ಕೆ.ಪಿ.ಅಶ್ವಿನ್ ರಾವ್
ashwinrao47
ನಮ್ಮ ದೇಶದ ಎರಡನೇ ಅತೀ ದೊಡ್ಡ ತೈಲ ಸಂಸ್ಕರಣ ಸಂಸ್ಥೆಯಾದ ಎಂ ಆರ್ ಪಿ ಇಲ್ ನಲ್ಲಿ ಇತ್ತೀಚೆಗೆ ದುರ್ಘಟನೆಯೊಂದು ನಡೆದು ಅಮಾಯಕ ಜೀವವೊಂದು ಬಲಿಯಾಯಿತು. ಇದನ್ನೇ ನೆಪವಾಗಿಟ್ಟುಕೊಂಡು ಕಾರ್ಖಾನೆಯನ್ನು ಮುಚ್ಚಬೇಕು ಎಂದು ಕೆಲವು ಮಂದಿ ಕೂಗಾಡುತ್ತಿರುವುದು ಎಷ್ಟು ಸರಿ?
ಸಾವಿರಾರು ಮಂದಿಗೆ ಕೆಲಸ ನೀಡಿದ ಮತ್ತು ಇನ್ನೂ ಸಾವಿರಾರು ಮಂದಿಗೆ ಪರೋಕ್ಷವಾಗಿ ಆದಾಯ ನೀಡುತ್ತಿರುವ ಇಷ್ಟೊಂದು ದೊಡ್ಡ ಸಂಸ್ಥೆಯನ್ನು ಬಂದ್ ಮಾಡಿ ಎಂದು ಹೇಳುವುದು ನ್ಯಾಯೋಚಿತವೇ? ಕನ್ನಡಿಗರಿಗೆ ಇನ್ನೂ ಸ್ವಲ್ಪ ಮಟ್ಟಿನ ಪ್ರಾಧಾನ್ಯತೆಯನ್ನು ನೀಡಬೇಕಾಗಿರುವುದು ಉಚಿತವೇ ಆದರೂ ಇಡೀ ಸಂಸ್ಥೆಯನ್ನೇ ಬಂದ್ ಮಾಡಿ ಎನ್ನುವ ಕೂಗು ಎಷ್ಟರ ಮಟ್ಟಿಗೆ ಸರಿ?
7:46 AM
·
ಶನಿವಾರ, ಅಕ್ಟೋಬರ್ ೦೩, ೨೦೨೬
·
೧೨೦ ವೀಕ್ಷಣೆಗಳು
೧
ಪ್ರತಿಕ್ರಿಯೆಗಳು
ಮರುಪೋಸ್ಟ್ಗಳು
ಇಷ್ಟಗಳು