ಕೆ.ಪಿ.ಅಶ್ವಿನ್ ರಾವ್
ashwinrao47
ನಾನು ಸಣ್ಣವರಿದ್ದಾಗ ದೀಪಾವಳಿ ಬಂದಾಗ ದಿನವಿಡೀ ಪಟಾಕಿ ಹೊಡೆಯುತ್ತಿದ್ದೆವು. ಹಗಲಲ್ಲಾದರೆ ಬಿಡಿ ಪಟಾಕಿ, ಬೆಳ್ಳುಳ್ಳಿ, ಕ್ಯಾಪ್, ಪಿಸ್ತೂಲು ಕ್ಯಾಪ್ ಹೀಗೆ ಶಬ್ಧ ಮಾಡುವ ಪಟಾಕಿಯಾದರೆ, ರಾತ್ರಿ ಮಳೆ, ನೆಲಚಕ್ರ, ನಕ್ಷತ್ರ ಕಡ್ಡಿ, ರಾಕೆಟ್ ಹೀಗೆ ಬಣ್ಣದ ಚಿತ್ತಾರ ಮೂಡಿಸುವ ಪಟಾಕಿಗಳನ್ನು ಹೊಡೆಯುತ್ತಿದ್ದೆವು.
ದಿನಗಳೆದಂತೆ ಪಟಾಕಿಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎನ್ನುವ ಕಾರಣದಿಂದ ರಾತ್ರಿ ಎರಡು ಗಂಟೆ ಮಾತ್ರ (೮ ರಿಂದ ೧೦) ಪಟಾಕಿ ಹೊಡೆಯಲು ಅನುಮತಿ ನೀಡಲಾಗಿದೆ. ಹಸಿರು ಪಟಾಕಿ ಎಂದು ಮೋಸ ಮಾಡುವವರೂ, ಪಟಾಕಿ ತಯಾರಿಕಾ ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರೂ ಇದ್ದಾರೆ. ಪಟಾಕಿ ಬಗ್ಗೆ ನಿಮ್ಮ ಅನಿಸಿಕೆ ಏನು?
10:26 AM
·
ಗುರುವಾರ, ನವೆಂಬರ್ ೦೫, ೨೦೨೬
·
೬೪ ವೀಕ್ಷಣೆಗಳು
೧
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು