ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಹನಾ ವಿಜಯಕುಮಾರ್

ಸಹನಾ ವಿಜಯಕುಮಾರ್

ಇತರ ಹೆಸರುಗಳು: Sahana Vijayakumar

೩ ೪೪೭
ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ ಸಹನಾ ವಿಜಯಕುಮಾರ್ ಇವರು ಮೂಲತಃ ಮೈಸೂರಿನವರು. ಐಟಿ ಕ್ಷೇತ್ರದ ವಿವಿಧ ಹುದ್ದೆಗಳಲ್ಲಿ ಸುಮಾರು ಹದಿನೆಂಟು ವರ್ಷ ದುಡಿದ ಅನುಭವ. ೨೦೧೪ರಲ್ಲಿ ಅಂಕಣ ಬರಹಗಳ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶ ಮಾಡಿದರು. ಸಹನಾ ವಿಜಯಕುಮಾರ್ ಇವರು ‘ಕನ್ನಡ ಪ್ರಭ’ ಪತ್ರಿಕೆಗೆ ಪ್ರತೀ ಮಂಗಳವಾರ ‘ಕನ್ನಡಿ’ ಎನ್ನುವ ಅಂಕಣ ಬರೆಯುತ್ತಿದ್ದರು. ಬಹಳಷ್ಟು ಮೆಚ್ಚುಗೆ ಪಡೆದ ಈ ಅಂಕಣವು ಪುಸ್ತಕ ರೂಪದಲ್ಲೂ ಲಭ್ಯವಿದೆ. ೨೦೧೬ರಲ್ಲಿ ‘ಕ್ಷಮೆ’ ಎನ್ನುವ ಕಾದಂಬರಿಯನ್ನು ಬರೆದರು. ಇದು ಇವರ ಚೊಚ್ಚಲ ಕಾದಂಬರಿ. ಕನ್ನಡದಲ್ಲಿ ಹಲವಾರು ಮುದ್ರಣಗಳನ್ನು ಕಂಡ ‘ಕ್ಷಮೆ’ ಕಾದಂಬರಿ ಮರಾಠಿ ಭಾಷೆಗೂ ಅನುವಾದಗೊಳ್ಳುತ್ತಿದೆ. ೨೦೧೮ರಲ್ಲಿ ಇವರು ಬರೆದ ‘ಕಶೀರ’ ಕಾದಂಬರಿಯು ಕಶ್ಮೀರದ ಕಥಾವಸ್ತುವನ್ನು ಹೊಂದಿದೆ. ಕಶೀರ ಕಾದಂಬರಿಗೆ ಖ್ಯಾತ ಕಾದಂಬರಿಕಾರರಾದ ಎಸ್ ಎಲ್ ಭೈರಪ್ಪ ಮುನ್ನುಡಿ ಬರೆದಿದ್ದಾರೆ. ಇದು ಈಗಾಗಲೇ ಹಿಂದಿ, ಮರಾಠಿ ಹಾಗೂ ಆಂಗ್ಲ ಭಾಷೆಗೆ ಅನುವಾದಗೊಂಡಿದೆ. ಕಳೆದ ವರ್ಷ (೨೦೨೫) ನವೆಂಬರ್ ತಿಂಗಳಿನಲ್ಲಿ ಇವರು ಬರೆದ ಐತಿಹಾಸಿಕ ಕಾದಂಬರಿ ‘ಮಾಗಧ’ ಅಪಾರ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಉತ್ತಮ ಓದಿನ ಹವ್ಯಾಸ ಹೊಂದಿರುವ ಇವರು ಕಾದಂಬರಿ ರಚನೆಯಲ್ಲಿ ಸಿದ್ಧಹಸ್ತರಾಗಿದ್ದಾರೆ. ಇವರ ಇತರೆ ಕಾದಂಬರಿಗಳು ‘ಅವಸಾನ’, ಅಪರೋಕ್ಷ, ಸಹನಾ ವಿಜಯಕುಮಾರ್ ಇವರ ಸಾಹಿತ್ಯ ಸೇವೆಗೆ ‘ಚಡಗ’ ಪ್ರಶಸ್ತಿ ದೊರೆತಿದೆ. ಇವರ ಭಾಷೆಯ ಮೇಲಿನ ಹಿಡಿತ, ಸರಳವಾದ ಪದಗಳು ಸಾಮಾನ್ಯ ಓದುಗರನ್ನೂ ಆಕರ್ಷಿಸುತ್ತಿರುವುದಕ್ಕೆ ಕಾದಂಬರಿಗಳ ಪುನರ್ ಮುದ್ರಣವೇ ಸಾಕ್ಷಿ.

ಸಂಪಾದನೆ ಸೂಚಿಸಲು ಅಥವಾ ಈ ಪುಟವನ್ನು ವರದಿ ಮಾಡಲು ಲಾಗಿನ್ ಆಗಿ.