊನ್ದ್ರಿ ಅಂದ್ರೆ, ನೀವು ಉಪಯೋಗಿಸುವ ಶಬ್ದ ಅರ್ಥ ಬಹಳ ಬೇರೆ ಆಗುತ್ತದೆ.
ಪ್ರಶ್ನೆ ೫
ನಿಮ್ಮ ಈ ಮನೋಭಾವಕ್ಕೆ ನಿಮ್ಮ ಬಾಲ್ಯದ ಅನುಭವಗಳು ಕಾರಣ ಆಗಿದವೇ ಅಂತ ಅನ್ನಿಸುತ್ತವೆ. ಅದರ ಬಗ್ಗೆ ಸ್ವಲ್ಪ ಹೇಳುತ್ತೀರಾ?
ಉತ್ತರ
ಇದ್ದಿರಬಹುದಪ್ಪ. ಆದರೆ ನನ್ನ ಬಾಲ್ಯ ಬಹಳಾ ಬಣ್ಣಗಳಲ್ಲೇ ಬೆಳೆದು ಬಂದಿರುವಂತಹವನು ನಾನು, ಬಯಲಾಟದ ಬಣ್ಣಗಳು, ನಮ್ಮ ಹೋಳಿ ಹುಣ್ಣಿಮೆಯ ಕಾಮಣ್ಣನ ಬಣ್ಣಗಳು, ಯಕ್ಷಗಾನದ ಬಣ್ಣಗಳು. ಇಂತಹ ಬಣ್ಣಗಳಲ್ಲೇ ಬೆಳೆದು ಬಂದವನು. ಮತ್ತೆ ನಮ್ಮ ಹಳ್ಳಿಗಳಲ್ಲಿ, ಸ್ಮ್ರುತಿಗಳಿವೆ ನೋಡಿ, ಸ್ಮೃತಿ ಬೇಕು ಕಾವ್ಯಕ್ಕೆ , ನೆನಪುಗಳು ಬೇಕು. ನೆನಪುಗಳಿಲ್ಲದೆ ಹೋದರೆ ನಿಮ್ಮ ಕಾವ್ಯ ಬರೆ ಪಾತಳಿಮೇಲೆ ನಿಲ್ಲುತ್ತದೆ. ನಮಗಾದರೆ ವಚನಕಾರರ ನೆನಪುಗಳಿವೆ, ಅಸಂಖ್ಯಾತ ಪುರಾಣಗಳ ನೆನಪಿದೆ, ಜಾನಪದದ ನೆನಪಿದೆ. ಇವೆಲ್ಲಾ ನೆನಪುಗಳ ಮೂಲಕ ನಾನು ಬರೆಯೋದರಿಂದ ಬಹುಷಃ ನಾನು ಎಲ್ಲರಿಗಿಂತ ಭಿನ್ನವಾಗಿರಬಹುದು. ಬಹುಷಃ ಅವರಿಗೆ ಈ ಸ್ಮೃತಿಗಳ ಬಗೆಗೆ, ನೆನಪಿನ ಬಗೆಗೆ ಅಷ್ಟೊಂದು ಆಳವಾದ ಭಾವನೆ ಇಲ್ಲದೆ ಇರುವುದರಿಂದ ಈ ತರಹ ಆಗಿರಬಹುದು.
ಪ್ರಶ್ನೆ ೬
ತಮಗೆ ಕಾವ್ಯ ಮತ್ತು ನಾಟಕ ಅಂದ್ರೆ ಬಹಳ ಇಷ್ಟಾ ಅಂತಾ ಕಾಣುತ್ತೆ. ಏಕೆಂದರೆ ತಮ್ಮ ಕೃತಿಗಳೇ ಅದನ್ನ ಹೇಳ್ತಿದಾವೆ. ಯಾಕೆ ಈ ಎರಡು ನಿಮ್ಮ ಅಭಿವ್ಯಕ್ತಿ ಮಾರ್ಗವಾಗಿ ಬಹಳ ಹೆಚ್ಚು ಆಯ್ಕೆ ಮಾಡಿಕೊಂಡಿದ್ದೀರಿ? ಕಾದಂಬರಿನೂ ಬರೆದಿದ್ದೀರಿ ತಾವು, ಆದರೂ ಕಾವ್ಯ ಮತ್ತು ನಾಟಕಕ್ಕೆ ಹೆಚ್ಚು ಒತ್ತು ಕೊಟ್ಟಹಾಗಿದೆಯಲ್ಲ?
