K P Purnachandra Tejasvi

ನಮ್ಮೆಲ್ಲರನ್ನು ಕನ್ನಡ ಪುಸ್ತಕಗಳನ್ನೋದುವಂತೆ ಮಾಡಿದ ತೇಜಸ್ವಿ ಇನ್ನಿಲ್ಲ. ಇವರ ನೆನಪಿನಲ್ಲಿ ಇವರೊಂದಿಗೆ ನಾವು ನಡೆಸಿದ ಸಂದರ್ಶನದ podcast, ಅದರಲ್ಲಿನ ಅವರ ಮಾತುಗಳನ್ನು ಸ್ಮರಣ ಸಂಚಿಕೆಯಾಗಿ ಮತ್ತೆ ಸದಸ್ಯರ ಮುಂದಿಡುತ್ತಿದ್ದೇವೆ. ಈ ಸಂದರ್ಶನ ನಡೆಸಿದ್ದು ೨೦೦೫ರಲ್ಲಿ. ತೇಜಸ್ವಿಯವರೊಂದಿಗಿನ ಸಂದರ್ಶನ ಸಂಪದದ ಮೊದಲ podcast ಕೂಡ ಆಗಿತ್ತು.

ನಮಸ್ಕಾರ. ಸಂಪದದ ಸದಸ್ಯರೆಲ್ಲರಿಗೂ ದೀಪಾವಳಿ ಹಾಗೂ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಸಂಪದದಲ್ಲಿ podcasting ಪ್ರಾರಂಭ ಮಾಡಬೇಕೆಂದು ನಮ್ಮಲ್ಲಿ ಹಲವರು ಬಯಸಿದ್ದೆವು. ಕೊನೆಗೊಮ್ಮೆ ಸಮಯ ಕೂಡಿ ಬಂದಿದೆ. ಈ ಮೊದಲ 'ಕಡಿಮೆ ಆಡಂಬರದ' ಸಂಚಿಕೆಯಲ್ಲಿ ನಮ್ಮೆಲ್ಲರಿಗೂ ಚಿರಪರಿಚಿತರಾದ ಸಾಹಿತಿ ಮತ್ತು ಚಿಂತಕ, ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ಸಂದರ್ಶನವನ್ನು ನಿಮ್ಮ ಮುಂದಿಡಲು ಸಾಧ್ಯವಾಗಿರುವುದು ಸಂತಸದ ವಿಷಯ. > ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. (14 MB) ಧ್ವನಿ ಮುದ್ರಣದ ಕೃಪೆ ಪವನಜರವರಿಗೆ ಬಂದ ಎಮ್ ವಿ ಪಿ ಗಿಫ್ಟು - ಕ್ರಿಯೇಟಿವ್ ಮುವೋ ಎಮ್ ಪಿ ಥ್ರಿ ಪ್ರೇಯರಿನದ್ದು. ಮೊದಲನೆಯ ಪ್ರಯೋಗವಾದ್ದರಿಂದ ಧ್ವನಿ ಮುದ್ರಣ ಒಂದಷ್ಟು ಹೆಚ್ಚು ಕಡಿಮೆಯಾಗಿದೆ. ಸ್ವಲ್ಪ ನಾಯ್ಸ್ ಇರುವುದರಿಂದ ಜೋಪಾನವಾಗಿ ಸೌಂಡ್ ಇಟ್ಟುಕೊಂಡು ಕೇಳಿ. ಈ ಪಾಡ್ಕ್ಯಾಸ್ಟಿನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಸಂಪದ ಡಾಟ್ ನೆಟ್ಟಿನಲ್ಲಿ ಇದಕ್ಕಾಗಿ ತೆರೆದಿರುವ ಈ ಥ್ರೆಡ್ ನಲ್ಲಿ ಮರೆಯದೆ ದಾಖಲಿಸಿ. ವಂದನೆಗಳೊಂದಿಗೆ, ಹರಿ ಪ್ರಸಾದ್ ನಾಡಿಗ್. ಪೂರ್ಣಚಂದ್ರ ತೇಜಸ್ವಿಯವರ ಮನೆಗೆ ಭೇಟಿ ನೀಡಿದ ದಿನದಂದು ತೆಗೆದ ಕೆಲವು ಫೋಟೋಗಳು: ಇಸ್ಮಾಯಿಲ್, ಪವನಜ, ತೇಜಸ್ವಿ. ಇಸ್ಮಾಯಿಲ್, ಪವನಜ, ತೇಜಸ್ವಿ. ತೇಜಸ್ವಿಯವರ ಮನೆಯ ಅಂಗಳದ ತಾವರೆ ತೇಜಸ್ವಿಯವರ ಮನೆಯ ಅಂಗಳದ ತಾವರೆ ಸೂ: ನಿಮ್ಮ ಬಳಿಯೂ ಕನ್ನಡಕ್ಕೆ ಸಂಬಂಧಿಸಿದ ಯಾವುದೇ ಧ್ವನಿಮುದ್ರಣವಿದ್ದಲ್ಲಿ ಅದನ್ನು 'ಸಂಪದ'ದಲ್ಲಿ ಪ್ರಕಟಿಸಲು ನನಗೆ ಇ-ಮೇಯ್ಲ್ ಮೂಲಕ ಕಳುಹಿಸಿ.

