ಮುಖಪುಟ / ಪುಸ್ತಕ ಸಂಪದ / ದಾಟು (ಹಾರ್ಡ್‌ಕವರ್)
ದಾಟು (ಹಾರ್ಡ್‌ಕವರ್)

ದಾಟು

ಲೇಖಕರು: ಎಸ್.ಎಲ್.ಭೈರಪ್ಪ

ಪ್ರಕಾಶಕರು: ಸಾಹಿತ್ಯ ಭಂಡಾರ

₹679.25 ₹715.00 5% ರಿಯಾಯಿತಿ ಲಭ್ಯವಿದೆ
₹೩೬ ಉಳಿತಾಯ (5% ರಿಯಾಯಿತಿ)

ಪುಸ್ತಕದ ಬಗ್ಗೆ

ಎಸ್. ಎಲ್. ಭೈರಪ್ಪ (ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ) ಅವರು ಕನ್ನಡ ಸಾಹಿತ್ಯ ಲೋಕದ ಅತ್ಯಂತ ಜನಪ್ರಿಯ, ಪ್ರಭಾವಶಾಲಿ ಹಾಗೂ ಅಗ್ರಗಣ್ಯ ಕಾದಂಬರಿಕಾರರು. ತಮ್ಮ ಆಳವಾದ ತತ್ವಶಾಸ್ತ್ರೀಯ ಚಿಂತನೆ, ಭಾರತೀಯ ಸಂಸ್ಕೃತಿ ಮತ್ತು ಸಾಮಾಜಿಕ ವಾಸ್ತವಗಳನ್ನು ತೆರೆದಿಡುವ ಕಾದಂಬರಿಗಳಿಗೆ ಇವರು ಅತ್ಯಂತ ಪ್ರಸಿದ್ಧರು. ಭೈರಪ್ಪನವರ ಕಾದಂಬರಿಗಳು ಕೇವಲ ಕಥೆಯನ್ನಷ್ಟೇ ಹೇಳದೆ ಮಾನವನ ಮನಸ್ಸಿನ ಆಳ, ಸತ್ಯದ ಹುಡುಕಾಟ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಚರ್ಚಿಸುತ್ತವೆ. ಇವರ ಹೆಚ್ಚಿನ ಕೃತಿಗಳು ಇಂಗ್ಲಿಷ್, ಹಿಂದಿ, ಮರಾಠಿ, ಸಂಸ್ಕೃತ ಸೇರಿದಂತೆ ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಬಹು ಚರ್ಚಿತ ಎಸ್ ಎಲ್ ಭೈರಪ್ಪನವರ ಕಾದಂಬರಿಯೇ ‘ದಾಟು’. ಇದು ಜಾತಿ ವ್ಯವಸ್ಥೆ ಮತ್ತು ಅದರ ಸಂಕೀರ್ಣತೆಗಳ ಬಗ್ಗೆ ಬರೆಯಲ್ಪಟ್ಟಿದೆ. ಹಾಗೆಂದು ಇದುದು ಕೇವಲ ಒಂದು ಜಾತಿಯ ಕಥೆಯಲ್ಲ; ವಿವಿಧ ಜಾತಿಗಳ ಆಚರಣೆ, ನಂಬಿಕೆ ಮತ್ತು ವೈರುದ್ಧಗಳನ್ನು ಬಿಂಬಿಸುತ್ತದೆ. ಬ್ರಾಹ್ಮಣ ಅರ್ಚಕನ ಮಗಳು ಸತ್ಯಭಾಮಾ ಮತ್ತು ಗೌಡ ಜಾತಿಯ ಶ್ರೀನಿವಾಸ ಇವರ ಸುತ್ತ ಕಥೆ ಸಾಗುತ್ತದೆ. ಮನುಷ್ಯ ಸಂಬಂಧಗಳನ್ನು ಹಳಿದು, ಜಾತಿ-ವರ್ಗಗಳ ಗಡಿಗಳನ್ನು ಮೀರಿ ನಿಲ್ಲುವ ಪ್ರಯತ್ನವನ್ನು ಕಾದಂಬರಿ ಎತ್ತಿಹಿಡಿಯುತ್ತದೆ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹679.25

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?