ಥ್ರೆಡ್ ಸಂದರ್ಭ
ನೀವು ಎಲ್ಲೇ ವಾಸವಿದ್ದರೂ ಸರಿ. ನಿಮ್ಮ ಮನೆಯ ಹತ್ತಿರದ ಯಾವುದೇ ಮನೆಯಲ್ಲಿ 70 ವರುಷ ವಯಸ್ಸು ದಾಟಿದವರು ಇದ್ದರೆ ಅವರನ್ನೊಮ್ಮೆ ಮಾತನಾಡಿಸಿ. ಯಾಕೆಂದರೆ ಅವರು ನಡೆದಾಡುವ ವಿಶ್ವಕೋಶ ಇದ್ದಂತೆ. ಅವರ ಜೀವನಾನುಭವ ಕಥನದ ಒಂದೊಂದು ಪುಟವೂ ಬೆಲೆ ಕಟ್ಟಲಾಗದ್ದು. ಅವರು ತಿಳಿಸಿದ್ದನ್ನು ಅವರ ಮಾತುಗಳಲ್ಲೇ ದಾಖಲಿಸಿ. ಹೀಗೆ ನೂರು ಹಿರಿಯರ ಬದುಕಿನ ಪಾಠವನ್ನು ಒಂದೊಂದು ಪುಟದಲ್ಲಿ ಬರೆದರೆ, ಅದುವೇ ಅಮೂಲ್ಯ ಪುಸ್ತಕವಾದೀತು, ಅಲ್ಲವೇ?
ಕೆ.ಪಿ.ಅಶ್ವಿನ್ ರಾವ್
ashwinrao47
ನಿಮ್ಮ ಮಾತು ನೂರು ಶೇಕಡಾ ಸತ್ಯ ಸರ್, ಇದಕ್ಕೆ ಸಾಕ್ಷಿ ನೀವು ಪ್ರಕಟಿಸುತ್ತಿರುವ ನಿಮ್ಮ ತಂದೆಯವರ ಜೀವನಗಾಥೆಯ ಪುಟಗಳು. ಓದುತ್ತಾ ಓದುತ್ತಾ ಅವರ ಜ್ಞಾನ, ಕೃಷಿಯಲ್ಲಿಯ ಸಾಹಸಗಳು, ಗ್ರಂಥಾಲಯದ ಕಲ್ಪನೆ ಅದನ್ನು ಬೆಳೆಸುವ ಮನಸ್ಸು ಎಲ್ಲವನ್ನೂ ಓದುವಾಗ ನನಗೆ ಹಿರಿಯರ ಅನುಭವದ ಕಥನದ ಅಗತ್ಯತೆ ತಿಳಿಯುತ್ತದೆ.
10:39 AM
·
ಸೋಮವಾರ, ಆಗಸ್ಟ್ ೩೧, ೨೦೨೬
·
೮೫ ವೀಕ್ಷಣೆಗಳು
೦
ಪ್ರತಿಕ್ರಿಯೆಗಳು
ಮರುಪೋಸ್ಟ್ಗಳು
ಇಷ್ಟಗಳು
ಪೋಸ್ಟ್ ಮಾಡಲು ಲಾಗಿನ್ ಆಗಿ
ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!