ಪ್ರಶ್ನೆ ೧
ಒಬ್ಬ ಸಾಹಿತಿಯಾಗಿ ಸದಾ ವರ್ತಮಾನದ ರಾಜಕಾರಣಕ್ಕೆ ಸ್ಪಂದಿಸುತ್ತಾ ಬಂದಿರುವ ನೀವು ಈಗ ಅದರಲ್ಲೂ ವಿಶೇಷವಾಗಿ ಮಲ್ನಾಡಿನಲ್ಲಿ ಮೂಡಿಬಂದಿರುವ ಹೊಸ ರಾಜಕಾರಣ revolutionary polictics ಅಥವಾ ನಕ್ಸಲೀಯರು ಅಂತ ಏನು ಕರೀತಾರೆ ಇವರ ರಾಜಕಾರಣಕ್ಕೆ ಹೇಗೆ ಪ್ರತಿಕ್ರಿಯಿಸುತ್ತಿದ್ದೀರ? ಅನ್ನುವ ಒಂದು ಆಸಕ್ತಿ ನನಗಿದೆ. ಮತ್ತೊಂದು ಬರಹಕ್ಕೆ ಇಂತಹಾ ವಿಷಯಗಳನ್ನ discuss ಮಾಡ್ಲಿಕ್ಕೆ ಬೇಕಾದಂತಹ ಹೊಸ ಈಡಿಯಂಅನ್ನ ಕ್ರಿಯೇಟ್ ಮಾಡೋ ಬಗ್ಗೆ ತಮ್ಮ ಅಭಿಪ್ರಾಯ ಬೇಕಾಗಿದೆ.
ಉತ್ತರ
If you observe ನಕ್ಸಲೀಯರು ಇವ್ರೆಲ್ಲಾ ಇದ್ದಾರಲ್ಲ ಅವ್ರು ಬಹಳ ಮೈನರ್. ಯಾಕಂದ್ರೆ even naxal itself is disintegrating. ಸುಮ್ನೆ ಎಲ್ಲೋ ಭಯ, ಕಾಡಲ್ಲಿ ಒಂದಷ್ಟು ಜನ ಗುಂಪು ಕಟ್ಟುಕೊಂಡು ಎಷ್ಟು ಗ್ರೇಟ್ ಐಡಿಯಾಲೋಜಿಸ್ಟ್ ಆಗಿದ್ರುನು ಅದನ್ನ ಚಲಾವಣೆಗೆ ತಂದು ಇಲ್ಲಿಂದನೇ ಇವ್ರು ಅದನ್ನ ಇಂದು ಆಡಳಿತದ ಅಂಗವನ್ನಾಗಿ ಮಾಡ್ತೀವಿ ಅಂತ ಹೇಳೋದಿದೆಯಲ್ಲ ಅದು ಬಹಳ ಅಸಂಭವನೀಯ.ಆದ್ರಿಂದ ಅದನ್ನ ಅಷ್ಟು ಗಂಭೀರವಾಗಿ ಪರಿಗಣಿಸೋ ಅಗತ್ಯವಿಲ್ಲ. ಈಗ ಎಲ್ರಿಗೂ ಸಧ್ಯಕ್ಕೆ ಅವ್ರಿಂದ ತೊಂದ್ರೆ ಆಗ್ತಾ ಇದೆ. Somehow we must be able to pursuade these people to see the futility of whole thing ಯಾಕಂದ್ರೆ ನಕ್ಸಲ್ ಬಾರಿಯಲ್ಲೇ ನಕ್ಸಲೀಯರು ಕಮ್ಮಿಯಾಗಿ ಇದಾರೆ. ಅದಕ್ಕಿಂತ ಹಿಂದೆ ನೀವೆಲ್ಲ ಹುಟ್ಟೇ ಇರ್ಲಿಲ್ವೇನೋ , ಅಜಿತಾ ಅವರಿವರು ಕೇರಳಕ್ಕೆ ಹೋಗಿ ಆ ಟೆಲಿಫೋನ್ ಆಪರೇಟರ್ ತಲೆ ಕಡಿದು ಎಲ್ಲಾ ಮಾಡಿದ್ರು.ಅದು ಅಲ್ಲಿಗೆ ನಂದಿ ಹೋಯ್ತು. ಅದಕ್ಕೆ ಕಾರಣ ಏನಂದ್ರೆ ಇದಕ್ಕೆ corrosponding ಆಗಿ global movement ಒಂದಿಲ್ಲ.ಆದ್ದರಿಂದ ಇದಕ್ಕೆ it tends to have limitation ಆದ್ದರಿಂದ ಅವ್ರು ನಿಧಾನಕ್ಕೆ ಅರ್ಥಮಾಡಿಕೊಳ್ತಾರೆ. ಅಲ್ಲಿಯವರೆಗೆ we have to tolerate.

ಆದರೆ ಇನ್ನೊಂದು ಫಿನೋಮಿನ ನಡೀತಾ ಇದೆ which is very important ಏನೂಂತಾ ಹೇಳಿದ್ರೆ ಈಗ ಇದೂ ಒಂದು ಪಾರ್ಟಿ ಇಂಡಿಯಾ ದೇಶದಲ್ಲಿ. ಕಾಂಗ್ರೆಸ್ಸ್ ಮತ್ತು ಬಿಜೆಪಿ. ಇವರದು ದೊಡ್ಡ ಪಕ್ಷ ಆಗ್ಕೊಂಡು ಅಲ್ಲಿ ಪ್ರಧಾನಿ ಪಟ್ಟವನ್ನ ಉರುಳಿಸಿಕೊಳ್ತಾ ಇದ್ದಾರೆ.ಇಲ್ಲಿ while these people are teaching, are the people of India learning how to manage with multiple parties? ಈಗೇನಾಗ್ತಿದೆ ನೋಡಿ ನೀವು ಸೆಂಟ್ರಲ್ನಲ್ಲಿಯೂ ಕಮ್ಯುನಿಸ್ಟ್ ಪಾರ್ಟಿಯವರು ಮೊನ್ನೆ ಬಂದ್ ಘೋಷಣೆ ಮಾಡಿದ್ರು, ಹೌದಾ? ಇಲ್ಲಿ ದೇವೇಗೌಡರು ಸರ್ಕಾರದಲ್ಲೇ ಇದ್ದಾರೆ ಇವ್ರು.ಆದ್ರೂನೂ ದಿನ ಬೆಳಗಾದ್ರೆ ಸರ್ಕಾರದ ಇದರ ಬಗ್ಗೆ ಅಪೋಸಿಷನ್ ಪಾರ್ಟಿಗಳಿಗಿಂತ ಜೋರಾಗಿ ಅಪೋಸ್ ಮಾಡ್ತಾರೆ. ಅಂದ್ರೆ ಈ ಸಂದರ್ಭವನ್ನೇ ಉಪಯೋಗಿಸಿಕೊಂಡು ತಾವು ಜನರ ಮನಸ್ಸನ್ನ ಗೆಲ್ಲಬಹುದು ಅಂತ ಯೋಚನೆ ಮಾಡಿಕೊಂಡು ಸೆಂಟ್ರಲ್ ಗವರ್ಮೆಂಟ್ ಲೆವೆಲ್ನಲ್ಲಿ ಕಮ್ಯುನಿಸ್ಟ್ ಪಾರ್ಟಿಯವರು, ಕರ್ನಾಟಕದ ಮಟ್ಟದಲ್ಲಿ ಜನತಾದಳದೋವ್ರು ಇದ್ದಾ ರೆ. Now the question is see ಈಗ ದೇವೇಗೌಡರು ಎಷ್ಟು ಪ್ರಬಲವಾಗಿ ವಿರೋಧ ಪಕ್ಷವಾಗಿ ವರ್ತಿಸುತ್ತಿದ್ದಾರೆ ಅಂದ್ರೆ ಬಿಜೆಪಿಯವರು ಮಾತೇ ನಿಲ್ಲಿಸಿಬಿಟ್ಟಿದ್ದಾರೆ.