ಸಂಪದದ ಗೆಳೆಯರಿಗಾಗಿ ಈ ಬಾರಿ ಲಿಂಗದೇವರು ಹಳೆಮನೆಯವರ ಸಂದರ್ಶನ.
ಶ್ರೀ ಹಳೆಮನೆಯವರು ೧೯೭೩ರಿಂದ ಮೈಸೂರಿನ ಕೇಂದ್ರೀಯ ಭಾಷಾ ಸಂಸ್ಥೆ, ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜಸ್ ನಲ್ಲಿ
ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದ ಪ್ರಮುಖ ನಾಟಕಕಾರ, ಸಾಂಸ್ಕೃತಿ ಚಿಂತಕ, ಅಂಕಣಕಾರ, ಭಾಷಾ ತಜ್ಞ ಹಳೆಮನೆಯವರು ಈ ಸಂದರ್ಶನದಲ್ಲಿ
೧.ಕನ್ನಡ ಶಾಸ್ತ್ರೀಯ ಭಾಷೆ
೨. ಕನ್ನಡದ ರಂಗಭೂಮಿ
೩. ಅನ್ಯಭಾಷಿಕರಿಗಾಗಿ ಕನ್ನಡ ಕಲಿಸುವ ಕೆಲಸ
೪. ಜಾಗತೀಕರಣ
ಈ ಸಂಗತಿಗಳ ಬಗ್ಗೆ ನಮ್ಮೊಡನೆ ಸಂವಾದ ನಡೆಸಿದ್ದಾರೆ.
ಶ್ರೀ ಹಳೆಮನೆಯವರು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಹಾಮಾನಾ ಪ್ರಶಸ್ತಿ ಮತ್ತು ಕೆವಿ ಸುಬ್ಬಣ್ಣ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ಭಾಷಾ ತಜ್ಞರಾಗಿ
ಜರ್ಮನಿಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಮಾತುಗಳು ಚರ್ಚೆ, ಸಂವಾದಗಳಿಗೆ ಅರ್ಹವಾಗಿವೆ.

 /> ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. (25 MB)

ಚಿತ್ರ: ಗೋವಿಂದ

‌

ಇವತ್ತು ಜನವರಿ ೮ ೨೦೦೬ ನೇ ಇಸವಿ. ಮೈಸೂರಿನಲ್ಲಿ ಲಿಂಗದೇವರು ಹಳೆಮನೆ ಅವರ ಜೊತೆಯಲ್ಲಿ ಮಾತಾಡುತ್ತ ಕುಳಿತಿದ್ಡೇವೆ. ಸಂಪದ ಗೆಳೆಯರಿಗೆ ಗೊತ್ತಿರಬಹುದು, ಲಿಂಗದೇವರು ಹಳೆಮನೆಯವರು ಕನ್ನಡದ ಒಬ್ಬ ಮುಖ್ಯ ನಾಟಕಕಾರರು. ಕಳೆದ ಸುಮಾರು ೩ ದಶಕಗಳಲ್ಲಿ ಅವರು ಅನೇಕ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ,ಸ್ವಂತ ಬರೆದಿದ್ದಾರೆ,ನಿರ್ದೇಶನ ಮಾಡಿದ್ದಾರೆ, ನಟಿಸಿದ್ದಾರೆ, ಅದು ಅವರ ಪ್ರತಿಭೆಯ ಒಂದು ಮುಖ.

ಇನ್ನೊಂದು ಅವರು ಬಹಳ ದೊಡ್ಡ ಭಾಷಾ ಶಾಸ್ತ್ರಜ್ಞರು. ಮೈಸೂರಿನಲ್ಲಿರುವ Central Institute of Indian Languages (ಭಾರತೀಯ ಭಾಷಾ ಸಂಸ್ಥಾನ)ದಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ. ಅದರಲ್ಲಿ ಅವರು ಮಾಡಿರುವ ಚಟುವಟಿಕೆಗಳಲ್ಲಿ ಬಹಳ ಮುಖ್ಯವಾದದ್ದು ಅಂದರೆ ಕನ್ನಡೇತರರಿಗೆ ಕನ್ನಡ ಕಲಿಸುವ Kannada Online ಒಂದು ಪ್ರೋಗ್ರಾಮ್ ಅನ್ನು ಅವರು ನಿರ್ವಹಿಸುತ್ತಾ ಇದ್ದಾರೆ.

ಇದರ ಜೊತೆಗೆ ಅವರು ಪ್ರಸಿದ್ಧ ಅಂಕಣಕಾರರೂ ಹೌದು. ಅವರ ಅಂಕಣಗಳ ಪುಸ್ತಕ ಕೂಡ ಬಂದಿದೆ. ಒಳ್ಳೆಯ ಅಧ್ಯಾಪಕರೂ , ಸ್ನೇಹ ಜೀವಿಗಳು, ವ್ಯವಸಾಯದಲ್ಲಿ ಆಸಕ್ತಿ ಇರುವವರು. ಸಾಮಾಜಿಕವಾಗಿ ನಡೆಯುತ್ತಾ ಇರುವ ಘಟನೆಗಳಿಗೆ ತುಂಬ Active ಆಗಿ ಸ್ಪಂದಿಸುತ್ತ ನಮ್ಮ ಜನಗಳ ವಿಚಾರದ ದಿಕ್ಕನ್ನು ರೂಪಿಸುತ್ತ ಇರುವವರಲ್ಲಿ ಅವರು ಒಬ್ಬರು ಮುಖ್ಯವಾದವರು. ಇವತ್ತು ಅವರ ಮನೆಯಲ್ಲಿ ಕೂತುಕೊಂಡು ನಮ್ಮ ಈ ಹೊತ್ತಿನ ಕೆಲವು ಸಂಗತಿಗಳನ್ನು ಅವರ ಜೊತೆ ಮಾತಾಡೋದು ನಮ್ಮ ಉದ್ದೇಶ.

ಪ್ರಶ್ನೆ ೧
ನಮಸ್ಕಾರ ಹಳೆಮನೆಯವರಿಗೆ,ಹಳೆಮನೆಯವರೆ ಈಗ ಒಂದು ದೊಡ್ಡ ಚರ್ಚೆ ನಡೀತಾ ಇದೆ. ನೀವೂ ಕೂಡ ನಿನ್ನೆ ಅದರ ಬಗ್ಗೆ ಮಾತಾಡಿದ್ರಿ. ಕೆಲವರು ಪ್ರಾಣ ಕೊಡೊವುದಕ್ಕೆ ಉಪವಾಸಮಾಡ್ತಾ ಇದ್ದಾರೆ. ನೀವು ಶಾಸ್ತ್ರೀಯ ಭಾಷೆ ಬಗ್ಗೆ ಭಾಷಾ ತಜ್ಞರಾಗಿ ನಿಮ್ಮ ಕೆಲವು ಮಾತುಗಳನ್ನು ಹೇಳುತ್ತೀರಾ?
ಉತ್ತರ
ಶಾಸ್ತ್ರೀಯ ಭಾಷೆಯನ್ನು ಕುರಿತು ಒಂದು ಸಣ್ಣ ಪುಸ್ತಿಕೆಯನ್ನು ಈಗ ಕನ್ನಡ ಸಾಹಿತ್ಯ ಪರಿಷತ್ತಿಗೆ ಬರೆದು ಕೊಟ್ಟಿದ್ದೇನೆ, ಅವರು ಈಗಾಗಲೇ Publish ಮಾಡುವವರಿದ್ದಾರೆ. ಈಗ ಶಾಸ್ತ್ರೀಯ ಭಾಷೆಯನ್ನು ಕಳೆದ ಒಂದು ವರ್ಷದಿಂದ ಹೆಚ್ಚು ಹೆಚ್ಚು ವ್ಯಾಪಕವಾಗಿ ಚರ್ಚೆ ಮಾಡುತ್ತಾ ಬಂದಿದ್ದೀವಿ. ಇದಕ್ಕೆ ಕಾರಣವೇನೆಂದರೆ ತಮಿಳು ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನ ಮಾನವನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

ತಮಿಳು ಭಾಷೆಗೆ ಘೋಷಿಸಿದ ತಕ್ಷಣವೇ ಕನ್ನಡದ ವಿದ್ವಾಂಸರುಗಳು ಕನ್ನಡ ಭಾಷೆಗೂ ಸಹ ಆ ಸ್ಥಾನ ಮಾನ ಸಿಗಬೇಕು ಅಂತಹ ಕಳೆದ ಒಂದು ವರ್ಷದಿಂದ ಹೋರಾಟವನ್ನು ಮಾಡ್ತಾ ಇದ್ದಾರೆ ಮತ್ತು ಕನ್ನಡ ಭಾಷೆಗೆ ಯಾಕೆ ಈ ಸ್ಥಾನ ಮಾನ ಸಿಗಬೇಕು ಅಂತಹ ಅನೇಕ ಕಾರಣಗಳನ್ನು ಸಾಹಿತ್ಯಿಕವಾಗಿ , ಭಾಷ್ ಯಿಕ ವಾಗಿ ಕೊಡುವಂಥ ಪ್ರಯತ್ನವನ್ನು ಮಾಡುತ್ತ ಇದ್ದಾರೆ.

ಒಂದು ಅಂಶ ಏನೆಂದರೆ ತಮಿಳು ಭಾಷೆಗೆ ಈ ಸ್ಥಾನ ಮಾನವನ್ನು ಕೊಡೊದಿಕ್ಕೆ ಕೇಂದ್ರ ಸರ್ಕಾರ ೪ criteria ಗಳು ಅಥವಾ ಒಂದು ರೀತಿ ಚಹರೆಗಳನ್ನು ಗುರುತಿಸಿದೆ. ಅವುಗಳನ್ನೊಳಗೊಂಡಿದ್ದರೆ ನಾವು ಶಾಸ್ತ್ರೀಯ ಭಾಷೆ ಅಂತ ಗುರುತಿಸಬೇಕು. ಆ ನಾಲ್ಕು ಚಹರೆಗಳಿಗೆ ಕನ್ನಡ ಭಾಷೆಯನ್ನು ಕೂರಿಸುವ ಕೆಲಸವನ್ನು ನಮ್ಮ ವಿದ್ವಾಂಸರುಗಳು ಮಾಡುತ್ತಾ ಇದ್ದಾರೆ. ನನ್ನ ದೃಷ್ಟಿಯಲ್ಲಿ ಅದು ಸರಿಯಾದ ಪ್ರಯತ್ನವಲ್ಲ ಅಂತ ನನ್ನ ಆಲೋಚನೆ. ಯಾಕೆ ಅಂತ ಅಂದರೆ, ಚಹರೆಗಳನ್ನು ತಮಿಳು ಭಾಷೆಯನ್ನು ಗಮನದಲ್ಲಿಟ್ಟುಕೊಂಡು ಅದನ್ನ ಗುರುತಿಸಿದ್ದಾರೆ ಅನ್ನೋದು ಸ್ಪಷ್ಟ. ಇದರ ಹಿಂದೆ ದೊಡ್ಡ ರಾಜಕೀಯ ಒತ್ತಡಗಳು ಕೆಲಸ ಮಾಡಿವೆ.

ಯಾಕೆ ಅಂದರೆ ತಮಿಳಿಗೆ ಶಾಸ್ತ್ರೀಯ ಭಾಷೆಯನ್ನು ಕಲ್ಪಿಸಿಕೊಡಬೇಕು ಅಂತ ಹೇಳಿ ೨೦ ನೆಯ ಶತಮಾನದ ಪ್ರಾರಂಭದಿಂದಲೂ ಒಂದು ರೀತಿಯ ಒತ್ತಡವನ್ನು ಕೇಂದ್ರ ಸರ್ಕಾರದ ಮೇಲೆ ತಮಿಳು ಭಾಷಾ ಸಮುದಾಯ ತರುತ್ತಾ ಇದೆ. ಅದಕ್ಕೆ ಸಾಕಷ್ಟು ಐತಿಹಾಸಿಕವಾದಂತಹ ಆಧಾರಗಳು ನಮಗೆ ಇವೆ.ಆದರೆ ನಿಜವಾದಂತಹ ಪ್ರಯತ್ನ ಶುರುವಾಗಿದ್ದು ೨೦೦೦ ದಲ್ಲಿ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಹಾರ್ಟ್ ಎನ್ನುವ ತಮಿಳು ವಿದ್ವಾಂಸ ಅಮೇರಿಕದವರು. ಅವರು ಈ ಇಂಟರ್ನೆಟ್ , ಅಂತರ್ಜಾಲದಲ್ಲಿ ಒಂದು ಲೇಖನವನ್ನು ಪ್ರಕಟಿಸಿದರು. ಆ ಲೇಖನದಲ್ಲಿ ತಮಿಳು ಶಾಸ್ತ್ರೀಯ ಭಾಷೆಗೆ ಹೇಗೆ ಯೋಗ್ಯ ಅನ್ನುವುದನ್ನು ಚರ್ಚೆ ಮಾಡ್ತಾ ಕೆಲವು ಚಹರೆಗಳನ್ನು ಶಾಸ್ತ್ರೀಯ ಭಾಷೆಗೆ ರೂಪಿಸಿದರು.ಇವತ್ತು ಕೇಂದ್ರ ಸರ್ಕಾರ ಏನು ಚಹರೆಗಳನ್ನು ಒಪ್ಪಿಕೊಂಡಿದೆ ಅದು ಹೆಚ್ಚು ಕಡಿಮೆ ಹಾರ್ಟ್ ಅವರು ರೂಪಿಸಿರುವ ಚಹರೆಗಳೇ!.ಆದ್ದರಿಂದಾಗಿ ಇದು ತಮಿಳು ಭಾಷೆಯನ್ನು ನೇರವಾಗಿ ಗಮನದಲ್ಲಿಟ್ಟುಕೊಂಡದ್ದು. ಉದಾಹರಣೆಗೆ ೧೦೦೦ ವರ್ಷಗಳ ಇತಿಹಾಸ ಆ ಭಾಷೆಗೆ ಇರಬೇಕುವೆನ್ನುವ ಒಂದು ಲಕ್ಷಣವನ್ನು ಹೇಳುತ್ತಾರೆ. ಕನ್ನಡ ಭಾಷೆಗೆ ೧೦೦೦ ಸಾವಿರ ವರ್ಷ ಇದೇ ಅಂತ ಅನ್ನಬಹುದು. ಸಾಕಷ್ಟು ಆಧಾರಗಳಿವೆ. ಇತ್ತೀಚೆಗೆ ಇದ್ದಕ್ಕಿದ್ದ ಹಾಗೆ ೧೫೦೦ ವರ್ಷಕ್ಕೆ ಏರಿಸಿದರು. ಆನಂತರ ಏನು ಮಾಡಿದರು ಅಂದರೆ ,ಒಂದು ಭಾಷೆಯ ಸಾಹಿತ್ಯ ಇನ್ನೊಂದು ಭಾಷೆಯಿಂದ ಪ್ರಭಾವಿತಗೊಂಡಿರಬಾರದು ೩ನೇ ಯ ಒಂದು ಚಹರೆಯನ್ನು ಹಾಕಿದ್ದಾರೆ. ಅದು ಕನ್ನಡಕ್ಕೆ ಸ್ವಲ್ಪ ಕಷ್ಟ ಆಗ್ತಾ ಇದೆ. ನಮ್ಮವರು ಅದನ್ನು ಹೊಂದಿಸುವಂಥಾ ವ್ಯಥ ಪ್ರಯತ್ನವನ್ನು ಮಾಡ್ತಾ ಇದ್ದಾರೆ. ಆದ್ದರಿಂದ ನನ್ನ ಸಲಹೆ ಏನು ಅಂತ ಅಂದರೆ ,ನೀವು ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥ್ಹಾನಮಾನ ತಂದುಕೊಡುವುದೇ ಆದರೆ,ಭಾಷೆ ಆದರೆ ಕನ್ನಡಕ್ಕೆ ವಿಶೇಷವಾಗಿರುವಂಥಾ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮೂಲಚಹರೆಗಳಲ್ಲಿ ವ್ಯತ್ಯಾಸ ಮಾಡುವ ಹಾಗೆ ನೋಡಿಕೊಳ್ಳಬಹುದು.

ಆಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಪಡೆದುಕೊಳ್ಲಲಿಕ್ಕೆ ಸಾಧ್ಯ ಅಂತ ನನ್ನ ಅನಿಸಿಕೆ. ಶಾಸ್ತ್ರೀಯ ಸ್ಥಾನಮಾನ ಪಡೆಯೋದರಿಂದ ಕನ್ನಡ ಭಾಷೆಗೆ ಆರ್ಥಿಕವಾದ ಅನುಕೂಲ. ಅದರಲ್ಲಿ ಅನುಮಾನವೇನು ಇಲ್ಲ. ತಮಿಳು ಭಾಷೆಯವರು ಈಗಾಗಲೇ ಅಷ್ಟು ಕೋಟಿ ಬಂದಿ ಇಷ್ಟು ಕೋಟಿ ಬಂದಿದೆ ಅಂತ ನಮ್ಮ ಪತ್ರಿಕೆಗಳಲ್ಲಿ ಚರ್ಚೆ ನಡೀತಾ ಇದೆ. ವಾಸ್ತವವಾಗಿ ಅಲ್ಲಿ ಕೇಂದ್ರ ಸರ್ಕಾರ ಯಾವುದೇ ಹಣವನ್ನು ನಮೂದಿಸಿಲ್ಲ. ಹಣ ನಮೂದಿಸುವ ಬದಲು ಚಟುವಟಿಕೆಗಳನ್ನು ನಮೂದಿಸಿದ್ದಾರೆ. ಚಟುವಟಿಕೆಗಳ ಮುಖಾಂತರ ಹಣ ಬಂದೇ ಬರುತ್ತದೆ ಅನ್ನುವುದು ಸ್ಪಷ್ಟ. ಅಂತಾರಾಷ್ತ್ರೀಯ ಮತ್ತು ರಾಷ್ತ್ರೀಯ ಮಟ್ಟದ ಪ್ರಶಸ್ತಿಗಳನ್ನು ಇಟ್ಟಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸಾಕಷ್ಟು ಹಣ ಸಿಗುತ್ತದೆ ಮತ್ತು ಅಧಿಕೃತ ವಾಗಿ ಅದು ಬೇರೆ ಬೇರೆ ವಿಶ್ವ ವಿದ್ಯಾಲಯಗಳಲ್ಲಿ ಒಂದು ಅಧ್ಯಯನದ ವಸ್ತುವಾಗುತ್ತದೆ , ಪೀಠ ಪ್ರಾರಂಭವಾಗುತ್ತದೆ. ಇವೆಲ್ಲವೂ ಒಂದು ರೀತಿಯಲ್ಲಿ ಆರ್ಥಿಕವಾಗಿ ಸೌಲಭ್ಯ ಸಿಗುವುದು ಸರಿಯೇ. ಕನ್ನಡಕ್ಕೆ ಅದರದ್ದೇ ಆದ ವಿಶಿಷ್ಟ ವಾದ ಸ್ಥಾನಮಾನ ಇದೆ. ತಮಿಳಿನ ನಂತರದ ಒಂದು ಪ್ರಾಚೀನತೆ ಆ ಭಾಷೆಗೆ ಇದೆ ಅಂತ ನಾವು ಒಪ್ಪಿಕೊಳ್ಳಬೇಕಾಗಿದೆ. ಆದರೆ ಈಗ argument ಮಾಡುತ್ತಾ ಇರುವವರು ಏನು ಮಾಡ್ತಾ ಇದ್ದಾರೆ ಅಂತ ಹೇಳಿದ್ರೆ ಉಲ್ಲೇಖಗಳನ್ನು ಆಧಾರಗಳಿಗೆ ರೂಪಿಸುತ್ತಾ ಇದ್ದಾರೆ. ಉಲ್ಲೇಖಗಳು ಯಾವತ್ತೂ ಆಧಾರ ಆಗೋದಿಲ್ಲ ಅನ್ನೋದು ನ್ನನ ಸ್ಪಷ್ಟವಾದ ಅಭಿಪ್ರಾಯ.

