Sampada Logo

ಪೋಸ್ಟ್

ಥ್ರೆಡ್ ಸಂದರ್ಭ
ಕೆ.ಪಿ.ಅಶ್ವಿನ್ ರಾವ್
ಮೊನ್ನೆ ಅಟ್ಟದಲ್ಲಿ ಏನೋ ಹುಡುಕುವಾಗ ಹಳೆಯ ಎರಡು ತಾಮ್ರದ ಪಾತ್ರೆಗಳು ಸಿಕ್ಕವು. ನೋಡುವಾಗಲೇ ಬಹಳ ಹಿಂದಿನವು ಎಂದು ಗೊತ್ತಾಗುತ್ತಿತ್ತು. ಅದನ್ನು ನೋಡಿದ ಕೂಡಲೇ ಅಮ್ಮನಿಗೆ ಅದಕ್ಕೆ 'ಕಲಾಯಿ' (ಪಾಲಿಷ್) ಮಾಡಿಸುವ ಮನಸ್ಸಾಯಿತು. ಎಲ್ಲಾ ಕಡೆ ಕೇಳಿದೆವು. ಈಗ ಕಲಾಯಿ ಹಾಕುವವರೇ ಇಲ್ಲ. ದೇವಸ್ಥಾನದಲ್ಲೂ ಕೇಳಿದೆವು. ಅಲ್ಲಿಯೂ ಸ್ಟೀಲ್ ಪಾತ್ರೆಗಳದ್ದೇ ಕಾರುಬಾರು. ಕೊನೆಗೆ ಒಂದು ಪಾತ್ರೆಯ ಅಂಗಡಿಯಲ್ಲಿ ಕಲಾಯಿ ಹಾಕುವವರು ಒಬ್ಬರು ಸಿಕ್ಕರು. ಬೆಲೆ ಜಾಸ್ತಿ ಆಗುತ್ತೆ ಎಂದು ಎಚ್ಚರಿಸಿಯೇ ಬಿಟ್ಟರು. ಹಣ ಎಷ್ಟಾದರೂ ತೊಂದರೆ ಇಲ್ಲ ಕಲಾಯಿ ಹಾಕಿಸೋದೇ ಎಂದ ಬಳಿಕ ಪಾತ್ರೆ ಕೊಟ್ಟು ಬಂದಿರುವೆ. ರೆಡಿ ಆದ ಬಳಿಕ ಚಿತ್ರ ಹಾಕುವೆ
ಚಿತ್ರ
೨೩೧
ಹರಿ ಪ್ರಸಾದ್ ನಾಡಿಗ್
ತಿರುವಣ್ಣಾಮಲೈಗೆ ಹೋದಾಗ ತಾಮ್ರದ ಪಾತ್ರೆಗಳಿಗೆ ಕಲಾಯಿ ಹಾಕುತ್ತಿರುವುದನ್ನು ನೋಡಿದ್ದೆ. ಈಗ ನಮ್ಮ ರಾಜ್ಯದ ಸಣ್ಣ ಊರುಗಳಲ್ಲಿ ಕಲಾಯಿ ಹಾಕುವವರು ಸಿಗುವುದೇ ಇಲ್ಲ. ಕೆಲವು ತಾಮ್ರದ ಪಾತ್ರೆಗಳನ್ನು ನಾವು ಕೊಂಡು ತಂದಿದ್ದೆವು. ಅಲ್ಲಿಯೇ ಕಲಾಯಿ ಹಾಕಿಸಿಕೊಂಡು ತಂದಿದ್ದೆವು.
೯೦
ಕೆ.ಪಿ.ಅಶ್ವಿನ್ ರಾವ್
ನಿಮ್ಮ ಮಾತು ನಿಜ ಸರ್, ಮೊದಲು ಮನೆಗೇ ಬಂದು ತಾಮ್ರದ ಪಾತ್ರೆಗಳನ್ನು ತೆಗೆದುಕೊಂಡು ಹೋಗಿ ಕಲಾಯಿ ಹಾಕಿಸಿ ತಂದುಕೊಡುತ್ತಿದ್ದರು. ಈಗ ಎಷ್ಟು ಹುಡುಕಿದರೂ ಜನ ಸಿಗುತ್ತಿಲ್ಲ. ಈ ಒಂದು ಕಲೆ ಕ್ರಮೇಣ ನಶಿಸಿಯೇ ಹೋಗ ಬಹುದೇನೋ?
5:11 PM · ಮಂಗಳವಾರ, ಅಕ್ಟೋಬರ್ ೧೩, ೨೦೨೬ · ೭೧ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!