Sampada Logo

ಪೋಸ್ಟ್

ಥ್ರೆಡ್ ಸಂದರ್ಭ
ಕೆ.ಪಿ.ಅಶ್ವಿನ್ ರಾವ್
ಇಂದು ರಕ್ಷಾ ಬಂಧನ. ಸಹೋದರತೆಯ ಸಂಕೇತ. ನಾನು ಸಣ್ಣವನಿದ್ದಾಗ ನನಗೂ ಒಡಹುಟ್ಟಿದ ಅಕ್ಕ, ತಂಗಿ ಇರಬೇಕು, ಅವರು ನನಗೆ ರಾಖಿ ಕಟ್ಟಬೇಕು ಎನ್ನೋ ಆಸೆ ತುಂಬಾ ಇತ್ತು. ದೊಡ್ಡಪ್ಪ, ಚಿಕ್ಕಮ್ಮನ ಮಕ್ಕಳು ಬಂದು ರಾಖಿ ಕಟ್ಟಿ ಹೋಗುತ್ತಿದ್ದರು. ಮುಂದಿನ ದಿನಗಳಲ್ಲಿ ಪರಿಚಯದ ಹಲವಾರು ಮಂದಿ ರಾಖಿ ಕಟ್ಟುತ್ತಿದ್ದರು. ವರ್ಷಗಳು ಕಳೆದಂತೆ ಕೈಯಲ್ಲಿ ರಾಖಿಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತಿವೆ. ರಾಖಿ ಎನ್ನುವುದು ಕೇವಲ 'ಶೋ ಆಫ್' ವಸ್ತುವಾಯಿತೇ? ಯಾಂತ್ರಿಕ ಬದುಕಿನಲ್ಲಿ ಸಂಬಂಧಗಳನ್ನೇ ಮರೆತೆವಾ? ಇರಲಿ... ನಿಮ್ಮಲ್ಲಿ ರಕ್ಷಾಬಂಧನ ಹೇಗಾಯಿತು? ಬರೆಯಿರಿ. ಎಲ್ಲರಿಗೂ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು
೧೩೮
ಪ್ರಭಾಕರ ಹರ್ಲಾಪುರ
ನನ್ನ ಸಹೋದರಿ ಪೋಸ್ಟ್ ನಿಂದ ರಾಖಿಯನ್ನು ಕಳುಹಿಸಿದ್ದಾರೆ. ತುಂಬಾ ಖುಷಿ ಆಯಿತು.
12:43 PM · ಶುಕ್ರವಾರ, ಆಗಸ್ಟ್ ೨೮, ೨೦೨೬ · ೭೧ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!