ಪ್ರಶ್ನೆ ೨
ಇನ್ನೊಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ ಇಲ್ಲಿ ನನಗೆ, ಸಂಸ್ಕೃ ತವನ್ನು ಹೊರತು ಪಡಿಸಿದರೆ ಯಾವ ಭಾರತೀಯ ಭಾಷೆಯಲ್ಲಿ academic discipline ಹುಟ್ಟಿಕೊಂಡಿದ್ದು ಇದೆಯಾ?ಎಲ್ಲಾ ಭಾಷೆಗಳು ಸಂಸ್ಕೃತದಿಂದ ಆಯಾ ಭಾಷೆಗಳಿಗೆ ಅನುವಾದ ಮಾಡಿದ್ದೇ ಹೊರತು ಇನ್ನು ಯಾವುದೇ ಬಗೆಯ ಶಾಸ್ತ್ರ ಸಾಹಿತ್ಯ ಯಾವುದೇ ಭಾಷೆಯಲ್ಲಿ ಹುಟ್ಟಿದೆ ಅಂತ ಅನ್ನಿಸುತ್ತಾ?
ಉತ್ತರ
ಇದು ಬಹಳ ಮುಖ್ಯವಾದಂತಹ ಪ್ರಶ್ನೆ . ತಮಿಳು ಭಾಷೆ ಸಂಸ್ಕೃತ ಭಾಷೆಯಿಂದ ಪ್ರಭಾವಗೊಂಡಿಲ್ಲ ಎಂದು ಬಹಳ ಸತತವಾ ಗಿ ಅಲ್ಲಿನ ವಿದ್ವಾಂಸರುಗಳು ಹೇಳುತ್ತಾ ಬಂದಿದ್ದಾರೆ . ಆದರೆ ನನ್ನ ದೃಷ್ಟಿಯಲ್ಲಿ ಇವತ್ತಿಗೂ ಸಹ ತಿರುವಳ್ಳುವರ್ ವೇದಗಳು ಮತ್ತು ಉಪನಿಷತ್ತಿನಿಂದ ಪ್ರಭಾವಗೊಂಡಿಲ್ಲ ಎಂದು ಹೇಳುವಂತಹದ್ದು ಕಷ್ಟ. ಆ ರೀತಿಯ ಒಂದು ಅನುಮಾನದಿಂದ ಅದು ಮುಕ್ತವಾಗಿಲ್ಲ ಅಂತ ನಾನು ತಿಳಿದುಕೊಂಡಿರುವುದರಿಂದ ಅವರ ಇಡೀ ವಾದವನ್ನು ಸಾರಾ ಸಗಟಾಗಿ ತಿರಸ್ಕರಿಸುತ್ತೇನೆ .

ಅದಕ್ಕೆ ಇದನ್ನು ಶಾಸ್ತ್ರೀಯಭಾಷೆ ಅನ್ನುವು ದು misnomer ಆಗತ್ತೆ . ಅದರ ಬದಲು ಪ್ರಾಚೀನ ಭಾಷೆಗ ಳು ಅಂತ ಕರೆದರೆ ಯಾರಿಗೂ ತೊಂದರೆ ಇಲ್ಲ.classical ಅನ್ನುವ ಅರ್ಥದಲ್ಲಿ.

classical language ಅನ್ನುವುದಕ್ಕೆ ದೊಡ್ಡ norm ಯಾವು ದು ಅಂತ ಹೇಳಿದರೆ ಪ್ರಾಚೀನತೆ . ಈಗ ನಮ್ಮಲ್ಲಿ ಗ್ರೀಕ್ ಭಾಷೆಆಗಲಿ,ಲ್ಯಾಟಿನ್ ಭಾಷೆ ಆಗಲಿ,ರೋಮನ್ ಭಾಷೆ ಆಗಲಿ ಅಥವಾ ಚೈನೀ ಸ್ classical languages ಇವೆಲ್ಲವನ್ನು classical ಭಾಷೆ ಅಂತ ಒಪ್ಪಿಕೊಂಡಿದ್ದೀವಿ. ಯುನೆಸ್ಕೊ ಕೂಡ ಇದನ್ನು ಒಪ್ಪಿಕೊಂಡಿದೆ. ಅದಕ್ಕೆಲ್ಲವೂ ಇರೋದು ಪ್ರಾಚೀನತೆ . ಒಂದು ಈಗಿನ ಭಾಷೆಗೂ ,ಆ ಭಾಷೆಗೂ ಅಜಗಜಾಂತರ ವ್ಯತ್ಯಾ ಸ ಇರಬೇ ಕು.ಇಲ್ಲವೇ ಆ ಭಾಷೆಯಿಂದ ಬೇರೆ ಭಾಷೆ ಹುಟ್ಟಿಕೊಂಡಿರಬಹುದು. ಉದಾಹರಣೆಗೆ ಸಂಸ್ಕೃತದಿಂ ದ ನಮ್ಮಲ್ಲಿ ಪ್ರಾಕೃತ ಭಾಷೆಗಳು ಹೇಗೆ ಹುಟ್ಟಿಕೊಂಡವೋ ಆ ರೀತಿಯಲ್ಲಿ . ಈ ಭಾಷೆಗೂ ಸಂಸ್ಕೃತ ಭಾಷೆಗೂ ಹೋಲಿಸಿದರೆ ಅಥವಾ ಪ್ರಾಚೀನ ಭಾಷೆಗೂ ಅರೆ ಪ್ರಾಚೀನ ಭಾಷೆಗೆ ಹೋಲಿಸಿದರೆ ತುಂಬಾ ವ್ಯತ್ಯಾಸಗಳು ಕಂಡು ಬರಬೇಕು .ಅದನ್ನು classical languages ಅಂತ ಹೇಳುವುದು. ನಾವೇನು ಮಾಡಿದೀವಿ ಅಂತ ಹೇಳಿದರೆ , ಶಾಸ್ತ್ರೀಯ ಭಾಷೆ ಅನ್ನುವುದರ ಪದದ ಬಗ್ಗೇನೆ ವಿರೋಧ ಇದೆ. ನಮ್ಮ ವಿದ್ವಾಂಸರುಗಳು ಈಗಾಗಲೇ ಹೇಳಿದ್ದಾರೆ ಇದು ಶಾಸ್ತ್ರೀಯ ಭಾಷೆ ಆದರೆ,ಬೇರೆ ಭಾಷೆಗಳೆಲ್ಲ್ಲವೂ ಹಾಗಾದರೆ ಅಶಾಸ್ತ್ರೀಯವೇ ಅಂತ. ತಮಿಳರು ಏನು ಮಾಡಿದ್ದಾರೆ ಅಂತ ಅಂದರೆ ಇದಕ್ಕೆ equal ಆಗಿರುವ ಚಮ್ಮೊಳಿ ಅಂತ ಬಳಸಿಕೊಂಡಿದ್ದಾರೆ.ಚಮ್ಮೊಳಿ ಅಂತ ಅಂದರೆ ಕನ್ನಡಕ್ಕೆ ಚನ್ನುಡಿ ಅನ್ನುವ ಪದಕ್ಕೆ ಹೆಚ್ಚು ಕಡಿಮೆ ಹತ್ತಿರವಾದದ್ದು.

ಚಮ್ ಅಂತ ಹೇಳಿದರೆ ಚಂದವಾಗಿರುವ ,ನಿರ್ದಿಷ್ಟವಾಗಿರುವ.ಹಾಗಾದರೆ ಚನ್ನಾಗಿಲ್ಲದೇ ಇರುವ ನುಡಿ ಅಂತ ಯಾವುದು ಅನ್ನುವ ಪ್ರಾಬ್ಲಮ್ ಇರುವದರಿಂದ ಶಾಸ್ತ್ರೀಯ ಅನ್ನುವುದು ಸರಿಯಿಲ್ಲ ಚಮ್ಮೊಳಿಯನ್ನುವುದು ಸರಿಯಿಲ್ಲ.classical ಅಂತ ಹೇಳಿದರೆ ಪ್ರಾಚೀನವಾದದ್ದು , ಒಂದು ಜನಾಂಗದ,ಒಂದು ಕಾಲದ, ಒಂದು ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾ ಇರುವಂಥದ್ದು .ಆ ದೃಷ್ಟಿ ಯಲ್ಲಿ ನೋಡುವಾಗ ನಮ್ಮಲ್ಲಿ ಸಂಸ್ಕೃತ ಮಾತ್ರ classical language.ನಮ್ಮಲ್ಲಿ ದೊಡ್ಡ ಸಮಸ್ಯೆ ಅಂದರೆ,ತಮಿಳನ್ನು ಮೊದಲು ಶಾಸ್ತ್ರೀಯ ಭಾಷೆ ಅಂತ declare ಮಾಡಿ ಅದಾದ ನಂತರ ಸಂಸ್ಕೃತವನ್ನು ಅಧಿಕೃತವಾಗಿ ಶಾಸ್ತ್ರೀಯ ಭಾಷೆ ಅಂತ declare ಮಾಡಿದ್ದಾರೆ. ಲೆಕ್ಕ ಹಾಕಿ ಅಲ್ಲಿಗೆ ಎಷ್ಟರ ಮಟ್ಟಿಗೆ ರಾಜಕೀಯ ಕೆಲಸ ಮಾಡಿದೆ .

ಅದೇ ಹಳೆಮನೆ ಇನ್ನೊಂದು ತೊಂದರೆ ಏನು ಹುಟ್ಟಿಸುತ್ತದೆ ಅಂತ ಹೇಳಿದರೆ ನಮ್ಮ ಭಾಷೆಯ ಪ್ರಾಚೀನಕ್ಕೆ ಗಮನ ಕೊಡುತ್ತಾ ನಮ್ಮ ಈಗಿನ ಸಮಕಾಲೀನ ದಿವಸದಲ್ಲಿ ನಮ್ಮ ಪ್ರಾದೇಶಿಕ ಭಾಷೆಗಳು ಆಧುನಿಕತೆಗೆ ಮುಖಾಮುಖಿಯಾಗಬೇಕು , ಸನ್ನದ್ಧವಾಗಬೇಕು ಇದನ್ನು ಮರೆತು ಬಿಟ್ಟು ೧೦೦೦ ವರ್ಷ ಹಿಂದೆ ಮುಖ ಮಾಡಿಕೊಂಡು ಕುಳಿತುಕೊಂಡು ಬಿಡಬೇಕಲ್ಲವಾ?

ಖಂಡಿತ ಈಗ ಆಗ್ತಾ ಇರೋದೆ ಹಾಗೇ ಈಗ. ಕನ್ನಡ ಭಾಷೆಯನ್ನು ಚರ್ಚೆ ಮಾಡಲಿಕ್ಕೆ ಶುರು ಮಾಡಿದರೆ ,ನಾವು ಎಷ್ಟರ ಮಟ್ಟಿಗೆ ಬೇರೆ ಬೇರೆ ಕಡೆಯಿಂದ ಸ್ವೀಕಾರ ಮಾಡಿಕೊಳ್ಳೋದಿಕ್ಕೆ ಗಮನ ಕೊಡುತ್ತಾ ಇದ್ದೀವಿ ಅಷ್ಟು ಗಮನವನ್ನು ನಮ್ಮ ಭಾಷೆಯ ಒಳಗೇ ಇರುವ ಭಾಷಾ ಪ್ರಕ್ರಿಯೆಯಿಂದ ಬೆಳವಣಿಗೆ ಮಾಡಬೇಕು ಅಂತ ಪ್ರಯತ್ನ ಮಾಡುತ್ತಾ ಇಲ್ಲ. ಆದ್ದರಿಂದ ಕನ್ನಡದ ಶಬ್ಧಗಳು ಹಿಂದಿನ ನಮ್ಮ ಸಾಹಿತ್ಯ ರೂಪಿಸಿರುವ ಶಾಸನಗಳ ಸಾಹಿತ್ಯ, ವಚನ ಸಾಹಿತ್ಯ ,ದಾಸ ಸಾಹಿತ್ಯ, ಕುಮಾರ ವ್ಯಾಸನಂತವರು ಎಲ್ಲರೂ ಅಗಾಧವಾಗಿ ಆ ಒಂದು ಭಾಷಾ ಪ್ರಕ್ರಿಯೆಯಲ್ಲಿ ಹೊಸ ಹೊಸ ಪದಗಳನ್ನು ಸೃಷ್ಟಿ ಮಾಡಿದರು. ನಾವು ಅದೆಲ್ಲವನ್ನು ಮರೆತು ಬಿಟ್ಟಿದೀವಿ. ನಾವು ಏನು ಮಾಡ್ತಾ ಇದ್ದೀವಿ ಅಂದರೆ ಸುಮ್ಮನೆ ಪದಗಳನ್ನು ಸ್ವೀಕಾರ ಮಾಡೋದ್ರಲ್ಲಿ ಇದ್ದೀವಿ ಈಗ.

ಪ್ರಶ್ನೆ ೩
ಭಾಷೆ ಬಗ್ಗೆ ಬಹಳ ಮುಖ್ಯವಾದ ಕೆಲವು ಮಾತನ್ನು ಹೇಳಿದಿರಿ. ನಿಮ್ಮ ಇನ್ನೊಂದು ಮುಖ ಇದೆಯಲ್ಲ ನಾಟಕದ್ದು ,ಬ್ರೆಟ್ ನ ನಾಟಕ ರೂಪಾಂತಿಸಿದಿರಿ, ಶೇಕ್ಸ್ಪಿಯರ್ ನ ನಾಟಕ ಮತ್ತೆ ಕೆಲವು ಸ್ವಂತ ನಾಟಕಗಳನ್ನು ಬರೆದಿದ್ದೀರಿ.ಇದನ್ನು ,ಈ ನಿಮ್ಮ ಭಾಷೆ ಬಗ್ಗೆ ಇರುವ ನಿಮ್ಮ ನಿಲುವನ್ನು ಒಟ್ಟಿಗೆ ಇಟ್ಟು ನೋಡಬೇಕು ಅಂತ ನೋಡಬೇಕು ಅನ್ನಿಸತ್ತೆ. ರಂಗಾಯಣ ದಲ್ಲಿ ಸಹ ಬಹಳ ಸಕ್ರಿಯವಾಗಿ ಕೆಲಸ ಮಾಡ್ತಾ ಇದ್ದೀರಿ.
ಉತ್ತರ
ನಮ್ಮ ರಂಗಾಯಣ ಮತ್ತು ಇಂತಹ ಈ ರೆಪಾಟೆರಿಗಳು ಮಾಡ್ತಾ ಇರುವ ಕೆಲಸಗಳು ಒಂದು ತರಹ ರಾಜಕೀಯ ಮನೋ ಧರ್ಮ ಪ್ರೇರಿತವಾದ ಶಾಸ್ತ್ರೀಯ ಅಂತ ಹೇಳಿಕೊಳ್ಳೋದು ಪ್ರಾಚೀನಕ್ಕೆ ಹೋಗೋದು ಅದಕ್ಕೆ ವಿರುದ್ಧವಾದ ಕೆಲಸವಲ್ಲವಾ?ವರ್ತಮಾನದಲ್ಲಿ we want to be more contemporary, ಆದರೆ ಭಾಷೆ ಗೆ ಬಂದಾಗ we want to go back.

ಈಗ ನಿಮ್ಮ ರಂಗಭೂಮಿ ಅನುಭವ ಇಟ್ಟುಕೊಂಡು ಕೆಲವು ಸಂಗತಿಗಳನ್ನು ಕೇಳಬೇಕು ಅನ್ನಿಸುತ್ತದೆ. ಈಗ trend ರೆಪಾಟ್ರಿಗಳನ್ನು ಮಾಡೋದು . ರಾಷ್ಟ್ರೀಯ ರಂಗಭೂಮಿಯ ಒಂದು ಭಾಗ ಬೆಂಗಳೂರಿನಲ್ಲಿ ಶುರು ಮಾಡಬೇಕು ಅಂತ ಇದ್ದಾರೆ. ಇವು ನಿಜವಾಗಿ ಆಯಾ ಪ್ರದೇಶದ ರಂಗಭೂಮಿ ಬೆಳೆಯೋಕೆ ಸಹಾಯ ಆಗುತ್ತೋ ಅಥವಾ mini globalization ತರಹ mini Inidianization ಆಗತ್ತಾ?

ಇದು ಬಹಳ important ಆದ ಪ್ರಶ್ನೆ. globalization ಸಂದರ್ಭದಲ್ಲಿ local is gloabl ಅನ್ನುವ concept ಇಟ್ಟುಕೊಂಡು ,global ಅನ್ನುವುದು ಬಿಡಿ ಅದು ಬಹಳ ದೊಡ್ಡದಾದದ್ದು. ನಮ್ಮ local ಎನಕ್ಕೇ global ಆಗಬಾರದು ,ನೀವು ಹೇಳುವಂತಹ ರಾಷ್ಟ್ರೀಯ ರಂಗಭೂಮಿ ಬೇರೆ ಬೇರೆ ಕಡೆಗೆ ಕಾಣಬೇಕು argue ಮಾಡ್ತಾ ಇದ್ದೀವಿ ಅದು ಬಹಳ ಮುಖ್ಯವಾದದ್ದು. ಭಾರತೀಯ ರಂಗಭೂಮಿ ಏಕರೂಪದ ರಂಗ ಭೂಮಿ ಅನ್ನುವ ನಂಬಿಕೆ ಇತ್ತು, ಸಂಸ್ಕೃತ ರಂಗಭೂಮಿ ಪ್ರಧಾನವಾಗಿ ಇಟ್ಟುಕೊಳ್ತಾಇದ್ದರು..ಎಲ್ಲಾ ಪ್ರಾದೇಶಿಕ ರಂಗಭೂಮಿಗಳು ಸೇರಿ ಭಾರತೀಯ ರಂಗಭೂಮಿ. ಸ್ಥಳೀಯ ರಂಗ ಭೂಮಿ , ಪ್ರಾಂತೀಯ ರಂಗ ಭೂಮಿ . ದೇಸೀ ರಂಗ ಭೂಮಿ ಅಥವಾ ಪ್ರಾಂತೀಯ ರಂಗ ಭೂಮಿಗೆ ಮಹತ್ವವನ್ನು ಕೊಡೋದಿಕ್ಕೆ ಅನುಕೂಲವಾಗುತ್ತದೆ.

ಪ್ರಶ್ನೆ ೪
ನಿಜವಾಗಿ ಆಗತ್ತಾ ಅನ್ನುವುದು ನನ್ನ ಪ್ರಶ್ನೆ. ಶಿವಮೊಗ್ಗದಲ್ಲಿ ನನ್ನ ೨೦ ವರ್ಷದ ನನ್ನ ಎಕ್ಸ್ಪೀರಿಯಂಸ್ ನೆನೆಸಿಕೊಂಡರೆ ಅಲ್ಲಿ ಹವ್ಯಾಸೀ ಕಲಾವಿದರು ನಾಟಕಗಳನ್ನು ಮಾಡ್ತಾ ಇದ್ದರು ,ಇಲ್ಲ ಬಯಲಾಟ, ಯಕ್ಷಗಾನ ನೋಡಿಕೊಂಡು ಇದ್ದರು .ಹೆಗ್ಗೋಡು ಒಂದು ಸರಿ "strong center" ಆಗಿ ಬೆಳೆಯೋದಿಕ್ಕೆ ಶುರು ಮಾಡಿದ ಮೇಲೆ ಎಲ್ಲರೂ ಹೆಗ್ಗೋಡುನವರ style ನಲ್ಲೇ ಶುರು ಮಾಡಿದರು.

ಇಲ್ಲಿ NSD ಯಿಂದ production ನೋಡಿದರೆ NSD ಮರಿ ರೂಪವೇ ಕಾಣಿಸಿ ಕೊಳ್ತಾ ಇದೆ. NSD ವಿಶುಯಲೈಜೇಶನ್ local theater forums ಹೆಚ್ಚು ಬಳಸಿಕೊಂಡ ಹಾಗೆ ಕಾಣಿಸ್ತಾ ಇಲ್ಲ. NSD fashionable ಆಗಿರತ್ತೆಯೇ ಹೊರತು ,ಜೀವಂತಿಕೆ ಕಾಣಿಸುವುದಿಲ್ಲ ಹಾಗಾಗಿ ಈ ನ್ಯಾಷನಲ್ ರೆಪಟರಿಗಳ ಬಗ್ಗೆ ಯಾವ ಧೋರಣೆ ಇಟ್ಟಕೊಳ್ಳಬೇಕು.
ಉತ್ತರ
ನೀವು ಹೇಳುತ್ತಿರುವ ಅಪಾಯವನ್ನು ಗಮನಿಸುತ್ತಿದ್ದೀವಿ ನಿಜ. ಆದರೆ ಒಂದು ಹಂತದಲ್ಲಿ ಈ ರೀತಿಯ ಪರಿವರ್ತನೆ ಅನಿವಾರ್ಯವೇನು ಅನ್ನಿಸುತ್ತಾ ಇದೆ. ನಮ್ಮಿಂದ ಹೋದಂತಹ ಹುಡುಗರು NSD ಅಲ್ಲಿಂದ ಬಂದ ಮೇಲೆ ಒಂದು ನಾಟಕವನ್ನು ಎತ್ತಿಕೊಳ್ಳುತ್ತಾರೆ ಅಂದರೆ ಒಂದು ಗುಮಾನಿ ಇರತಿತ್ತು ಅದೆಲ್ಲ ಅಲ್ಲಿ ಮಾಡಿರುವ ನಾಟಕವೇನೋ ಅದನ್ನೆಲ್ಲ ಇಲ್ಲಿ ರಿಪೀಟ್ ಮಾಡ್ತಾರೇನೋ ಹೆಗ್ಗೋಡು ಸ್ಥಳೀಯವಾದ ಮಟ್ಟದಲ್ಲಿ ಆಗ್ತಾ ಇದ್ದಿದ್ದು . ಆ ಸಿದ್ದಿ ಜನಾಂಗದವರಿಗೆ ಮಾಡಲಿಕ್ಕೆ ಹೋದಾಗ ರಿಪೀಟ್ ಆಗತ್ತೆ ಮಂಡ್ಯದಲ್ಲಿ ಅತುಲ್ ತಿವಾರಿ ಮಾಡಿಸುತ್ತಾನೆ ಅಂದರೆ ಅದೇ ನಾಟಕ ಇಲ್ಲಿ ರಿಪೀಟ್ ಆಗತ್ತೆ. ಆ ರೀತಿಯ ಸ್ಥಳೀಯವಾದ ಜನಪದ ಪ್ರದರ್ಶನ ಸೇರಿಸಿಕೊಂಡು ಆ ರೀತಿಯ ವಿಸ್ತರಣೆ ಆಗೋದಾದ್ರೆ ಹೆಚ್ಚು ಅನುಕೂಲ .

ಪ್ರಶ್ನೆ ೫
ಮತ್ತೆ ಇದೊಂದು ಬಗೆಹರಿಯದ ಸಮಸ್ಯೆಯತ್ತ ಕರೆದುಕೊಂಡು ಹೋಗುತ್ತೆ ಹಳೆಮನೆಯವರೆ. ನಮ್ಮಲ್ಲಿ ಎಷ್ಟೇ ಥಿಯರಿಟಿಕಲ್ ಆಗಿ ಸಮರ್ಥಿಸಿಕೊಂಡರೂ, ಥಿಯೇಟರ್ ಅನ್ನೋದು educated middle class ನ ಪಾಸ್ ಟೈಮ್ ಆಗಿ ಉಳಿದು ಕೊಂಡಿದೆ. ಆದರೆ ಕೆಳಗಡೆ ಹೋಗ್ತಾ ಇದೆ ಅಂತಹ ಹೇಳಿದರೆ, ಅವರಿಗೆ ಕೊಡ್ತಾ ಇರೋದು ಮಾಡೆಲ್ ಗಳಿವೆಯಲ್ಲಾ Indianised Western production ಮಾಡೆಲ್ಗಳೇ ಹೊರತು ಸಿದ್ಧ್ಹಾರ್ಥದಲ್ಲಿ ಮೊನ್ನೆ ಆದ ನಾಟಕದಲ್ಲಿ ಕೇರಳದ ಸ್ಥಳೀಯ ನೃತ್ಯ ಬಳಸಿಕೊಂಡರೂ ಸಹ , overall impact ಪಾಶ್ಚಾತ್ಯ ನಾಟಕ ನೋಡಿದ ಹಾಗೆ ಅನ್ನಿಸುತ್ತೆ.
ಉತ್ತರ
ಒಂದಾಗಿದೆ ಈಗ, ಇನ್ನು ಮುಂದೆ ಯಾವುದೇ ರೀತಿಯ ಒಂದು ಸಣ್ಣ ಸಾಮಾಜಿಕವಾದ ಚಟುವಟಿಕೆ ಅನ್ನುವಂಥದ್ದಾದರೆ ಅದು "middle class" ಲೆವೆಲ್ ನ ಚಟುವಟಿಕೆ ಆಗೇ ಕಾಣಸಿಗುತ್ತದೆ. ನೋಡಿ ನಮ್ಮ ಬಯಲಾಟ ತೊಗೊಳೋಣ ಉತ್ತರ ಕರ್ನಾಟಕದ ಬಯಲಾಟ ೧೦-೧೫ ವರ್ಷದ ಹಿಂದೆ ಉತ್ತರ ಕರ್ನಾಟಕ ದ ಬಯಲಾಟಕ್ಕೆ ಇದ್ದ ಪ್ರಾಶಸ್ತ್ಯ ಇವತ್ತಿದಕ್ಕೆ ಇಲ್ಲ. ಕೆಳ ವರ್ಗದ ಗ್ರಾಮೀಣ ಪ್ರದೇಶದ ಜನರು ಬಯಲಾಟವನ್ನು ಮರೆತು ಇನ್ಯಾವದೋ ಪ್ರದರ್ಶನ ಕಲೆಗಳಿಗೆ ಪ್ರಾಶಸ್ತ್ಯ ಕೊಡ್ತಾರೆ. ಸಂಗ್ಯಾ ಬಾಳ್ಯ ಸಣ್ಣಾಟ ನಡೆಯುತ್ತಿರುವಂತಹ ಸಮಯದಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರಾಶಸ್ತ್ಯ ಇತ್ತೋ ಇವತ್ತಿಲ್ಲ. ಈಗಾಗಲೇ ಅಧ್ಯಯನದ ವಸ್ತುವಾಗಿ ಮಾರ್ಪಾಡಾಗಿದೆ. ಬಹುಷ: ಈ ರೀತಿಯ ರೂಪಾಂತರ, ಪರಿವರ್ತನೆ ಅನಿವಾರ್ಯವೇನೋ , ಇನ್ನು ಮುಂದೆ ಯಾವುದೇ ರೀತಿಯ ಸಾಮಾಜಿಕವಾದ ಸಾಮುದಾಯಿಕವಾದ ಚಟುವಟಿಕೆ "middle class" ಅನ್ನುವಂಥದ್ದು .