ತಾವು ಏನು ಅನ್ನೋದೇ ಅವ್ರಿಗೆ ಕನ್ಫ್ಯೂಶನ್ ಆಗಿ ಹೋಗಿದೆ. ಈಗಿದೆಲ್ಲಾ ನೋಡ್ದಾಗ ಒಂದು ಪ್ರಶ್ನೆ ಮೂಡುತ್ತದೆ, ಈ ಯಾರಿಗೂನೂ ಮೆಜಾರಿಟಿ ಬರ್ಲಿಲ್ಲ ಸರ್ಕಾರ ರಚಿಸೋಕೆ ಆಗ್ಲಿಲ್ಲ ಅಂತೇಳಿ ಬಿಹಾರದಲ್ಲಿ ಮತ್ತೆ ಎಲೆಕ್ಷನ್ ಮಾಡಿದ್ರು. ಅದರ ಅಗತ್ಯ ಏನು? If Devegowda can act like an opposition party all the while being a member of ruling party why not Yediyurappa? ಈಗ ಯಾರಿಗೂ ಮೆಜಾರಿಟಿ ಸಿಗ್ದಿರೋ ಟೈಮಲ್ಲಿ ಎಲ್ರೂ ಸೇರ್ಕೊಂಡು ಸರ್ಕಾರ ರಚನೆ ಮಾಡಿ. ಈ ಅಪೋಸಿಷನ್ ಪಾರ್ಟಿ ಕೆಲಸನೂ ನೀವೇ ಮಾಡಿ. ಖಂಡಿತವಾಗೂ this is how it works at national government where in you can act like an opposition party as well as a ruling party and ದೇವೇಗೌಡ ಮತ್ತು ಸಿಪಿಎಮ್ನವರ ಆಕ್ಷನ್ ಹಿಂದೆ ಇರುವಂತಹ ತಾತ್ವಿಕ ಅಂಶವನ್ನ ಪರಿಗಣಿಸಿದಂಗೆ ಮಾರ್ಪಡುತ್ತೆ.

ಪ್ರಶ್ನೆ ೨
ಮತ್ತೊಂದು ಪ್ರಶ್ನೆ ಕನ್ನಡ ಸಾಹಿತ್ಯಕ್ಕೆ ಸಂಬದಿಸಿದಂತೆ. ಈ ಲಿಬರಲೈಸೇಶನ್ ಯುಗ ಶುರುವಾದ್ಮೇಲೆ ಯಾರೆಲ್ಲಾ ಬರೆದರೋ ಅದು liberalization era ಯಾರೆಲ್ಲಾ ಬರೆದರೋ ಅವರಲ್ಲಿ ಕನ್ನಡ ವಿಮರ್ಶೆ ಅವರನ್ನ identify ಮಾಡ್ಲೇ ಇಲ್ಲ ಅವರನ್ನ ಗುರುತಿಸಲೇ ಇಲ್ಲ. ಲಿಬರಲೈಸೇಶನ್ ನಂತರದ ಯುಗಕ್ಕೆ respond ಮಾಡ್ದೋರ್ಯಾರೂ ರೆಕಾರ್ಡ್ ಆಗ್ಲೇ ಇಲ್ಲ ಅಂತಹ ಒಂದು ಹೇಳಿಕೆ ಆಗಾಗ ಹೊಸ ತಲೆಮಾರಿನ ಕೆಲ ವಿಮರ್ಶಕರಿಂದ ಬರ್ತಾ ಇರ್ತದೆ. ನೀವು ಹೇಗೆ respond ಮಾಡ್ತೀರಾ? ಯಾಕಂದ್ರೆ ನೀವು ಎರಡೂ ಸಂದರ್ಭದಲ್ಲಿ ನೋಡಿದ್ದೀರಿ ಮತ್ತು ಎರಡಕ್ಕೂ ತೀವ್ರವಾಗಿ ಪ್ರತಿಕ್ರಿಯಿಸಿದ್ದೀರಿ.