ಉತ್ತರ
ನಾನು ಮುಖ್ಯತಃ, ಮೂಲತಃ ಕವಿ ಅಂತ ತಿಳಿದುಕೊಂಡಿದ್ದೇನೆ, ಮತ್ತೆ ಕಾವ್ಯ ಮತ್ತು ನಾಟಕ ಎರಡು ಬೇರೆ ಬೇರೆ ಅಲ್ಲ. ಎರಡೂ ಒಂದೇ ಅವು. ನಮ್ಮ ಹಿರಿಯರು ಹೇಳುತ್ತಿದ್ದರಲ್ಲ ಕಾವ್ಯೇಶು ನಾಟಕಂ ರಮ್ಯಂ ಅಂತ. ಸೊ ಆ ಪಂಥದವನು ನಾನು ಆದ್ದರಿಂದ ನನಗೆ ಅವೆರಡರ ಮಧ್ಯದಲ್ಲಿ ಭೇದ ಕಾಣಿಸೋದಿಲ್ಲ. ಇನ್ನೊಂದು ಏನು ಅಂದ್ರೆ ಸಾಹಿತ್ಯಿಕ ಚಟುವಟಿಕೆಯಾಗಲಿ ಸಾಹಿತ್ಯೇತರ ಚಟುವಟಿಕೆಯಾಗಲಿ ಅದೇ ಬೇರೆ ಇದೇ ಬೇರೆ, ಅದೊಂದು compartment ಇದೊಂದು compartment ಅಂತ ಅಲ್ಲ. ಎಲ್ಲ ಸಮಗ್ರತೆಯ ಒಂದು ಅಭಿವ್ಯಕ್ತಿ ಆಗಬೇಕೆ ಹೊರೆತು, ನಾನು ನನ್ನ ಕಾವ್ಯವನ್ನ ನಾಟಕವಾಗಿ ನನ್ನ ನಾಟಕವನ್ನ ಕಾವ್ಯವಾಗಿ ಓದಬೇಕು ಅಂತಲೇ ನನಗೆ ಇಷ್ಟ, ಮತ್ತೆ ಯಾರಾದರು ನನ್ನನ್ನ ಅಧ್ಯನ ಮಾಡೋದಾದ್ರೆ ಅವೆರಡು ಬೇರ್ಪಡಿಸಬಾರ್ದು ಅಂತಲೇ ನನಗೆ ಇಷ್ಟ. ಆಮೇಲೆ ಕಾದಂಬರಿಯನ್ನು ಕೂಡ ನಾನು ಆ (ನಾಟಕ, ಕಾವ್ಯ) ಅರ್ಥದಲ್ಲೇ ಬರೀತೇನೆ. ಹೀಗಾಗಿ ಯಾವುದು ಭಿನ್ನ ಅಲ್ಲ ಅಂತ ಅನ್ನಿಸುತ್ತದೆ. in fact ನೀವು ನನ್ನ ಕೇಳೋದಾದ್ರೆ ಹಂಪಿ ವಿಶ್ವವಿದ್ಯಾಲಯದ ಅದನ್ನೂ ಅದೇ (ನಾಟಕ, ಕಾವ್ಯ) ತರಹ ನೋಡ್ಬೇಕು, ಅಂತ ನಾನು ಕೇಳ್ಕೋಳ್ಳಬೇಕು ಅಂತ ಆಸೆ ನೀವೇನು ಮಾಡ್ತೀರೋ ನನಗೆ ಗೊತ್ತಿಲ್ಲ. ಅಂದರೆ ಏನು ಕನಸುಗಳಿತ್ತು ವಿಶ್ವವಿದ್ಯಾಲಯ ಕಟ್ಟೋದಿಕ್ಕೇ ಅಥವಾ ಹ್ಯಾಗೆ ಕನಸು ಕಂಡೆ ಅದನ್ನ ಅಥವಾ ನಾವು ಏನನ್ನ ಕನಸಿಸಿದ್ವಿ? ಈ ಶಿವಾಪುರ ಬರಬೇಕು ಅಂದ್ರೆ, ಇಲ್ಲೆಲ್ಲಿ ಬರ್ತದೆ, ಒಂದು ಶಿವಾಪುರ ಕಟ್ಟಲಿಕ್ಕೆ ಹೋಗಿ ಅದನ್ನ ಕಟ್ಟಿದ್ದು ಅಂತ ಹೇಳ್ತೀನಿ ನಾನು. ಹೀಗಾದ್ದರಿಂದ ನಾನು ಯಾವುದು compartment ಮಾಡಿ ನೋಡಿದವನಲ್ಲ.
ಪ್ರಶ್ನೆ ೭
ಕನ್ನಡ ವಿಶ್ವವಿದ್ಯಾಲಯದ ನೆಲದ ಮರೆಯ ನಿಧಾನದಲ್ಲಿ ತಮ್ಮ ಕನಸುಗಳನ್ನ ತಾವು ಹಂಚಿಕೊಂಡಿದ್ದೀರಿ, ಆ ಕನಸುಗಳು ಕನ್ನಡ ವಿಶ್ವವಿದ್ಯಾಲಯ ಈಗಿನ ಸ್ವರೂಪದಲ್ಲಿ ಸಾಕಾರಗೊಂಡಿದಾವೆ ಅಂತ ಅನ್ನಿಸುತ್ತ ಇದೆಯಾ ನಿಮಗೆ?
ಉತ್ತರ
ಅದೆನಾಗುತ್ತೆ ಅಂತ ಹೇಳಿದ್ರೆ, ಒಂದು ವಿಶ್ವವಿದ್ಯಾಲಯ ಒಂದು ಭಾಷೆಗೆ ಬೆನ್ನೆಲುಬಾಗಿ ನಿಲ್ಲಬೇಕು ಅಂದ್ರೆ, ಒಂದು ಕ್ರಮಾಂಕವಾದ ಬೆಳವಣಿಗೆ ಇರಬೇಕು.ನಾವೇನೋ ಒಂದು ದರ್ಶನವನ್ನ ಕಾಣ್ತೀವಿ, ಈ ವಿಶ್ವವಿದ್ಯಾಲಯದ ಕೆಲಸ ಏನು ಅಂತ? ಇದು ಕನ್ನಡಿಗರ ಬೌದ್ಧಿಕ ಹಸಿವನ್ನೆಲ್ಲ ತಣಿಸಬೇಕು, ಬೌದ್ಧಿಕ ಬೆಳವಣಿಗೆಯನ್ನ ಮಾಡೋದಕ್ಕೆ ಸಮರ್ಥವಾಗಬೇಕು ಅಂತ ಹೇಳಿ ಒಂದು ಚೌಕಟ್ ಹಾಕ್ತೀವಿ. ಆ ಚೌಕಟ್ಟಿನಲ್ಲೆ ಆ ಚೌಕಟ್ಟನ್ನ ವಿಸ್ತರಿಸ್ತಾ ಹೋಗಬೇಕು ಅಂದ್ರೆ ಅದು ಭಾಷೆಗೆ ಉಪಯೋಗ ಆಗ್ತದೆ. ಅದನ್ನ ಬಿಟ್ಟುಬಿಟ್ಟು ಬರೆ ಅಲ್ಲಿ ಬಂದು ಒಂದು ಕಾಲಹರಣ ಮಾಡೋದು ಕೆಲಸ ಅನ್ನೋದಾದ್ರೆ ಅದರಿಂದ ಏನು ಆಗೋದಿಲ್ಲ ಇವರೇ ಬಹುಷಃ ನನಗನ್ನಿಸುತ್ತೆ ಮತ್ಯಾರೋ ಬರ್ತಾರೆ ಬಂದು ನನಗೆ ವಿಸ್ತರಿಸುತ್ತಾರೆ ಅಂತ ನಾನು ಅಂದುಕೊಂಡಿದ್ದೀನಿ.
ಪ್ರಶ್ನೆ ೮
ಹೊಸ ಕಾಲದ ಕಾವ್ಯಗಳನ್ನು ತಾವು ಓದುತ್ತಿರುತ್ತೀರಿ ಅಂತ ಅಂದುಕೊಂಡಿದ್ದೀನಿ ವರ್ತಮಾನದ ಕವಿಗಳಲ್ಲಿ ತುಂಬಾ ಭರವಸೆ ಹುಟ್ಟಿಸುವಂಥವರು ಯಾರಿದ್ದಾರೆ ಅಂತ ತಮಗೆ ಅನ್ನಿಸುತ್ತೆ?
ಉತ್ತರ
ನನಗೆ ಎಲ್ಲಾ ನೆನಪುಗಳ ಜೊತೆ ಬರೆಯುವಂತ ಒಬ್ಬನೇ ಕವಿ ಅಂದ್ರೆ ಶಿವ ಪ್ರಕಾಶ್. ಬಾಳೆಯ ಮಂಟಪ ಅಂತ ಬರೆದಿದ್ದಾನೆ, ಎಷ್ಟು ಚೆನ್ನಾಗಿವೆ ಆ ಪದ್ಯಗಳು ಅಂತ ಅಂದ್ರೆ, ಎಲ್ಲಾ ಪದ್ಯಗಳನ್ನ ಇಷ್ಟ ಪಟ್ಟೆ ಅಂತ ಅಲ್ಲ, but ಒಬ್ಬ ಕವಿಯಾದ್ರೂ, ತನ್ನೆಲ್ಲ ಸ್ಮೃತಿಗಳ ಜೊತೆಗೆ, ತನ್ನೆಲ್ಲಾ ನೆನಪುಗಳ ಜೊತೆಗೆ ಕಾವ್ಯವನ್ನು ರಚನೆ ಮಾಡುವಂತಹವನಿದ್ದಾನಲ್ಲ ಅಂತ ಹೇಳಿ ಸಂತೋಷವಾಗುತ್ತದೆ, ಉಳಿದ ಕವಿಗಳಲ್ಲಿ ಏನಾಗುತ್ತದೆ ಅಂತ ಹೇಳಿದ್ರೆ ಶಬ್ದದಲ್ಲಿ ನಂಬಿಕೆ ಇಲ್ಲ ಅವರಿಗೆ, ದೃಶ್ಯ ಮಯಿತೆಯಲ್ಲಿ ನಂಬಿಕೆ ಬಂದುಬಿಟ್ಟಿದೆ. ನಿಮಗೆ ದೃಶ್ಯ ಮಯಿತೆಯಲ್ಲಿ ನಂಬಿಕೆ ಬಂದುಬಿಟ್ಟರೆ, ಶಬ್ದಕ್ಕಿರೋದು ದೊಡ್ಡ ಶಕ್ತಿ ಅಂದ್ರೆ ಕಿವಿ ಮೇಲೇನೆ, ಕಿವಿನೇ ಅದರ ದೊಡ್ಡ ಅಸ್ತ್ರ. ಇವರು ಕಣ್ಣಿಗೆ ತೋರಿಸಲಿಕ್ಕೆ ಹೊರಟಿದ್ದಾರೆ ಶಬ್ದಗಳನ್ನ ಅದು ಶಬ್ದದ ಬಗೆಗೆ ನಿಮ್ಮಲ್ಲಿ ಎಲ್ಲಿಯ ತನಕ ಅತ್ಯದ್ಭುತವಾದಂತಹ ನಂಬಿಕೆ, ಅದು ಮಂತ್ರ ಅನ್ನುವಂತಹ ನಂಬಿಕೆ ನಿಮಗೆ ಇರೋದಿಲ್ಲವೋ ಅಲ್ಲಿ ತನಕ ಕಾವ್ಯ ನಿಮಗೆ ಒಲಿಯೋದಿಲ್ಲ ಅಂತ ನಾನಂತೂ ನಂಬಿದ್ದೇನೆ.
ಪ್ರಶ್ನೆ ೯
ಬಹುಶಃ ಇದೇ ಕಾರಣದಿಂದನೋ ಏನೋ ತಾವು ಕಾವ್ಯವನ್ನು ಯಾವತ್ತು ವಾಚಿಸಲಿಲ್ಲ ಹಾಡಿದ್ರಿ.
ಉತ್ತರ
ಏನು ಛಂದಸ್ಸಿನಲ್ಲಿ ದೇವತೆಗಳು ಇರ್ತಾರೆ ಅಂತ ಹೇಳ್ತಿವಿ ನಾವು, ಹಾಗಂದ್ರೆ ನಮ್ಮ ಅನುಭವಕ್ಕೆ ತಕ್ಕಂತೆ ನಾವು ಒಂದು rhythm ಅನ್ನು ಸೃಷ್ಟಿ ಮಾಡ್ಕೋ ಬೇಕು. ನಿಮಗೆ ಶಬ್ಧದಲ್ಲಿ ಅರ್ಥ ಇರುತ್ತದೆ. ಛಂದಸ್ಸಿನ ಸಮೇತ ಶಬ್ದ ನಾವ್ಯಾಕೆ ಹೇಳಬೇಕು ಅಂತ ಹೇಳಿದ್ರೆ, ಆ ಛಂದಸ್ಸಿನಲ್ಲಿ ದೇವರಿನ್ನಿಟ್ಟು ಅದರ ವರ್ಣನೆ ಎಲ್ಲಾ ಶಬ್ಧದಲ್ಲಿ ಇಟ್ಟಿರ್ತೇವೆ. ಸರಿಯಾಗಿ ಆ ಮಂತ್ರವನ್ನು ಉಚ್ಚರಿಸಿದಿರಿ ಅಂತ ಅಂದ್ರೆ ದೇವತೆ ಪ್ರತ್ಯಕ್ಷ ಆಗಬೇಕು ನಿಮಗೆ, ಅಂದ್ರೆ ಅದು ಪದ್ಯ ಇಲ್ಲದೆ ಹೋದ್ರೆ ಏಯ್ ಅಲ್ಲ ಪದ್ಯ ಅಲ್ಲ ಅದು.
