Sampada Logo

ಪೋಸ್ಟ್

ಥ್ರೆಡ್ ಸಂದರ್ಭ
ಪ್ರಭಾಕರ ಹರ್ಲಾಪುರ
ಪರ್ವ – ಎಸ್. ಎಲ್. ಭೈರಪ್ಪ - ಮಹಾಭಾರತವನ್ನು ಹೊಸ ದೃಷ್ಟಿಕೋನದಿಂದ ನೋಡುವ ವಿಶಿಷ್ಟ ಕಾದಂಬರಿ. ಇಲ್ಲಿ ಪೌರಾಣಿಕ ಪಾತ್ರಗಳನ್ನು ದೇವರುಗಳಂತೆ ಅಲ್ಲದೆ, ಆಸೆ, ನೋವು, ದ್ವೇಷ, ಭಯ ಮತ್ತು ತೊಳಲಾಟಗಳಿರುವ ಸಾಮಾನ್ಯ ಮನುಷ್ಯರಂತೆ ಚಿತ್ರಿಸಲಾಗಿದೆ. ಕಾದಂಬರಿಯ ಮೂಲಕ ಯುದ್ಧ, ಅಧಿಕಾರ, ಕುಟುಂಬ ಸಂಬಂಧಗಳು, ಸಾಮಾಜಿಕ ವ್ಯವಸ್ಥೆ ಮತ್ತು ಮನುಷ್ಯನ ಮನಸ್ಸಿನ ಸಂಘರ್ಷಗಳನ್ನು ಲೇಖಕರು ಆಳವಾಗಿ ತೆರೆದಿಡುತ್ತಾರೆ. ವಿವಿಧ ಪಾತ್ರಗಳ ದೃಷ್ಟಿಕೋನದಿಂದ ಕಥೆಯನ್ನು ಹೇಳಿರುವುದು ಕೃತಿಯ ವಿಶೇಷತೆ. ಮಹಾಭಾರತದ ಮೂಲಕ ಮನುಷ್ಯನನ್ನು ಅರ್ಥಮಾಡಿಕೊಳ್ಳುವ ಒಂದು ಅದ್ಭುತ ಪ್ರಯತ್ನ. sampada.net/sb/3w
ಸಂಪದ - Sampada.net
ಪರ್ವ — ಎಸ್ ಎಲ್ ಭೈರಪ್ಪ
ಸಂಪದ - ಕನ್ನಡದ ಅಂತರ್ಜಾಲ ಸಾಹಿತ್ಯ ಪತ್ರಿಕೆ. ಹೊಸ ಚಿಗುರು, ಹಳೆ ಬೇರು.
೨೦೨
ಕೆ.ಪಿ.ಅಶ್ವಿನ್ ರಾವ್
ಪರ್ವ ಪೂರ್ತಿಯಾಗಿ ಓದಿಲ್ಲ. ಆದರೆ 'ಪರ್ವ' ದಲ್ಲಿ ಕಂಡು ಬರುವ ಶ್ರೀಕೃಷ್ಣ ಹಾಗೂ ಗಾಂಧಾರಿಯ ನಡುವಿನ ಸಂಭಾಷಣೆ ಅತ್ಯದ್ಭುತ. ಎಸ್ ಎಲ್ ಭೈರಪ್ಪನವರು ಬಹಳ ಮನೋಜ್ಞವಾಗಿ ಈ ಅಧ್ಯಾಯವನ್ನು ಬರೆದಿದ್ದಾರೆ. ಪೂರ್ತಿಯಾಗಿ 'ಪರ್ವ' ಓದುವ ಮನಸ್ಸಿದೆ. ಆದರೆ ಕಾಲ ಕೂಡಿಬರಬೇಕಷ್ಟೇ...
9:49 AM · ಗುರುವಾರ, ಅಕ್ಟೋಬರ್ ೦೮, ೨೦೨೬ · ೬೫ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!