ಉತ್ತರ
ನನಗೆ ಬಹುಶಃ ಬೇರೆ formatಲ್ಲಿ ಬರೆಯೋಕೆ ಯೋಚನೆ ಮಾಡ್ಬೇಕು ಅನ್ಸತ್ತೆ. ನಂದೇ ಆದ ರೀತಿನಲ್ಲಿ ನಾನು ಎಕ್ಸ್ಪೆರಿಮೆಂಟ್ ಮಾಡ್ತಾ ಇದ್ದೀನಿ. ಪ್ರಯೋಗ ಮಾಡಿ ನೋಡ್ತಾ ಇದ್ದೀನಿ. ಹೇಗೆ how we can find out a new expression for this situation ಅಂತೇಳೀ.ಅದಕ್ಕೆ ನಮ್ಮ ಹಳೇ ರೀತಿಯ ಕ್ರಮಗಳಿದ್ದಾವಲ್ಲ expression methodology ಅದು update ಅಗಿಲ್ಲ ಈಗಿನ situation it is immensely complex so ಏನಾಗತ್ತೆ ಒಂದು ಕಥಾ ಹಂದರದಲ್ಲಿ ಹೇಳೋದಕ್ಕೆ ಆಗೋದಿಲ್ಲ.ಆಯ್ತಪ್ಪ ಇರೋದನ್ನ ಹೆಂಗಿತ್ತೋ ಹಂಗೇ ರೆಕಾರ್ಡ್ ಮಾಡೋಣ ಅಂತ ಹೋದ್ರೆ ಕೊಲಾಜ್ ಕಲಾಕೃತಿಗಳನ್ನ ನೋಡಿದ್ದೀರಾ ನೀವು? ಕಟ್ ಪೀಸ್ಗಳು ಒಂದರಮೇಲೊಂದರಮೇಲೊಂದು ಓವರ್ಲ್ಯಾಪ್ ಆಗ್ತಾ ಹೋಗ್ತದಲ್ಲಾ ಆ ರೀತಿಯ ಬರವಣಿಗೆಗೆ ಬರ್ತೀವಿ, ಸೋ ನೋಡೋಣ ಅಂಗಿದ್ರೆ ಅದುನ್ನೂ ಪ್ರಯತ್ನ ಮಾಡಿ ನೋಡೋಣ.If we can find out an appropriate methodology of expression we can really write a contemporary theme otherwise very difficult, grammatical changes ಸಿಕ್ಕಾಪಟ್ಟೆಯಾಗಿದೆ.

ಪ್ರಶ್ನೆ ೩
ಅಂದರೆ ನೀವು ಹೇಳ್ತಿರೋದಂದ್ರೆ ಚಿದಂಬರ ರಹಸ್ಯ, ಜುಗಾರಿ ಕ್ರಾಸ್ಗಳ ಮೂಲಕ ನೀವು ಹೇಳ್ತಿರೋ ?
ಉತ್ತರ
ಆಗಿನ ಸಮಸ್ಯೇನೇ ಬೇರೆ ಈಗಿನ ಸಮಸ್ಯೇನೇ ಬೇರೆ

ಪ್ರಶ್ನೆ ೪
ಅಲ್ಲ ಅಲ್ಲ ಆವಾಗೇನೇ holistic ಆಗೇ ನೋಡಿದ್ರಿ, ಯಾಕಂದ್ರೆ ಜುಗಾರಿ ಕ್ರಾಸಲ್ಲಿ
ಉತ್ತರ
ಆಗಿನ್ನೂ ಕಥಾ ಹಂದರದಲ್ಲಿತ್ತು,continuity ಇತ್ತು beginning ಇತ್ತು end ಇತ್ತು. ಈಗ ಬಾರೀ ಕಷ್ಟದಲ್ಲಿಟ್ದಿಟ್ಟಿದ್ದಾರೆ. ಕಾರಂತರಿದ್ದಾಗ ನೋಡಿ ಹೇಗಿತ್ತು, ಕಾರಂತರಾದ ನಂತರ ಕುವೆಂಪು ಬಂದಾಗ ಅವರಿಗೂ ಪರಿಸರಕ್ಕೂ ಇದ್ದ relationship ,ಕಾರಂತರಿಗೂ ಪರಿಸರಕ್ಕೂ ಇದ್ದ relationship, ಜುಗಾರಿಕ್ರಾಸಲ್ಲಿ ಇರುವ ಪರಿಸರದ relationship ವ್ಯತ್ಯಾಸ ಇದೆ ಅಂತ ಹೇಳೀದ್ನಲ್ಲಾ ಕರ್ವಾಲೋ ಇಂದ ಜುಗಾರಿಕ್ರಾಸ್ವರೆಗಿನ variation ಇದೆಯಲ್ಲಾ ಅದು update ಆಗ್ಬಿಟ್ತು.