ಪ್ರಶ್ನೆ ೧೦
ಈಗ ಜಾಗತೀಕರಣದ ಸವಾಲುಗಳ ಬಗ್ಗೆ ನಾವು ಸಾಕಷ್ಟು ಮಾತಾಡ್ತೀವಿ ಮತ್ತು ತಾವು I.T ಮತ್ತು ಕನ್ನಡಕ್ಕೆ ಸಂಬಂಧ ಪಟ್ಟಂತೆ, ಜಾಗತೀಕರಣ ಹಾಗೂ I.T ಒಟ್ಟಿಗೆ ಇಟ್ಟಕೊಂಡು assembly ಲಿ ಕೂಡ ಮಾತಡಿದ್ರಿ. ಇಲ್ಲೊಂದು ಗೊಂದಲ ಇದೇ ಅನ್ನಿಸುತ್ತೆ, ಏಕೆ ಅಂದ್ರೆ I.T ಇಂದ ಕನ್ನಡಕ್ಕೆ ಅಪಾಯ ಇದೇ ಅಂತ ಒಂದ್ ಕಡೆ ಹೇಳ್ತಾನೆ ಮತ್ತೆ I.T ಯ ಮೂಲಕಾನೇ ಕನ್ನಡವನ್ನು ಉಳಿಸುವ ಬೇರೆ ಒಂದು ಪ್ರಯತ್ನದಲ್ಲೂ ಅದೇ ಸಮಯದಲ್ಲಿ ತೊಡಗಿಕೊಳ್ಳುತ್ತೇವೆ. ಇದೊಂದು paradox ಅನ್ನಿಸೋಲ್ವ ನಿಮಗೆ?
ಉತ್ತರ
ಕನ್ನಡದ ಸಾಧ್ಯತೆಗಳು ಅದರ ವ್ಯಾವಹಾರಿಕ ಸಾಧ್ಯತೆಗಳು ಎಲ್ಲಾ ದೊಡ್ಡವು ಆಗ್ಬೇಕ್ರಿ ಹೆಚ್ಚಾಗ್ಬೇಕ್ರಿ ನಿಮ್ಮಂತ ಹುಡುಗರು ಮಾಡ್ತಿರೋದೆಲ್ಲ ನೋಡಿ ನಮಗೆ ಬಹಳಾ ಸಂತೋಷಾ ಆಗ್ತದೆ. ಅದರ ಅರ್ಥ ಅಂತ ಹೇಳಿತಂದ್ರೆ ನಾವು ಜಾಗತೀಕರಣದ ಮಾರುಕಟ್ಟೆಗೆ ಕನ್ನಡ ಮಾರಲಿಕ್ಕೆ ತಗೊಂಡು ಹೋಗ್ತಿದಿವಿ ಅಂತ ಅಲ್ಲ ಗೊತ್ತಾಯ್ತಲ್ಲ. ಪ್ರಪಂಚದ ಏನೇನು ತಿಳುವಳಿಕೆ ಇದೆಯೋ ಅದೆಲ್ಲಾ ನಮ್ಮ ಹುಡುಗರಿಗೆ ಸಿಗಬೇಕು, ನಮ್ಮ ಹುಡುಗರಿಗೆ ಕನ್ನಡದ ಮೂಲಕ ಸಿಕ್ರೆ ಬಹಳ ಸಂತೋಷಾ ಆಗ್ತದೆ, ಹಂಗ್ ಸಿಕ್ರ ಅಂದ್ರೆ ನಮ್ಮ ಕನ್ನಡದ ಮಕ್ಕಳು ಬಹಳ creative ಆಗ್ತಾವೆ ಅದನ್ನು ಬಿಟ್ಟು creativity ಕೂಡ ಅಲ್ಲಿಂದ ತರಲಿಕ್ಕತ್ತಿದ್ರಿ ಅಂದ್ರ ಬಹಳಾ ತಪ್ಪಾಗ್ತದೆ. ಈಗ science ನಮ್ಮದಲ್ಲವಾದದ್ದರಿಂದ, ಅದನ್ನ ತರಬೇಕಾದರೆ ನೀವೇನು ಮಾಡಿದ್ರಿ. H20 ಅಂತ ಹೇಳಿದ್ರೆ ನೀರಪ್ಪ ಅಂತ ಹೇಳಕ್ಕ ಸುರು. ಎರಡು H ಒಂದು O ಸೇರಿದ್ರ ನೀರ್ ಆಗ್ತದ ಅಂತ ಹೇಳಿ ಪ್ರಯೋಗಾ ಮಾಡಿಕೂಡ ತೋರಿಸೋದಿಲ್ಲ ನೀವು ಹೌದಲ್ಲೋ. ಹಿಂಗ್ ಹಿಂಗ್ ಆದ್ರ ಹಿಂಗ್ ಹಿಂಗ್ ಆಗ್ತದ ಅಂತ ಮೊದಲಿಂದ ಹೇಳಿದ್ರೆ ನಮ್ಮ ಹುಡುಗ್ರು ಇನ್ನು ಏನೇನು ಮಾಡ್ತಿದ್ವೋ ಏನೋ ಯಾರಿಗೊತ್ತು ಅಲ್ವೇ ಆದ್ದರಿಂದ ಹುಡುಗರಿಗೆ CREATIVITY ಬೆಳಿಬೇಕು ಅಂತ ಹೇಳಿದ್ರೆ ಇಡೀ ಕನ್ನಡಿಗರೆಲ್ಲ CREATIVE ಆಗಬೇಕೂಂದ್ರೆ ಪ್ರಪಂಚದ ಎಲ್ಲಾ ತಿಳುವಳಿಕೆ ಕನ್ನಡದ ಮೂಲಕವೇ ಬರಬೇಕು, ಕನ್ನಡದ ಮೂಲಕ ಬಂತು ಅಂತ ಅಂದ್ರೆ, ಆ ಹುಡುಗರ ಕ್ರೆಯೇಟಿವಿಟಿ STOP ಮಾಡೋಕ್ಕೆ ಆಗಲ್ಲರಿ. ಹಿಂದೆ ಕೆಲವು ಡಾಕ್ಟ್ರುಗಳು ಗುಲ್ಬರ್ಗಾ ಬೀದರ್ ಇಂತಲ್ಲಿ ಕೆಲವು ಡಾಕ್ಟ್ರುಗಳು ಇದ್ದಾರಲ್ಲ ಅವರು ಹಳ್ಳಿಯಾಗೆ ಇದ್ದಾರೆ, ಹಳ್ಯಾಗಿರೋರು ಕನ್ನಡದಾಗೆ ಮಾತಾಡಬೇಕು ರೋಗದ ಬಗ್ಗೆ, ಏನ್ ಒಳ್ಳೆ ಒಳ್ಳೆ ಭಾಷೆನ ಸೃಷ್ಟಿ ಮಾಡ್ತಾರೆರಿ. ಈಗ ನಮಗೆ ಹೊಸ ಪ್ರಜ್ಞೆ ಬಂತು ಪರಿಸರದ ಬಗ್ಗೆ, ಪರಿಸರದ ಬಗ್ಗೆ ನಿಮ್ಮ ಭಾಷೆ ಬಿಡಿ ಅಲ್ಲಿ ಹಳ್ಳಿಗರು ಆ ಪರಿಸರದ ಬಗ್ಗೆ ಮಾತಾಡೋವಾಗ ನಮ್ಮ ಭಾಷೆ ಕಲಿತು ಅವರು ತಮ್ಮ ಕನ್ನಡದಲ್ಲಿ ಮಾತಾಡ್ತಾ ಇರ್ತಾರೆ ಎಷ್ಟು creative ಆಗಿರ್ತಾರೆ ನೋಡಿ ಇದು ಬರಬೇಕಾದ್ರೆ ಕನ್ನಡದೊಳಗೆ ಆಗಬೇಕು ಇದಕ್ಕೆ ಜಾಗತೀಕರಣ ಅಂತ ಹೇಳಿದ್ರೆ ಕನ್ನಡವನ್ನ ಕನ್ನಡವಾಗಿ ಮಾತ್ರ ಇಟ್ಟು ಹಳೆಗನ್ನಡದ ತರಹ ಇಟ್ಟು ಆಮೇಲೆ ನೀವು ಜಾಗತೀಕರಣನ ಇಂಗ್ಲಿಷ್ ನಲ್ಲಿ ಮಾಡ್ಕೊಲ್ರಿ ಅಂತ ಅಂದ್ರೆ ಅಲ್ಲ ನಾವು ಪ್ರಪಂಚದ ಎಲ್ಲಾ ತಿಳುವಳಿಕೆ ಕನ್ನಡದ ಮೂಲಕ ಬರಬೇಕು ಅಂದ್ರೆ ನಮ್ಮ ಹುಡುಗ್ರು ಬಹಳಾ creative ಆಗ್ತಾರೆ. Perhaps english ಗಿಂತ ಹೆಚ್ಚು creative ಆಗಬಹುದು.
ಪ್ರಶ್ನೆ ೧೧
ಇಂತಹದ್ದೊಂದು ಪ್ರಯತ್ನ ತಾವು ಕನ್ನಡ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾಗಿದ್ದಾಗ ಮಾಡಿದ್ರಿ ಮತ್ತು ತಮ್ಮ "ನೆಲದಮರೆಯ ನಿಧಾನ"ದಲ್ಲಿ ಎಲ್ಲವನ್ನೂ ಕನ್ನಡದ ಮೂಲಕವೇ ತಿಳಿದುಕೊಳ್ಳುವ ಪರಿಕಲ್ಪನೆ ಬಗ್ಗೆನೂ ಮಾತಾಡಿದ್ರಿ, ಆದ್ರೆ ಬರ್ತಾ ಬರ್ತಾ ಎಲ್ಲವನ್ನೂ ಕನ್ನಡದಲ್ಲಿ ತಿಳಿದುಕೊಳ್ಳುವ ಪ್ರಕ್ರಿಯೆ ಬರೆ ಬೇರೆ ಭಾಷೆಯ ಸಾಹಿತ್ಯ ಅಥವಾ ಮಾನವಿಕಗಳ ಅಧ್ಯಯನಕ್ಕೆ ಮಾತ್ರ ಸೀಮಿತವಾಗಿ ಉಳಿದು Science ಮತ್ತು technology ಅದರಿಂದ ಹೊರಗೆ ಉಳಿದು ಕೊಳ್ಳುತ್ತಾ ಬಂದ್ವು ಇದನ್ನ ತಡಿಲಿಕ್ಕೆ ಸಾಧ್ಯ ಇರ್ಲಿಲ್ವಾ?
ಉತ್ತರ
ನಾವೇನು ಮಾಡಿದ್ವಿ ಅಂತ ಹೇಳಿದ್ರೆ, ೪ ವಿಜ್ಞಾನ ಪಠ್ಯ ಪುಸ್ತಕಗಳನ್ನ ಕನ್ನಡದಲ್ಲಿ ಮಾಡಿದ್ವಿ, ಅದನ್ನ ಮುಂದುವರಿಸಬೇಕು ನೀವು! M .Sc ತನಕ ಬರಬೇಕು, ಈಗಲೂ ಕೂಡ ಹಳ್ಳಿಗಳಲ್ಲಿ ಹುಡುಗರು ನಾವು P.U ಗೆ ಮಾಡಿದ ಕನ್ನಡ ಪುಸ್ತಕಗಳನ್ನ ಉಪಯೋಗಿಸುತ್ತಾರೆ ಮತ್ತೆ ಅವರಿಗೆ ತಿಳಿದಷ್ಟು ಇಂಗ್ಲಿಷ್ ನಲ್ಲಿ ಓದಿದೋರು ಖಂಡಿತ ತಿಳಿದಿಲ್ಲ. ಯಾಕೆ ಅವುಗಳಿಗೆ ಅಷ್ಟು demand ಅದ ಹೇಳ್ರಿ ಯಾಕಂತ ಅಂದ್ರೆ ತಿಳಿತದ ಅದಕ್ಕೆ. ನೀವು M.Sc ತನಕ ತರಬೇಕು, ಅದರ ತನಕ ತರಬೇಕು ಅಂತ ಅಂದ್ರೆ ನಿಮಗೆ ಮೊದಲು ವಿಷಯ ತಿಳಿದಿರಬೇಕ್ರಿ. ಅವರು ನೋಡಿ ಶಿವರಾಮ ಕಾರಂತರು ಎಷ್ಟು ತಿಳಿದು ಕೊಂಡಿದ್ದವರು ವಿಜ್ಞಾನವನ್ನ ಅವರು ನಮ್ಮ mathematics ಪುಸ್ತಕ ನೋಡಿ ಏನು ಒಳ್ಳೆ ಕೆಲಸ ಮಾಡಿದಿರಿ ಅಂತ ಹೇಳಿ ಒಂದು ದೊಡ್ಡ ಕಾಗದ ಬರೆದಿದ್ದಾರೆ ನಮ್ಮ ವಿಶ್ವವಿದ್ಯಾಲಯಕ್ಕೆ ಅಂದ್ರೆ ಸಾಧ್ಯ ಇದೇ, ನಮಗೆನಾಗಿದೆ ಅಂತರಾಷ್ಟ್ರೀಯ ಪ್ರಜೆಗಳಗಲಿಕ್ಕೆ ಹೊರಟಿದ್ದೇವೆ ನಾವು, ಅಂತರಾಷ್ಟ್ರೀಯ ಪ್ರಜೆಗಳು ಆಗೋ ತರ ಬಹಳ ಕನಸುಗಳನ್ನ ಕಾಣ್ತೇವೆ ನಾವು. ಕರ್ನಾಟಕದ ಪ್ರಜೆಗಳಾಗೆನೆ ನಾವು ನಿಂತ್ಕೊಂಡು ಇಡೀ ಪ್ರಪಂಚವನ್ನ ನಾವು ಗ್ರಹಿಸಬಲ್ಲೆವಾದರೆ ಪ್ರಪಂಚಕ್ಕೆ ನಾವು ಒಂದಷ್ಟು ಕೊಡಬಹುದು ಇಲ್ಲದೆ ಹೋದ್ರೆ ಎಹ್ ಎಲ್ಲಿರಿ. ಎಲ್ಲಕ್ಕಿಂತ ಜಾಸ್ತಿಯಾಗಿ ಕನ್ನಡ ನಾಶವಾಗ್ತಿದೆ ಅಂತ ಹೇಳಿ ಅನೇಕರು ತಿಳಿದು ಕೊಂಡಿದ್ದಾರೆ ಕನ್ನಡ ನಾಶವಾಗುತ್ತೋ ಬಿಡುತ್ತೋ ನಿಮ್ಮ ಕ್ರೆಯೇಟಿವಿಟಿ ಅಂತೂ ದೇವರಾಣೆ ನಾಶವಾಗುತ್ತೆ creativity ನಾಶವಾದರೆ ನೀವು ಮನುಷ್ಯರೆನ್ರಿ.
ಸಂಪದ ಪಾಡ್ಕಾಸ್ಟ್ ತಂಡದಿಂದ ಎರಡನೆಯ ಬಾಲಿಗೂ ಸಿಕ್ಸರ್ ಹೊಡೆತ. ಭಾವಚಿತ್ರಗಳು ಬಹಳ ಚೆನ್ನಾಗಿವೆ. ಆದರೆ ಸ್ವಲ್ಪ ಡಾರ್ಕ್ ಆಯಿತು ಅನ್ನಿಸತ್ತೆ. ಸಂದರ್ಶನ ಚೆನ್ನಾಗಿ ಮೂಡಿ ಬಂದಿದೆ. ಇದನ್ನು ನಡೆಸಿಕೊಟ್ಟ ಇಸ್ಮಾಯಿಲ್ ಅವರಿಗೆ ವಂದನೆಗಳು. ಹಾಂ! ಇವೆಲ್ಲದರಲ್ಲೂ ಎಲೆ ಮರೆಯ ಕಾಯಿಯಂತಿರುವ ನಾಡಿಗರಿಗೂ ವಂದನೆಗಳು.
ಬಹಳ ಕಡಿಮೆ ಸಮಯದಲ್ಲಿ ಎರಡು ಸಂದರ್ಶನಗಳನ್ನು ಒದಗಿಸಿಕೊಟ್ಟಿದ್ದೀರಿ. ನನ್ನಿಂದಂತೂ ಏನೂ ಮಾಡಕ್ಕಾಗ್ತಿಲ್ಲ. ಮಾಡಿದ ನಿಮಗೆ ನನ್ನ ಕಡೆಯಿಂದ ವಿಶೇಷ ಧ್ಯಾಂಕ್ಸು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
ismailನವೆಂಬರ್ ೧೬, ೨೦೦೫ · ೨೦ ವರ್ಷಗಳ ಹಿಂದೆ
ತಮ್ಮ ಹೊಗಳಿಕೆ, ಅಭಿನಂದನೆಗಳಿಗೆ ಧನ್ಯವಾದಗಳು. ಚೆನ್ನಾಗಿದೆ ಎಂದಷ್ಟೇ ಹೇಳಿದರೆ ನಮ್ಮ ಕೆಲಸದ ಗುಣಮಟ್ಟ ಎಂಥದ್ದು ಎಂಬುದು ಅರ್ಥವಾಗುವುದಿಲ್ಲ. ನಾನಂತೂ ಇದೇ ಮೊದಲ ಬಾರಿಗೆ ಈ ಬಗೆಯ ಸಂದರ್ಶನಗಳಲ್ಲಿ ತೊಡಗಿದ್ದೇನೆ. ಪತ್ರಿಕೆಗಳಿಗಾಗಿ ಸಂದರ್ಶಿಸುವಾಗ ನನ್ನ ಧ್ವನಿ ಹೇಗಿದೆ. ಎಷ್ಟು ಸ್ಪಷ್ಟವಾಗಿದೆ ಎಂಬ ಸಮಸ್ಯೆಗಳಿರುವುದಿಲ್ಲ. ಧ್ವನಿಮುದ್ರಿತ ಸಂದರ್ಶನವನ್ನು ಬರೆಹಕ್ಕೆ ಇಳಿಸುವಾಗ ಸರಿಪಡಿಸುವ ಅವಕಾಶವೂ ಇರುತ್ತದೆ. ಧ್ವನಿ ಮುದ್ರಣ ತಂತ್ರಜ್ಞಾನ ಬಹಳಷ್ಟು ಬೆಳೆದಿದೆ. ಅದರಿಂದಾಗಿ ಕೆಲವು ಅನುಕೂಲಗಳು ಇವೆಯಾದರೂ ಮಾತಿನ ಧ್ವನಿಯನ್ನು ಬದಲಾಯಿಸಲು ಸಾಧ್ಯವೇ. ಮಾತಿನ prosodyಯನ್ನು ಹೇಗೆ ಬರೆಹದಲ್ಲಿ ತರಲು ಹೇಗೆ ಸಾಧ್ಯವಿಲ್ಲವೋ ಹಾಗೇ ಬರೆಹದ ಸ್ವಾತಂತ್ರ್ಯ ಧ್ವನಿ ಮುದ್ರಿತ ಸಂದರ್ಶನದಲ್ಲಿ ಇರುವುದಿಲ್ಲ.
