ಥ್ರೆಡ್ ಸಂದರ್ಭ
ಗೇರುಹಣ್ಣನ್ನು ಗಮನಿಸಿದ್ದೀರಾ? ನಾವು "ಹಣ್ಣು" ಎಂದು ಭಾವಿಸಿದ್ದು ನಿಜವಾಗಿ "ಹುಸಿಹಣ್ಣು". ಅದು ಹಣ್ಣಿನ ಪುಷ್ಪಕಾಂಡ ಅಥವಾ ಹೂದಂಟು! ಅದರ ತುದಿಯಲ್ಲಿರುವುದೇ ನಿಜವಾದ ಗೇರುಹಣ್ಣು. ಅದರ ಗಟ್ಟಿ ಸಿಪ್ಪೆ ಒಡೆದರೆ ಒಳಗಿರುವುದೇ ಗೇರುಬೀಜ. ಹಾಗೆಯೇ ಅನಾನಸ್ ಒಂದೇ ಹಣ್ಣಲ್ಲ. ಅದು ನೂರಾರು ಹಣ್ಣುಗಳಿಂದಾದ ಸಂಯುಕ್ತ ಫಲ! ಅನಾನಸಿನ ಹೂಗುಚ್ಛ ಬೆಳೆದು ಪ್ರತಿಯೊಂದು ಹೂ ಬೀಜವಿಲ್ಲದ ಹಣ್ಣಾಗುತ್ತದೆ. ಇವೆಲ್ಲವೂ ಹೂಗುಚ್ಛದ ಅಕ್ಷ ಮತ್ತು ಹೂಗಳ ಪುಷ್ಪಪಾತ್ರದ ಜೊತೆ ಸೇರಿಕೊಂಡು ಸಂಯುಕ್ತ ಫಲ ರೂಪುಗೊಳ್ಳುತ್ತದೆ. ಇದರಲ್ಲಿ ಬೀಜಗಳಿರುವುದು ತೀರಾ ಅಪರೂಪ. ಪ್ರಕೃತಿಯ ವಿಸ್ಮಯಗಳು ಒಂದೆರಡಲ್ಲ.
ಕೆ.ಪಿ.ಅಶ್ವಿನ್ ರಾವ್
ashwinrao47
ನಿಮ್ಮ ಮಾತು ನಿಜ ಸರ್, ಪ್ರಕೃತಿಯಲ್ಲಿರುವ ನೂರಾರು ವಿಸ್ಮಯಗಳಲ್ಲಿ ಇವೂ ಒಂದು. ವಿಜ್ಞಾನದ ವಿದ್ಯಾರ್ಥಿಯಾದುದರಿಂದ ಇದನ್ನು ಹಿಂದೆಯೇ ಓದಿಕೊಂಡಿದ್ದೆ. ನಿಮ್ಮ ಬರಹದಿಂದ ಮತ್ತೆ ನೆನಪಾಯಿತು. ಉತ್ತರ ಭಾರತದ ಬಹಳಷ್ಟು ಕಡೆ ಗೇರು ಬೀಜವು ಹಣ್ಣಿನ ಒಳಗಡೆ (ಸೇಬು, ಮಾವಿನಹಣ್ಣು ಇದ್ದಂತೆ) ಇರುವುದೆಂದೇ ಈಗಲೂ ನಂಬಿದ್ದಾರೆ.
9:44 PM
·
ಭಾನುವಾರ, ಸೆಪ್ಟೆಂಬರ್ ೨೭, ೨೦೨೬
·
೭೬ ವೀಕ್ಷಣೆಗಳು
೦
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು
ಪೋಸ್ಟ್ ಮಾಡಲು ಲಾಗಿನ್ ಆಗಿ
ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!