ಪ್ರಶ್ನೆ ೬
ಅಷ್ಟೇ ಅಲ್ಲ ಸರ್ ,ಬೆಂಗಳೂರಿನಲ್ಲಿ ಯಾವುದೆ ಒಂದು ನಾಟಕದ ಪ್ರೊಡಕ್ಷನ್ ಮಾಡಬೇಕಾದ ಕಾರ್ಪೋರೇಟ್ ಹೌಸ್ ನ ಬೆಂಬಲವಿಲ್ಲದೇ ಮಾಡೋದಿಕ್ಕೆ ಆಗುವುದಿಲ್ಲ ಅನ್ನುವ ಹಾಗೆ ಆಗಿಬಿಟ್ಟಿದೆ.
ಉತ್ತರ
ಸ್ವಲ್ಪ ಅಂಜುತ್ತಾ ಇದ್ದೀವಿ ನಾವು , ಪುಣ್ಯವಂತರು ಅಂದರೆ ,ನಿಜ ಹೇಳಬೇಕೆಂದರೆ ಅವಕಾಶಗಳು ಕಡಿಮೆ ಮೈಸೂರಿನಲ್ಲಿ. ಅವಕಾಶವಿದ್ದರೆ ಇಲ್ಲೂ ಹೋಗ್ತಾ ಇದ್ರೇನೋ!!.ನಮ್ಮಂತವರು ಕಾಂಶಿಯಸ್ ಆಗಿ ಇದ್ದೀವಿ. ನಮ್ಮಲ್ಲಿ ಸ್ವಲ್ಪ ಹಿಂದಿನಿಂದ ಸಹ ಕಾರ್ಪೋರೇಟ್ ಸಹಾಯವನ್ನು, ಅನುದಾನವನ್ನು ವಿರೋಧಿಸುಕೊಂಡು ಬಂದವರು. ರಂಗಭೂಮಿಯ ಚಟುವಟಿಕೆಯನ್ನು ಸಮುದಾಯದ ಮಧ್ಯದಲ್ಲಿ , collective ಆದ ಜನರ support ಇಂದ ಮಾಡಬೇಕು . ಬಹುರೂಪಿಗೂ ಸಹ ನಾವು ಈ ಸರಿ sponsorship ಗೆ ಹೋಗಲಿಲ್ಲ. ನಾಟಕದ ಪ್ರೊಡಕ್ಷನ್ ಕಾರ್ಪೊರೇಟ್ ದೇಸಿ ಸಂಸ್ಕೃತಿಯನ್ನು ನಾವು ಕಾರ್ಪೋರೇಟ್ ನವರ ಹತ್ತಿರ ಹೊಗಿದ್ದರೆ ಸಹಾಯ ಮಾಡ್ತಿದ್ರ್ರೇನೊ ಹೋಗೋದಿಕ್ಕೆ ನಮಗೆ ಇಷ್ಟ ಇಲ್ಲ. ನೀವು ಹೇಳೋವಂತಹ ಪರಿಸ್ಥಿತಿ ಈಗಾಗಲೇ ಮೆಟ್ರೊ ಪಾಲಿಟನ್ ಸಿಟೀಸ್ ಗೆ ಬಂದಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ಇಂಗ್ಲೀಷ್ ಥಿಯೇಟರ್ ಗೆ ಬಂದಿದೆ.

ಪ್ರಶ್ನೆ ೭
ನಿಮ್ಮ ಇನ್ನೊಂದು ಚಟುವಟಿಕೆ ಅಂಶದ ಕಡೆಗೆ ಹೋದರೆ,ಕನ್ನಡ ಆನ್ಲೈನ್ ಕಲಿಸೋದ್ರಲ್ಲಿ ತೊಡಗಿದ್ದೀರಿ. ಕಾರ್ಪೋರೇಟ್ ಜಗತ್ತು ನಾಟಕವನ್ನಲ್ಲದೇ ನಮ್ಮ ಭಾಷೆಯನ್ನು ಸಹ ಪ್ರಭಾವ ಗೊಳಿಸುತ್ತಾ ಇದೆ ಕನ್ನಡಭಾಷೆ ಹೇಗೆ ಕಲಿಸಬಹುದು ?ಪುಷ್ಟಗೊಳಿಸ ಬಹುದು ?ನಿಮ್ಮದೇನಾದ್ರು ಆ ತರಹದ ಯೋಚನೆಗಳು ಇದ್ದರೆ ನಮ್ಮಲ್ಲಿ ಹಂಚಿಕೊಳ್ಳಬೇಕು .
ಉತ್ತರ
ಇದು ಬಹಳ ಮುಖ್ಯವಾದದ್ದು ,globalisation ಹಿನ್ನೆಲೆಯಲ್ಲಿ ಭಾಷೆಗಳ ಮೇಲೆ ಬಹಳ ದೊಡ್ಡ ಪರಿಣಾಮ ಆಗ್ತಾ ಇದೆ. ಬೀರಿದೆ. globalization ಇನ್ನೊಂದು ಎಫೆಕ್ಟ್ ಅದನ್ನ opposite effect ಅಂತ ಬೇಕಾದರೆ ಹೇಳಬಹುದು. ಕಾರ್ಪೋರೇಟ್ ಸಂಸ್ಥೆ ಯಲ್ಲಿ ಪ್ರತಿನಿಧಿಗಳು ಯಾರು ಯಾರು ಇದ್ದಾರೋ ಅವರಿಗೆ ಬೇರೆ ಬೇರೆ ಭಾಷೆ ಕಲಿಯೊ ಅನಿವಾರ್ಯ ಇದೆ. ೨೦ ನೇ ಅಥವಾ ೧೯ ನೆ ಶತಮಾನದ ಕೊನೆಯಲ್ಲಿ ಮಿಶನರಿಗಳು ಬಂದರಲ್ಲಾ ಅವರಿಗೆ ಸ್ಥಳೀಯ ಭಾಷೆ ಕಲಿಯುವ ಅನಿವಾರ್ಯವಿತ್ತು.ಕನ್ನಡ ಭಾಷೆಗೆ ಗ್ರಾಮರ್ ಬರೆದರು. ಒಂದು ಡಿಕ್ಷನರಿ ಬರೆದರು. ಯುರೋಪಿಯನ್ ಮಾಡೆಲ್ ಗಳಲ್ಲಿ ಕಿಟ್ಟೆಲ್ ,ಜೆಗ್ಲರ್, ರೈಸ್ ಬರೆದಿರುವಂಥಾದ್ದು ಇರಬಹುದು ಈ ರೀತಿಯಲ್ಲಿ ಬಂದದ್ದು ಈಗ ನೋಡಿ ವಿಚಿತ್ರವಾದ ರೀತಿಯಲ್ಲಿ ವಿಭಿನ್ನವಾದ ಮೈಕ್ರೊಸಾಫ್ಟ್ ನವರು ಕನ್ನಡದಲ್ಲಿ ಸಾಫ್ಟ್ವೇರ್ ಗಳನ್ನು ತಯಾರು ಮಾಡ್ತಾ ಇದ್ದಾರೆ, ಲಿನಕ್ಸ್ ಅನ್ನುವವರು ಕನ್ನಡಕ್ಕೆ ಸಂಬಂಧ ಪಟ್ಟಂತಹ ಕೆಲಸಕ್ಕೆ ಮುಂದಾಗಿದ್ದಾರೆ.

ಮಿಷನರೀಸ್ ಮಾಡಿದ್ದು ಬೇರೆ ರೂಪ ಬೇರೆ ಸ್ವರೂಪ ಬೇರೆ ಹಿನ್ನೆಲೆ. ಇವರು ಮಾಡುತ್ತಾ ಇರೋದು ಬೇರೆ ಸ್ವರೂಪ ಬೇರೆ ಹಿನ್ನೆಲೆ. ಆದರೆ ಒಟ್ಟಾ ರೆ ಆಶಯ ಒಂದೇ ಆಗಿದೆ. ಇವರಿಗೂ ಕನ್ನಡ ಕಲಿಯುವ ಅನಿವಾರ್ಯ ಇದೆ. ಇನ್ನೊಂದು ನಾವು ಕಲಿಸುವ ಕನ್ನಡದ ಬಗ್ಗೆ , ಎರಡು ಮೂರು purpose ಗೋಸ್ಕರ ಆನ್ಲೈನ್ create ಮಾಡ್ಕೊಂಡಿದ್ದೀವಿ.ಒಂದು we do not know who is the learner. He is a faceless learner.ಅದರಲ್ಲಿ ಒಬ್ಬ ಕಾರ್ಪೋರೇಟ್ ಸಹಿತ ಕಲೀತಾನೆ.ದೂರದಲ್ಲಿ ಅಮೇರಿಕ ದಲ್ಲಿ ನಮ್ಮ ಕನ್ನಡಿಗರೇ ಇದ್ದು ಕೊಂಡು cultural crisis ಇದೆ .ಕಲೀಲಿಕ್ಕೆ ಪ್ರಾರಂಭ ಮಾಡಿದಾರೆ.

ಅಂಥವರನ್ನು ಗಮನದಲ್ಲಿ ಇಟ್ಟುಕೊಂಡು ನಾನು ಈ ಕೋರ್ಸ್ ಅನ್ನು ಶುರು ಮಾಡಿದಿನಿ.ಯಾರು ಬೇಕಾದರೂ ಕಲಿಯೋದಕ್ಕೆ ಸಾಧ್ಯ. ಅಂಥವರಿಗೆ standard language ಅನ್ನು ಕಲಿಸಿತಿದ್ದೀನಿ. standard language abstract , ಮತ್ತೆ nobodies language ಯಾವ ಕನ್ನಡಿಗರ ಭಾಷೆ ಅನ್ನುವಂಥಾದ್ದು.

supplement ನಿಜವಾದ style ಗಳನ್ನು ಕೊಡ್ತಾ ಇದ್ದೀನಿ. ನಿಮ್ಮ ಈ ಟೆಕ್ನಾಲಜಿ ದಯಪಾಲಿಸಿದೆ ಅಂಥವನ್ನು ಇಟ್ಟುಕೊಂಡು ಆದಷ್ಟು ಸುಲಭವಾಗಿ ಕಲಿಸುವ ಪ್ರಯತ್ನ ಮಾಡ್ತಾ ಇದ್ದೀವಿ.

ಪ್ರಶ್ನೆ ೮
ಹಳೆಮನೆ, ಹಿಂದೆ ಮಿಷನರಿ ಗಳು ಕನ್ನಡದ ಬಗ್ಗೆ ಕೆಲಸ ಮಾಡಿದಾಗ ಅವರ object of study ಅದರ ಬಗ್ಗೆ ಜನಕ್ಕೆ ತಿರಸ್ಕಾರ ಇರಲಿಲ್ಲ ನಮ್ಮ ಭಾಷೆ ಅಂತ ಬಳಸುತ್ತಾ ಇದ್ದರು. ನಮ್ಮ ಭಾಷೆ ಅಂತನೂ ಇಲ್ಲ ,ಇರೋದೊಂದು ಭಾಷೆ ಅಂತಹ ಬಳಸುತ್ತಾ ಇದ್ದರು. ಈ ಕಾರ್ಪೋರೇಟ್ ಕನ್ನಡ , ತಮಿಳು ಬಳಸುವ ಹೊತ್ತಿಗೆ, ಕನ್ನಡ , ತಮಿಳು ಭಾಷಿಕರಿಗೆ ಇಂಗ್ಲೀಷ್ ಭಾಷೆ ಗೊತ್ತಿದ್ದರೆ ಸಾಕು ಅನ್ನಿಸೋ ಮಟ್ಟಿಗೆ ಬಂದಿದೆ.
ಉತ್ತರ
ಸೂಕ್ಷ್ಮವಾಗಿ ಗಮನಿಸಿ ಅವರು ತಮ್ಮ ಪ್ರಾಫಿಟ್ ಗೋಸ್ಕರ ಸ್ಥಳೀಯ ಭಾಷೆಯನ್ನು neglect ಮಾಡ್ತಾ ಇಲ್ಲ, ಇಂಗ್ಲೀಷ್ ಭಾಷೆಗೆ ಕೊಡುವ ಪ್ರಾಶಸ್ತ್ಯ ಸಹ ಇದಕ್ಕೆ ಕೊಡ್ತಾ ಇಲ್ಲ. ಮೀಡಿಯಾಕೆ ಸಂಬಂಧ ಪಟ್ಟವರನ್ನು ವ್ಯಕ್ತಿಗಳನ್ನು ತೆಗೆದುಕೊಳ್ಳಿ ನೀವು ಇಂಗ್ಲೀಷ್ ಸ್ಕ್ರಿಪ್ಟ್ ಅಲ್ಲಿ ಕನ್ನಡ ವರ್ಡ್ ಅನ್ನು ಬಳಸುತ್ತಾರೆ, ಅದು ಒಂದು ರೀತಿಯ ತಂತ್ರ. ಒಂದೇ ಇಂಗ್ಲೀಷ್ ಸ್ಟ್ರಕ್ಷರ್ ನಲ್ಲಿ ಕನ್ನಡ ವರ್ಡ್ ಇಂಗ್ಲೀಷ್ ವರ್ಡ್ ಎರಡನ್ನು ಸೇರಿಸುವ ಕೆಲಸ ಮಾಡ್ತಾ ಇದ್ದಾರೆ. ವಿಚಿತ್ರವಾದ ಭಾಷಿಕ ಬೆಳವಣಿಗೆ ಮಾಡ್ತಾ ಇದ್ದಾರೆ. sms ಅನ್ನು ಬಳಸುವ ಸಂದರ್ಭದಲ್ಲಿ , ಕನ್ನಡ ದಲ್ಲಿ ಶುರು ಮಾಡಿಲ್ಲ ಇಂಗ್ಲೀಷ್ ನಲ್ಲಿ variations ಕಂಡು ಬರ್ತಾ ಇದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಭಾಷೆಗಳ ಇರುವ ಸ್ಪೇಸ್ ಕಡಿಮೆ ಆಗ್ತಾ ಇದೆ. ಆ ಸ್ಪೇಸ್ ಅನ್ನು ಇಂಗ್ಲೀಷ್ ನಲ್ಲಿ ತಂದು ತುರುಕುವ ಕೆಲಸ ಮಾಡ್ತಾ ಇದ್ದಾರೆ.

ನಮ್ಮ ಇಂಟರ್ನೆಟ್ ಅಲ್ಲಿ ಕನ್ನಡ ಕಲಿಸುವ ನಮ್ಮ ಉದ್ದೇಶ ಏನಿದಾವೆ ಯಾವುದಾದರೂ "requirement" ಇದ್ದರೆ ಆ ಸ್ಪೇಸ್ ಅನ್ನಾದರು ಫಿಲ್ ಮಾಡಿಕೊಳ್ಳುವ ಇದರ ಮುಖಾಂತರ. ನಮ್ಮ ಉದ್ದೇಶ "let him also learn"ಇವತ್ತು ನನ್ನ ಅನುಭವದಲ್ಲಿ ೪೦ ೫೦ ಜನ ರೆಜಿಸ್ಟರ್ ಮಾಡಿಕೊಂಡಿದ್ದಾರೆ. ಅವರೆಲ್ಲರೂ ಸಹ ಕಾರ್ಪೋರೇಟ್ ಕಂಪೆನಿಗಳಲ್ಲಿ ಬೆಂಗಳೂರು ಹಾಗು ಮೈಸೂರು ಕೆಲಸ ಮಾಡ್ತಾ ಇರುವವರು. ಕನ್ನಡ ಕಲಿಯುವ ಅನಿವಾರ್ಯತೆ ಎಲ್ಲೋ ಒಂದು ಕಡೆ ಇದೆ. ಮಿಶನರಿ ಹಾಗೂ ಇವರಿಗೆ ನೇರವಾದ ಸಂಬಂಧವಿಲ್ಲದಿದ್ದರೂ ಹಾಗಾಗಿ ಆ ತರಹದ ಕಾರಣ ಇದೆ.

ಪ್ರಶ್ನೆ ೯
ನಿಮ್ಮ ಕಾಲಮ್ ಗಳಲ್ಲಿ , ವಚನಗಳನ್ನು ಕುರಿತು , ಕನ್ನಡ ಸಂಸ್ಕೃತಿಯನ್ನು ಕುರಿತು ಬಹಳಷ್ಟು ಬರೆದಿದ್ದೀರಿ. ಆನ್ ಲೈನ್ ಕನ್ನಡ ದ ಬಗ್ಗೆ ನೂ ಮಾತಾಡ್ತಾ ಇದ್ದೀವಿ .interpret ಮಾಡ್ತೀವಿ. ನಿಮ್ಮ ಲೇಖನಗಳ ಚರ್ಚೆ ನೋಡಿದರೆ ಬಸವಣ್ಣ ,ಅಲ್ಲಮ ಪ್ರಭು ಇವರೆಲ್ಲರನ್ನೂ ಬೇರೆ ತರಹ ನೋಡ್ತೀವಿ, ಇನ್ಟರ್ಪ್ರೆಟ್ ಮಾಡ್ತೀವಿ how as it is ಅವರ "philosophy, outlook" ನಮ್ಮ ಈ ಹೊತ್ತಿನ ೨೦೦೬ ನೆ ಕಾರ್ಪೊರೇಟ್ ಜಗತ್ತಿನಲ್ಲಿ ಎಷ್ಟರ ಮಟ್ಟಿಗೆ ಉಪಯೋಗಕ್ಕೆ ಆಗಬಹುದು ಅನ್ನಿಸುತ್ತದೆ.
ಉತ್ತರ
ನನಗೆ ಅವು ಇನ್ನೂ ಉಪಯೋಗಕ್ಕೆ ಬರುತ್ತವೆ ಅನ್ನುವ ದೃಢವಾದ ನಂಬಿಕೆ. ಅದು ೧೦೦ % ಆಮೂಲಾ ಗ್ರವಾದಂತಹ ಉಪಯೋಗಕ್ಕೆ ಬರುತ್ತವೆ ಅನ್ನುವುದಕ್ಕಿಂತ ಹೆಛಾಗಿ ಅನುಕೂಲಕ್ಕೆ ಅನುಕೂಲಕ್ಕೆ ಬರುವ ಅನೇಕ ಒಳ್ಳೆಯ ಅಂಶ ವಚನ ಸಾಹಿತ್ಯ ಇರಬಹುದು , ಒಬ್ಬ ಪಂಪ ಇರಬಹುದು ,ಒಬ್ಬ ಕುಮಾರವ್ಯಾಸ ಇರಬಹುದು ,ದಾಸ ಸಾಹಿತ್ಯ ಇರಬಹುದು , ನಮ್ಮ ಕನ್ನಡ ಸಂಸ್ಕೃತಿಯನ್ನು ಕಟ್ಟಿಕೊಟ್ಟಂತಹ ಇತಿಹಾಸದ ಬೇರೆ ಬೇರೆ ಘಟ್ಟಗಳು.