ಈ ಮಿತಿಗಳ ಮಧ್ಯೆ ವೃತ್ತಿಪರ ಸಂದರ್ಶಕರಲ್ಲದ ನಾವು ಹಿರಿಯ ಸಾಹಿತಿಗಳನ್ನು ಸಂದರ್ಶಿಸುವ ಸಾಹಸ ಮಾಡುತ್ತಿದ್ದೇವೆ. ಇದನ್ನು ಇನ್ನಷ್ಟು ಚೆನ್ನಾಗಿ ಮಾಡುವುದಕ್ಕಾಗಿ ನಮಗೆ ನಮ್ಮ ಪ್ರಯತ್ನದ ಮೌಲ್ಯ ಮಾಪನ ಬೇಕಾಗಿದೆ.
ಇಸ್ಮಾಯಿಲ್
msanjay75ನವೆಂಬರ್ ೧೬, ೨೦೦೫ · ೨೦ ವರ್ಷಗಳ ಹಿಂದೆ
ಇಸ್ಮಾಯಿಲ್ಅವರೆ, ನಾನು ಸಾಮಾನ್ಯವಾಗಿ ಒಬ್ಬ tough critic, ಆದರೆ ಈ ಸನ್ನಿವೇಶದಲ್ಲಿ ನನಗೆ ಬರಿ positive ಅಭಿಪ್ರಾಯಗಳಿದ್ದಾವೆ... audio ತುಂಬ ಸ್ಪಷ್ಟವಾಗಿತ್ತು... ನಿಮ್ಮ ಧ್ವನಿ ನಿಜವಾಗಲೂ professional ಆಗಿತ್ತು - ಇದೇ ಮೊದಲನೆಯ ಬಾರಿ ಎಂದರೆ ನನಗೆ ನಿಜವಾಗಲೂ ಆಶ್ಚರ್ಯವಾಗುತ್ತೆ! :-)
muralihrನವೆಂಬರ್ ೧೭, ೨೦೦೫ · ೨೦ ವರ್ಷಗಳ ಹಿಂದೆ
ಇಸ್ಮಾಯಿಲ್ ಸ್ಫೂರ್ತಿ ಬಸವಣ್ಣರವರ ಈ ವಚನವೇ ??
ಬಯಿದವರೆನ್ನ ಬ೦ಧುಗಳೆ೦ಬೆ
ನಿ೦ದಿಸಿದವರೆನ್ನ ತ೦ದೆ ತಾಯಿ ಗಳೆ೦ಬೆ
ಆಳಿಗೊ೦ಡವರೆನ್ನ ಆಳ್ದವರೆ೦ಬೆ
ಜರಿದವರೆನ್ನ ಜನ್ಮ ಬ೦ಧುಗಳೆ೦ಬೆ
ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆ೦ಬೆ
ಕೂಡಲ ಸ೦ಗಮದೇವ.
msanjay75ನವೆಂಬರ್ ೧೬, ೨೦೦೫ · ೨೦ ವರ್ಷಗಳ ಹಿಂದೆ
...ಕಲಿಯಲು ತುಂಬಾ ಇದೆ... ಅವರ unique ideas (esp creativity ಬಗ್ಗೆ) ನನಗೆ ತುಂಬ ಹಿಡಿಸಿದವು (ಪದೆ ಪದೆ ಕೇಳಿದೆ :-))
- "ಕಲೆ ಜೀವನದ ಪ್ರತಿಬಿಂಬ" ... ಇದರ ಬಗ್ಗೆ ತುಂಬ ಚೆನ್ನಾಗಿ ವಿವರಿಸಿದ್ದಾರೆ
- "ಅನುಭವೇ ಪ್ರಮಾಣ ಹೊರತು ಭೌಧಿಕತೆ ಅಲ್ಲ. ಭೌಧಿಕತೆಗೆ ಅರ್ಥಗಳಿರುತಾವೆ, ಅನುಭವವಿರೊಲ್ಲ"
- "creativity ನಾಶವಾದರೆ ನೀವು ಮನುಷ್ಯರೇನ್ರಿ?"
_____________________________
ismail ಮತ್ತು ಎಲ್ಲರಿಗು ತುಂಬ ತುಂಬ thanks! ಒಂದು ಚಿಕ್ಕ ಸಲಹೆ: podcast + ಚಿತ್ರಗಳೊಂದಿಗೆ,interviewee ಅವರ background summary ಇದೆ, ಅದರೊಂದಿಗೆ, ಅವರ biography/works/ಇತ್ಯಾದಿಗಳಿಗೆ links ಇದ್ದರೆ ಚೆನ್ನಾಗಿರುತಿತ್ತು ಅನ್ಸುತ್ತೆ.
