ಮುಖಪುಟ / ಪುಸ್ತಕ ಸಂಪದ / ಸಾಕ್ಷಿ (ಹಾರ್ಡ್‌ಕವರ್)
ಸಾಕ್ಷಿ (ಹಾರ್ಡ್‌ಕವರ್)

ಸಾಕ್ಷಿ

ಲೇಖಕರು: ಎಸ್.ಎಲ್.ಭೈರಪ್ಪ

ಪ್ರಕಾಶಕರು: ಸಾಹಿತ್ಯ ಭಂಡಾರ

₹495.00 ₹515.00 4% ರಿಯಾಯಿತಿ ಲಭ್ಯವಿದೆ
₹೨೦ ಉಳಿತಾಯ (4% ರಿಯಾಯಿತಿ)

ಪುಸ್ತಕದ ಬಗ್ಗೆ

ಎಸ್. ಎಲ್. ಭೈರಪ್ಪ (ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ) ಅವರು ಕನ್ನಡ ಸಾಹಿತ್ಯ ಲೋಕದ ಅತ್ಯಂತ ಜನಪ್ರಿಯ, ಪ್ರಭಾವಶಾಲಿ ಹಾಗೂ ಅಗ್ರಗಣ್ಯ ಕಾದಂಬರಿಕಾರರು. ತಮ್ಮ ಆಳವಾದ ತತ್ವಶಾಸ್ತ್ರೀಯ ಚಿಂತನೆ, ಭಾರತೀಯ ಸಂಸ್ಕೃತಿ ಮತ್ತು ಸಾಮಾಜಿಕ ವಾಸ್ತವಗಳನ್ನು ತೆರೆದಿಡುವ ಕಾದಂಬರಿಗಳಿಗೆ ಇವರು ಅತ್ಯಂತ ಪ್ರಸಿದ್ಧರು. ಭೈರಪ್ಪನವರ ಕಾದಂಬರಿಗಳು ಕೇವಲ ಕಥೆಯನ್ನಷ್ಟೇ ಹೇಳದೆ ಮಾನವನ ಮನಸ್ಸಿನ ಆಳ, ಸತ್ಯದ ಹುಡುಕಾಟ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಚರ್ಚಿಸುತ್ತವೆ. ಇವರ ಹೆಚ್ಚಿನ ಕೃತಿಗಳು ಇಂಗ್ಲಿಷ್, ಹಿಂದಿ, ಮರಾಠಿ, ಸಂಸ್ಕೃತ ಸೇರಿದಂತೆ ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ‘ಸಾಕ್ಷಿ’ ಒಂದು ಸಾಮಾಜಿಕ ಕಾದಂಬರಿಯಾಗಿದ್ದು ಕನ್ನಡದ ಪ್ರಸಿದ್ಧ ಲೇಖಕರಾದ ಎಸ್ ಎಲ್ ಭೈರಪ್ಪ ಬರೆದಿದ್ದಾರೆ. ಇದು 198೬ ರಲ್ಲಿ ಪ್ರಕಟವಾಯಿತು. ಸತ್ಯವನ್ನೇ ನಂಬಿ, ಸತ್ಯದ ಹಾದಿಯಲ್ಲೇ ನಡೆದು, ಸತ್ಯಕ್ಕಾಗಿಯೇ ಬದುಕಿ ಕೊನೆಗೆ ಅದು ತಂದೊಡ್ಡುವ ಅನಿವಾರ್ಯತೆಗೆ ಸಿಲುಕಿ ಅದರಿಂದ ಹೊರಬರಲಾಗದೆ ಸುಳ್ಳು ನುಡಿದ ಒಂದೇ ತಪ್ಪಿಗಾಗಿ (?) ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಕಾದಂಬರಿಯ ಪ್ರಮುಖ ಪಾತ್ರಧಾರಿ ಪರಮೇಶ್ವರಯ್ಯ. ಹಾಗೆ ಅವನು ಆತ್ಮಹತ್ಯೆ ಮಾಡಿಕೊಳ್ಳಲಿಕ್ಕೆ ಕಾರಣಗಳು, ಸುತ್ತಲ ಪರಿಸರ, ಸಂದರ್ಭ, ಬಲವಾದ ವಿರೋಧ, ಕಾರ್ಯಕಾರಣ ಸಂಬಂಧಗಳು ಏನೇ ಇದ್ದರೂ, ಯಾವ ಮೌಲ್ಯವನ್ನು ತನ್ನ ಬದುಕಿನ ಹಾದಿಯನ್ನಾಗಿ ಮಾಡಿಕೊಂಡಿದ್ದನೋ ಆ ಹಾದಿ ಅವನು ತಲುಪಬೇಕಾದ ಗಮ್ಯವನ್ನು ತಲುಪಲಿಕ್ಕೆ ಸೋಪಾನವಾಗಲಿಲ್ಲ ಎನ್ನುವುದು ಅವನ ಪಾಲಿನ ವಾಸ್ತವ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹495.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?