ಪ್ರಶ್ನೆ ೫
ಈಗ ನಿಮ್ಮ ಮುಂದಿನ ಯಾವ ಕೃತಿ ಬರ್ತಾ ಇದೆ?
ಉತ್ತರ
ಮಾಯಾಲೋಕ ಅಂತ ಬರೀತಾ ಇದ್ದೀನಲ್ಲ

ಪ್ರಶ್ನೆ ೬
ಅದು ಯಾವ ರೀತಿ ಇದೆ?
ಉತ್ತರ
ನೋಡೋಣ ಎಲ್ಲಾ attraction ನಿಂದ ಮಾಡೋದ್ರಿಂದ ಇದು ಹಿಂಗೇ ಅಂತ ಒಂದು ಸಿದ್ದಿ ಸದ್ಯದ ರಜದಲ್ಲಿ ಹೇಳೋಕಾಗೋದಿಲ್ಲ, ಬಹಳ ಕಷ್ಟ.

ಪ್ರಶ್ನೆ ೭
ಸರ್ ನೀವು ಸ್ವರೂಪದ ನಂತರ ತಕ್ಕೋಂಡ change ಇದೇ ರೀತಿಯ ಅನಿವಾರ್ಯದಾಗಿತ್ತಾ?
ಉತ್ತರ
ಹೆಚ್ಹು ಕಮ್ಮಿ

ಪ್ರಶ್ನೆ ೮
ನಾನೊಂದು ಪ್ರಶ್ನೆ ಕೇಳ್ತೇನೆ.ಸ್ವಲ್ಪ ಬೇರೆ, ಆಗೊಂದ್ಸಲ ಕೇಳಿದ್ದೆ actually ಈಗ ಕನ್ನಡ ಮಾಧ್ಯಮ ಇಂಗ್ಲೀಷ್ ಮಾಧ್ಯಮ ಅಂತ ಬಹಳ ಚರ್ಚೆ ನಡೀತಾ ಇದೆ. ಈ ಹಳ್ಳಿಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲೀಷನ್ನ ಹೇಳೀ ಕೊಡಬೇಕೆಂದು ಹೇಳುವವ್ರದ್ದು ಆರೋಪ. ಏನಂದ್ರೆ ಗ್ರಾಮೀಣ ಪ್ರದೇಶದಿಂದ ಬಂದಿರುವವರ ಒಂದು ಭೌದ್ಧಿಕ ಮಟ್ಟ ಜಾಸ್ತಿ ಇಲ್ಲ ಆದ್ರಿಂದ ಅವರು ಮುಂದಿನ ಇಂಟರ್ವ್ಯೂಗಳಲ್ಲಿ ಅಲ್ಲಿ ಇಲ್ಲಿ ಎಲ್ಲಾ ಫೇಲ್ ಆಗ್ತಾರೆ. ಆದ್ರಿಂದ ಒಂದನೇ ತರಗತಿಯಿಂದಲೇ ಅವರಿಗೆ ಇಂಗ್ಲೀಷ್ ಹೇಳೀಕೊಡಬೇಕು ಅಂತ ಅವ್ರು ಹೇಳೋದು. ನನ್ನ ಅಭಿಪ್ರಾಯ ಏನಂದ್ರೆ ಅವ್ರು ಓಂದನೇ ತರಗತಿಯಿಂದ ಇಂಗ್ಲೀಷ್ ಹೇಳಿಕೊಡಬೇಕಾಗಿರೋದು ಈ ಗ್ರಾಮೀಣ ಮಟ್ಟದಲ್ಲಿ ಅವರಿಗೆ ಬೌದ್ಧಿಕಮಟ್ಟ ಹೆಚ್ಚು ಯಾಕಿಲ್ಲ ಅಂದ್ರೆ ಕನ್ನಡ ಭಾಷೆಯಲ್ಲಿ ವಿಷಯ ಸಾಹಿತ್ಯ ಇಲ್ಲ, ವಿಷಯ ಸಾಹಿತ್ಯ ಅಂದ್ರೆ ವಿಜ್ಞಾನ ಮತ್ತು ತಂತ್ರಜ್ಞಾನ ವೈದ್ಯಕೀಯ ಎಲ್ಲವೂ ಬರಬೇಕು. ಇದರ ಸಾಹಿತ್ಯ ರಚನೆ ಯಾರೂ ಮಾಡೇ ಇಲ್ಲ.ಸಾಹಿತಿಗಳು ವಿಜ್ಞಾನ ಕಲಿತು ಬರೀಬೇಕು.ಆದ್ರೆ ಬರ್ದಿಲ್ಲ. ಇದರಿಂದ ಅವರ ಮಟ್ಟ ಕೆಳಗಿಳಿದಿದೆ ಅಂತ ನನ್ನ ಅಭಿಪ್ರಾಯ.ನೀವೇನೇಳ್ತೀರಾ?
ಉತ್ತರ
ಅದು ಏನಾಗತ್ತೆ you see ಎಲ್ಲ ಇದರ ಬಗ್ಗೆ ಆಗ್ಲೇ ಕುತ್ಕೊಂಡು ಯೋಚನೆ ಮಾಡಿದ್ರು. ವಾಸ್ತವವಾಗಿ ಹಿಂದೊಮ್ಮೆ ಹಿಂದೂಧರ ಹೊನ್ನಾಪುರ ಅವ್ರೆಲ್ಲಾ ನನ್ಜೊತೆಗೆ ಇದ್ರು. ನಾನು ಮೊದಲು ಕನ್ನಡ ಇಂಗ್ಲೀಷ್ ನಾಲ್ಕನೇ ಕ್ಲಾಸಿನಿಂದ ಹೇಳಿಕೊಡಬೇಕು ಒಂದನೇ ಕ್ಲಾಸಿನಿಂದ ಹೇಳಿಕೊಡೋದು ಮೆಲ್ಲಗೆ ಕನ್ನಡ ಮಾಧ್ಯಮಕ್ಕೆ ಕುತಂತ್ರ ಪ್ರಯೊಗಕ್ಕೆ ಹಾಕಿರೋ ಮುನ್ನಡೆ ಅಂತ ನನ್ನ statement ಇದ್ದಿದ್ದು. ಆದರೆ ನಾನು ಹೋದ್ಮೇಲೆ ಇವ್ರತ್ರೆಲ್ಲಾ ಕೂತ್ಕೊಂಡು ಮಾತಾಡಿ ನೀವು ಹೇಳಿರೋದು ಅಷ್ಟು ಸತ್ಯ ಅಲ್ಲ, ಯಾಕಂದ್ರೆ ಈ ಕನ್ನಡ ಮಾಧ್ಯಮದ ಶಾಲೆ ಇರ್ತಕ್ಕಂತದ್ದು ಸರ್ಕಾರಿ ಶಾಲೆಗಳಲ್ಲಿ, ಎಲ್ಲಾ estimation ಪ್ರಕಾರ ಸರ್ಕಾರೀ ಶಾಲೆಗಳಲ್ಲೇ ಅತ್ಯುತ್ತಮವಾದ qualified ಟೀಚರ್ಸ್ ಇರೋದಂತೆ,ಈ conventಗಳಂತಹ ದೊಡ್ಡಿಗಳನ್ನ ತಕ್ಕೋಂಡಿದ್ದಾರಲ್ಲ ಅಲ್ಲಿ ಏನೇನೂ ಇಲ್ಲಂತೆ. ಇವ್ರು ಇಲ್ಲೇ qualified ಆಗಿದ್ದಾರೆ.