೨೧ ನೇ ಶತಮಾನಕ್ಕೆ ಅವು ಕೊಡುವಂತಹ ಸಾರ್ವತ್ರಿಕ ಮೌಲ್ಯಗಳಿವೆ ಒಂದು ಭಾಷಿಕವಾಗಿ ನಮ್ಮ ಭಾಷೆಯನ್ನು ಬೇರೆಯ ಒಂದು ಭಾಷೆಯ ಪ್ರಭಾವದ ಮೇಲೆ "crisis" ಹೇಗೆ ಕಟ್ಟಿಕೊಳ್ಳಬೇಕು ಅನ್ನುವುದನ್ನು ತೋರಿಸಿಕೊಟ್ಟರು. ಸಾರ್ವತ್ರಿಕ ಮೌಲ್ಯಗಳನ್ನು , ಎಂಥಾ ಮೌಲ್ಯಗಳನ್ನು ಹಿಂದಿನದನ್ನು ಪರಿಶೀಲಿಸದೆ ಯಾವುದು ಸರಿ ಯಾವದು ತಪ್ಪು ಅನ್ನುವಂಥದ್ದು ನಾವು ಒಪ್ಪಿಕೊಂಡು ಅಥವಾ ತಿರಸ್ಕರಿಸಿ ಮುಂದೆ ಹೋಗಬೇಕು ಅಂತಹ ವಿವೇಕದ ಮಾತುಗಳು ಮತ್ತೆ ಮತ್ತೆ ತೋರಿಸಿ ಕೊಟ್ಟಂತಹುದು . ನಮ್ಮ ನೆಲದಲ್ಲಿ ಬಂದಂತಹುದು.

ಅದರಲ್ಲು ೧೨ ನೇ ಶತಮಾನದ ವಚನದ ಸಂದರ್ಭವಿದೆಯಲ್ಲ human rights ಸರಿಯಾದ perspective ಅಲ್ಲಿ ಕಂಡಂತಹ ಈಗ ಕಾಣುವಂತಹ ಮಾನವ ಆಯೋಗ , ಮಾನವ ಹಕ್ಕು. ೧೨ ನೇ ಶತಮಾನ ನನ್ನ ದೃಷ್ಟಿಯಲ್ಲಿ ಕರ್ನಾಟಕದ ಜ್ಞಾನಯಾನದ ಯುಗ ."the age of learning"

ಪ್ರಶ್ನೆ ೧೦
ನಿಮ್ಮ ಮಾತನ್ನು ಒಪ್ಪಿಕೊಂಡು ಸಹ ನನಗೆ ಅನ್ನಿಸುವುದೇನೆಂದರೆ ಯಾರು ಇನ್ನು ವಚನ ಸಾಹಿತ್ಯ, ಕನ್ನಡ ಸಂಸ್ಕೃತಿಯನ್ನು ಗಂಭೀರವಾಗಿ ಅಧ್ಯಯನ ಮಾಡಬೇಕು ಅಂತ ಇದಾರೋ , ತಿಳಿದುಕೊಳ್ಳಬೇಕು ಅಂತ ಇದ್ದಾರೋ ಅವರು ಮೈಸೂರಿನಲ್ಲಿ ಕಾಣುವುದಿಲ್ಲ , ಬೆಂಗಳೂರಿನಲ್ಲಿ ಅಪ್ರಸ್ತುತ ಆಗುವಂತಹ ಸನ್ನಿವೇಶ ಹುಟ್ಟಿಕೊಳ್ಳುತ್ತಾ ಇದೆ.
ಉತ್ತರ
ವಚನವನ್ನು ನೀವು ಅನೇಕವಾಗಿ interpret ಮಾಡಲಿಕ್ಕೆ ಸಾಧ್ಯ ಇದೆ. ವಿಷಯ ಯಾವ ಕೋನದಿಂದ ಯಾವ ರೀತಿ ಅರ್ಥ ಮಾಡಿಕೊಳ್ಳುತ್ತೀವಿ ಅನ್ನುವುದು ನನ್ನ ದೃಷ್ಟಿ ಯಲ್ಲಿ ಯಾವುದೇ ಪಾಸ್ಟ್ ಅನ್ನೋದು ಅಪ್ರಸ್ತುತ ಅಲ್ಲ.ಬಯಾವುದು ಸ್ವೀಕೃತ ಆಗಬಹುದು , ಯಾವುದನ್ನು ಬಿಡಬೇಕು ಅದನ್ನು ನಮ್ಮ ಅಲ್ಲಮನಂತವರು ಬಹಳ ಅದ್ಭುತವಾದ ಮಾತನ್ನು ಹೇಳಿದರು .

"ನಮ್ಮ ಗುಹೇಶ್ವರನ ಶರಣರು ಹಿಂದನರಿಯದೆ ಮುಂದನಡಿಯಿಡರು " ಅದ್ಭುತವಾದ ಮಾತು. ಹಿಂದನ್ನು ತಿಳಿದು ಕೊಳ್ಳಬೇಕು ಮುಂದಕ್ಕೆ ಹೋಗ ಬೇಕು.

ಅದನ್ನೇ ತಾನೆ "dialectics" ಅಂತ ಹೇಳಿ argue ಮಾಡ್ತಾ ಇರೋದು. ಕರಿಯೋದು ಐತಿಹಾಸಿಕವಾಗಿ ಏನನ್ನು ಸ್ವೀಕಾರ ಮಾಡಬೇಕು ಏನನ್ನು ಸ್ವೀಕಾರ ಮಾಡಬಾರದು ಅಂತ ಹೇಳುವಂಥಾದ್ದು.

ಪ್ರಶ್ನೆ ೧೧
past ಅಪ್ರಸ್ತುತ ಅಲ್ಲ, ಈ past ಬಗ್ಗೆ ಯೋಚನೆ ಮಾಡುವ ಜನಗಳ ಸಣ್ನ ಗುಂಪಿದೆಯಲ್ಲ ಅದು ಅಪ್ರಸ್ತುತ ಅಂತ ಹೇಳ್ತ್ತಾ ಇದ್ದೀನಿ.
ಉತ್ತರ
ಅಪ್ರಸ್ತುತ ಅನ್ನುವಂಥವರ ಮಾತು ಅಪ್ರಸ್ತುತವೇ ನಿಜ ಅದರ ಬಗ್ಗೆ ವಿರೋಧ ವಿಲ್ಲ. ವಚನ ಸಾಹಿತ್ಯ ಅಥವಾ ಪಂಪ ವನ್ನೇ ತೆಗೆದುಕೊಳ್ಳಿ ,

ಎಲ್ಲವೂ ಇದೆ ಅನ್ನುವಂಥದ್ದೂ ತಪ್ಪು , ಅಮೇಲೆ ಅದರಲ್ಲಿ ಎನೂ ಇಲ್ಲ , ಅದರಿಂದ ಸ್ವೀಕಾರ ಮಾಡುವಂಥದ್ದೇನಿಲ್ಲ ಅನ್ನುವುದು ತಪ್ಪು. ವಿವೇಚನೆಯನ್ನು apply ಮಾಡಬೇಕಾಗ್ತದೆ. , ಆ ಹಿನ್ನೆಲೆಯಲ್ಲಿ ನೋಡುವಾಗ ನಮ್ಮ ಕನ್ನಡ ಸಾಂಸ್ಕೃತಿಕ ದೊಡ್ಡ ಸಂಚಯವನ್ನೇ ಕಟ್ಟಿಕೊಟ್ಟಿದೆ.ನಾವು ಅದನ್ನು ಪಾಲಿಸಬೇಕು.ಮುಂದುವರೆಸಿಕೊಳ್ಳಬೇಕು.

ನಾನು ಒಂದು ದೊಡ್ಡ ಪ್ರಾಜೆಕ್ಟ್ ಇಂಪ್ಲಿಮೆಂಟ್ ಮಾಡ್ತಾ ಇದ್ದೇನೆ . ನಾನು ಇದನ್ನು ಕರೆದಿರುವುದು ವಿಶುಯಲ್ ಎನ್ ಸೈಕ್ಲೋಪೀಡಿಯ ಅಫ್ ಕನ್ನಡ ಯೂನಿವರ್ಸ್ ೨೦೦೦ ವರ್ಷದಿಂದ ಕಟ್ಟಿಕೊಂಡು ಬಂದಂತಹ ಜಗತ್ತಿದೆಯಲ್ಲ ಅದನ್ನು ಹೊರ ಜಗತ್ತಿಗೆ ಪರಿಚಯ ಮಾಡಿ ಕೊಡಬೇಕು ದೃಶ್ಯ ಮಾಧ್ಯಮದ ಮುಖಾಂತರ ೧೦೦೦ ಎಪಿಸೋಡ್ ೧/೨ ಗಂಟೆ ಎಪಿಸೋಡ್.

ಕನ್ನಡ ಭಾಷೆ, ಕನ್ನಡ ಲಿಪಿ, ಕನ್ನಡ ಜನ, ಕನ್ನಡ ನೆಲ , ಕನ್ನಡ ಜಲ , ಕನ್ನಡ ಸಂಸ್ಕೃತಿ , ಕನ್ನಡ ಸಾಹಿತ್ಯ , basic knowledge ಎಲ್ಲವನ್ನು ವಿಶುಯಲ್ ಎನ್ಸ್ಯ್ಕ್ಲೋಪೀಡಿಯ ಸಿದ್ಧತೆ ಮಾಡಿಕೊಂಡು ಮಾಡ್ತಾ ಇದ್ದೀನಿ.

ನಮ್ಮ ಹಿಂದಿನ ಬೆಳವಣಿಗೆ ಅರ್ಥ ಮಾಡಿಕೊಂಡು ನಮ್ಮ ಮುಂದಿನ ಬೆಳವಣಿಗೆ ನಿರ್ಧಾರ ಮಾಡಿಕೊಳ್ಳಬೇಕು ಅಂಥಾದ್ದು. ಆ ದೃಷ್ಟಿಯಿಂದ ಅದು ಬಹಳ ಮುಖ್ಯ ಅಂತ ನನ್ನ ಅನಿಸಿಕೆ .