---------------------------
- ಸಂಜಯ
---------------------------
ಇಲ್ಲೇ ಸ್ವರ್ಗ ಇಲ್ಲೇ ನರಕ ಬೇರೇನಿಲ್ಲ ಸುಳ್ಳು
---------------------------
typing/spelling ತಪ್ಪಿದ್ದರೆ ದಯವಿಟ್ಟು ತಿದ್ದಿ... ...ಇಲ್ಲದಿದ್ದರೆ ನಾನು ಕಲಿಯುವುದು ಹೇಗೆ! ---------------------------
ಹರಿ ಪ್ರಸಾದ್ ನಾಡಿಗ್ನವೆಂಬರ್ ೧೭, ೨೦೦೫ · ೨೦ ವರ್ಷಗಳ ಹಿಂದೆ
ಒಂದೆರಡು ತಪ್ಪುಗಳನ್ನ ತಿದ್ದಿದೀನಿ ನೋಡ್ರಿ :)
ಅದರೊಂದಿಗೆ, ಅವರ biography/works/ಇತ್ಯಾದಿಗಳಿಗೆ links ಇದ್ದರೆ ಚೆನ್ನಾಗಿರುತಿತ್ತು ಅನ್ಸುತ್ತೆ.
ಇದನ್ನ ಮುಂದಿನ ಸರ್ತಿಯಿಂದ ಸೇರಿಸೋಣವಂತೆ. ಸಾಮಾನ್ಯವಾಗಿ ಕನ್ನಡ ಪುಸ್ತಕಗಳನ್ನೋದಿದವರಿಗೆ ಕಂಬಾರರು, ತೇಜಸ್ವಿಯವರು ಮತ್ತು ಅನಂತಮೂರ್ತಿಯವರಂತಹ ಸಾಹಿತಿಗಳ ಬಗ್ಗೆ ತಿಳಿಸುವ ಅಗತ್ಯ ಬರುವುದಿಲ್ಲ. ಆದರೆ ಇತ್ತೀಚೆಗೆ ನಮ್ಮ ನಿಮ್ಮಂತ ಕೆಲವರು ಕನ್ನಡ ಪುಸ್ತಕಗಳನ್ನು ಹೆಚ್ಚಾಗಿ ಓದಿಲ್ಲದಿರುವುದರಿಂದ ನೀವು ಕೊಟ್ಟಿರೋದು ಒಳ್ಳೆ ಐಡಿಯ. ಮುಂದಿನ podcast ನಿಂದ ತಪ್ಪದೇ ಚಾಲನೆಗೆ ತರುತೇವೆ. :)
ಇನ್ನೊಂದು ಮಾಹಿತಿ : ಮುಂದಿನ podcast ಅನಂತಮೂರ್ತಿಯವರೊಂದಿಗಿನ ಸಂದರ್ಶನ ;) ಸದ್ಯದಲ್ಲೇ ನಿರೀಕ್ಷಿಸಿ!
--
Check my BlogKannada wikipedia
"ಹೊಸ ಚಿಗುರು, ಹಳೆ ಬೇರು"
ರೋಹಿತ್ ರಾಮಚಂದ್ರಯ್ಯನವೆಂಬರ್ ೨೨, ೨೦೦೫ · ೨೦ ವರ್ಷಗಳ ಹಿಂದೆ
ಹರಿಯವರೆ, ಕಂಬಾರರು ಒಳ್ಳೇ ಹಾಡುಗಾರರೂ ಕೂಡ...ಅವರ ಒಂದು ಗೀತೆಯೊಂದನ್ನೂ ಧ್ವನಿಮುದ್ರಿಸಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ಅವರ ಕಂಠಸಿರಿ ಕೇಳುವ ಭಾಗ್ಯ ಎಲ್ಲರಿಗೂ ಲಭ್ಯವಾಗುತ್ತಿತ್ತು...
ಸಪ್ತಗಿರಿವಾಸಿ...ಸೆಪ್ಟೆಂಬರ್ ೨೧, ೨೦೧೧ · ೧೫ ವರ್ಷಗಳ ಹಿಂದೆ
ಹರಿಯವರ ಮತ್ತು ಇಸ್ಮಾಯಿಲ್ ಅವ್ರ ಶ್ರಮ ಸಾರ್ಥಕ.
ಒಂದೊಳ್ಳೆಯ ಸಂದರ್ಶನ.
ಕೆಲವೊಮ್ಮೆ ಸಣ್ಣ -ಪುಟ್ಟ ತಪ್ಪುಗಳಾಗುವುದು ಸಹಜ, ತಿದ್ದಿಕೊಂಡರೆ ಸಾಕಸ್ಟೆ. (ಚಿತ್ರಗಳು ಡಾರ್ಕ್ ಆಗಿದೆ ಎನುವ ಪ್ರತಿಕ್ರಿಯೆಗೆ )
ಬರಹದೊಂದಿಗೆ ಇರುವ ಚಿತ್ರಗಳು ಮತ್ತು ಸಂದರ್ಶನದ ಧ್ವನಿ ಮುದ್ರಿಕೆ ಲಿಂಕ್ ಕೊಟ್ಟಿದ್ದು, ಚಿಕ್ಕ ಬರಹದಲ್ಲಿ ಚುಟುಕಾಗಿ ಕಂಬಾರರರ ಬಗ್ಗೆ ತಿಳಿಸಿದ್ದು ನನಗೆ ಹಿಡಿಸಿತು .
ನಾಡು ನುಡಿ ಬಗ್ಗೆ ಕಂಬಾರರ ಅಭಿಮಾನ ಮತ್ತು ಹರಿ ಇಸ್ಮಾಯಿಲ್ ಅವ್ರ ಸೇವೆಯೂ ಸ್ತುತ್ಯಾರ್ಯ ..
ಒಂದೊಳ್ಳೆಯ ಸಮಯೋಚಿತ- ಸಾಂದರ್ಭಿಕ ಲೇಖನ
ಧನ್ಯವಾದಗಳು..
ಲೇಖನಗಳು, ಪುಸ್ತಕಗಳು ಅವುಗಳ ಮೂಲ ಭಾಷೆಯಲ್ಲೇ ಇರುತ್ತವೆ. ಪುಟದ ಮೇಲಿನ ಕನ್ನಡ | English ಬಟನ್ನಿಂದ ಯಾವಾಗ ಬೇಕಾದರೂ ಬದಲಿಸಬಹುದು.Articles and books stay in their original language. Change this any time with the ಕನ್ನಡ | English switch at the top of the page.
ಪ್ರತಿಕ್ರಿಯೆ (3)