ಕೆ.ಪಿ.ಅಶ್ವಿನ್ ರಾವ್
ashwinrao47
ಮೊನ್ನೆ ಅಟ್ಟದಲ್ಲಿ ಏನೋ ಹುಡುಕುವಾಗ ಹಳೆಯ ಎರಡು ತಾಮ್ರದ ಪಾತ್ರೆಗಳು ಸಿಕ್ಕವು. ನೋಡುವಾಗಲೇ ಬಹಳ ಹಿಂದಿನವು ಎಂದು ಗೊತ್ತಾಗುತ್ತಿತ್ತು. ಅದನ್ನು ನೋಡಿದ ಕೂಡಲೇ ಅಮ್ಮನಿಗೆ ಅದಕ್ಕೆ 'ಕಲಾಯಿ' (ಪಾಲಿಷ್) ಮಾಡಿಸುವ ಮನಸ್ಸಾಯಿತು.
ಎಲ್ಲಾ ಕಡೆ ಕೇಳಿದೆವು. ಈಗ ಕಲಾಯಿ ಹಾಕುವವರೇ ಇಲ್ಲ. ದೇವಸ್ಥಾನದಲ್ಲೂ ಕೇಳಿದೆವು. ಅಲ್ಲಿಯೂ ಸ್ಟೀಲ್ ಪಾತ್ರೆಗಳದ್ದೇ ಕಾರುಬಾರು. ಕೊನೆಗೆ ಒಂದು ಪಾತ್ರೆಯ ಅಂಗಡಿಯಲ್ಲಿ ಕಲಾಯಿ ಹಾಕುವವರು ಒಬ್ಬರು ಸಿಕ್ಕರು. ಬೆಲೆ ಜಾಸ್ತಿ ಆಗುತ್ತೆ ಎಂದು ಎಚ್ಚರಿಸಿಯೇ ಬಿಟ್ಟರು. ಹಣ ಎಷ್ಟಾದರೂ ತೊಂದರೆ ಇಲ್ಲ ಕಲಾಯಿ ಹಾಕಿಸೋದೇ ಎಂದ ಬಳಿಕ ಪಾತ್ರೆ ಕೊಟ್ಟು ಬಂದಿರುವೆ. ರೆಡಿ ಆದ ಬಳಿಕ ಚಿತ್ರ ಹಾಕುವೆ
3:31 PM
·
ಮಂಗಳವಾರ, ಅಕ್ಟೋಬರ್ ೧೩, ೨೦೨೬
·
೨೩೧ ವೀಕ್ಷಣೆಗಳು
೧
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು