ಮುಖಪುಟ / ಪುಸ್ತಕ ಸಂಪದ / ಗಿರಿಕಂದರ ಎಸ್ಟೇಟ್
ಗಿರಿಕಂದರ ಎಸ್ಟೇಟ್

ಗಿರಿಕಂದರ ಎಸ್ಟೇಟ್

ಲೇಖಕರು: ಗಿರಿಮನೆ ಶ್ಯಾಮರಾವ್

ಪ್ರಕಾಶಕರು: ಗಿರಿಮನೆ ಪ್ರಕಾಶನ, ಲಕ್ಸ್ಮಿಪುರಂ ಬಡಾವಣೆ, ಸಕಲೇಶಪುರ-೫೭೩೧೩೪, ದೂ: ೯೭೩೯೫೨೫೫೧೪

₹225.00 ₹250.00 10% ರಿಯಾಯಿತಿ ಲಭ್ಯವಿದೆ
₹೨೫ ಉಳಿತಾಯ (10% ರಿಯಾಯಿತಿ)

ಪುಸ್ತಕದ ಬಗ್ಗೆ

ಮಲೆನಾಡಿನ ರೋಚಕ ಕಥೆಗಳು’ ಇದರ ೧೦ ನೆಯ ಭಾಗವೇ 'ಗಿರಿಕಂದರ ಎಸ್ಟೇಟ್'. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ಪರಿಸರವನ್ನು ತಮ್ಮ ಬರಹದಲ್ಲಿ ಹೊದ್ದುಕೊಂಡು ರೋಚಕ ಕಥನ ಮಾಲೆಯನ್ನು ಪೋಣಿಸಿದ್ದಾರೆ. ಅವರೇ ತಮ್ಮ ಕೃತಿಯ ಬಗ್ಗೆ ಬೆನ್ನುಡಿಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಇದು ಮಲೆನಾಡಿನ ರೋಚಕ ಕಥೆಗಳ ಸರಣಿಯ ಹತ್ತನೆಯ ಭಾಗ. ‘ಶೋಧ' ಎಂಬ ಹೆಸರಿನಲ್ಲಿ ‘ಮಂಗಳ' ವಾರಪತ್ರಿಕೆಯಲ್ಲಿ ಮೂಡಿಬಂದ ಜನಪ್ರಿಯ ಧಾರಾವಾಹಿ. ವೈವಿಧ್ಯಮಯವಾದ ಮಲೆನಾಡಿನ ರೋಚಕತೆಗಳ ಚಿತ್ರಣ ಇದರಲ್ಲೂ ಇದೆ. ಮಲೆನಾಡಿನ ಭಾಗವಾಗಿ ತೆಗೆದುಕೊಳ್ಳುವ ಇದರ ಮತ್ತೊಂದು ಮಗ್ಗುಲೇ ಅರೆಮಲೆನಾಡು. ಅದರ ನಂತರವೇ ಬಯಲು ಪ್ರದೇಶ ಸಿಗುವುದು. ಕಥೆಯ ಮೂಲಕ ಅಂತಹಾ ಅರೆಮಲೆನಾಡಿಗೆ ನಿಮ್ಮನ್ನು ಕರೆದೊಯ್ಯುವ ಪ್ರಯತ್ನ ಇದರಲ್ಲಿದೆ. ಪಶ್ಚಿಮಘಟ್ಟ ಪ್ರದೇಶಗಳು ಮನುಷ್ಯರ ವಾಸಕ್ಕೆ ಯೋಗ್ಯವಲ್ಲ. ಅದು ಪ್ರಾಣಿಗಳು ವಾಸ ಮಾಡುವ ಜಾಗ. ನಾವೀಗ ಅದನ್ನು ಅತಿಕ್ರಮಿಸಿ ಪ್ರಾಣಿಗಳನ್ನು ಹೊರದೂಡುತ್ತಾ ಅಥವಾ ನಾಶ ಮಾಡುತ್ತಾ ಅಲ್ಲಿ ನಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದೇವೆ ಅಷ್ಟೇ. ಈ ಅರೆಮಲೆನಾಡೇ ಮನುಷ್ಯವಾಸಕ್ಕೆ ನಿಜಕ್ಕೂ ಯೋಗ್ಯವಾದ ಸ್ಥಳ. ಇಲ್ಲಿ ಬೆಳೆಯುವ ಬೆಳೆಯೂ ಹುಲುಸು. ಕಾಫಿ ಮತ್ತು ‘ಕಪ್ಪು ಚಿನ್ನ' ಎಂದೇ ಪ್ರಸಿದ್ಧವಾದ ಕಾಳುಮೆಣಸು ಬೆಳೆಯಲು ಪ್ರಶಸ್ಥವಾದ ಪ್ರದೇಶ ಇದೇ. ತಪ್ಪಿ ಹೋದ ಹೆತ್ತವರನ್ನು ಡಿ.ಎನ್.ಎ. ತಂತ್ರಜ್ಞಾನದ ಮೂಲಕ ಹುಡುಕುವ ರೋಚಕ ಕಲ್ಪನೆಯ ಕಾದಂಬರಿಯ ಜೊತೆಗೇ ಸಾಗುವ ಇಲ್ಲಿನ ಪ್ರಕೃತಿ ಚಿತ್ರಣ ಮಾತ್ರ ನೈಜ.”
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹225.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?