Sampada Logo

ಪೋಸ್ಟ್

ಅಡ್ಡೂರು ಕೃಷ್ಣ ರಾವ್
ಇವತ್ತಿನ ೮೦ನೇ ಸ್ವಾತಂತ್ರ್ಯ ದಿನದಂದು ಬೆಳಗಾಗುತ್ತಿದ್ದಂತೆ ನನಗೆ ಕಾಡಿದ್ದು "ನಮ್ಮ ಹೆಮ್ಮೆಯ ಭಾರತ" ಎಂಬ ನನ್ನ ಪುಸ್ತಕ ರೂಪುಗೊಂಡ ಬಗೆ. ೨೦೨೦ ಆಗಸ್ಟ್ ೧೫ರ ಸ್ವಾತಂತ್ರ್ಯ ದಿನದಂದು ಬಾಲ್ಯದ ದಿನಗಳಲ್ಲಿ ಆ ದಿನಾಚರಣೆಯ ಸಂಭ್ರಮ ಹೇಗಿತ್ತು ಎಂಬ ನೆನಪುಗಳು ನುಗ್ಗಿ ಬಂದಿದ್ದವು. ಆಗ, ನಮ್ಮ ದೇಶದ ಸಾಧನೆಗಳ ಚಿತ್ರಗಳು ಮನಃಪಟಲದಲ್ಲಿ ಪುಟಿದೆದ್ದವು. ಅವನ್ನು ಪಟ್ಟಿ ಮಾಡಲು ಶುರು ಮಾಡಿದಾಗ, ೨೫ ಸಾಧನೆಗಳ ನಂತರ ಮುಂದುವರಿಸಲು ನೆನಪು ಸಹಕರಿಸಲಿಲ್ಲ. ಆಗ ಒಂದು ನೂರು ಸಾಧನೆಗಳ ಬಗ್ಗೆ ಬರೆಯುವ ಸಂಕಲ್ಪ ಮಾಡಿದೆ. ಅದರ ಫಲವೇ ಆ ಪುಸ್ತಕ. ನೀವೂ ಇಂತಹ ಸಂಕಲ್ಪ ಮಾಡಿ ಸಾಕಾರಗೊಳಿಸಿದ್ದರೆ ಹಂಚಿಕೊಳ್ಳಿ.
9:45 PM · ಶನಿವಾರ, ಆಗಸ್ಟ್ ೧೫, ೨೦೨೬ · ೨೩೯ ವೀಕ್ಷಣೆಗಳು
೧ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

ಕೆ.ಪಿ.ಅಶ್ವಿನ್ ರಾವ್
ಅಡ್ಡೂರ್ ಸರ್, ನೀವು ಬರೆಯುತ್ತಿದ್ದ ನಮ್ಮ ಹೆಮ್ಮೆಯ ಭಾರತದ ಬರಹಗಳನ್ನು 'ಸಂಪದ' ದಲ್ಲಿ ಇಷ್ಟ ಪಟ್ಟು ಓದುತ್ತಿದ್ದವನು ನಾನು. ಬರಹ ಕೆಲವೇ ಸಾಲಿನದ್ದಾಗಿದ್ದರೂ ಅಗಾಢ ಮಾಹಿತಿಯನ್ನು ಒಳಗೊಂಡಿತ್ತು. ನಂತರ ಅದೇ ಬರಹಗಳು ಪುಸ್ತಕರೂಪದಲ್ಲಿ ಹೊರ ಬಂದಾಗ ಬಹಳ ಖುಷಿ ಆಗಿತ್ತು. ಭಾರತದ ಬಗ್ಗೆ ವಿಷಯಗಳು ಸಾವಿರಾರು ಇರಬಹುದು ಆದರೆ ಪ್ರತೀ ವಾರ ಒಂದು ಚೌಕಟ್ಟಿನೊಳಗೆ ಅವುಗಳನ್ನು ರಸವತ್ತಾಗಿ ಓದುಗರಿಗೆ ಉಣ ಬಡಿಸುವುದು ಕಷ್ಟದ ಕೆಲಸವೇ ಸರಿ. ಆದರೆ ಅಡ್ದೂರು ಸರ್ ಅವರು ಅದನ್ನು ಬಹಳ ಅಚ್ಚುಕಟ್ಟಾಗಿ ನೂರು ವಾರಗಳ ಕಾಲ ಮಾಡುತ್ತಾ ಬಂದಿದ್ದರು. ಅಭಿನಂದನೆಗಳು. ಓದುಗರೂ ಪ್ರಯತ್ನ ಪಟ್ಟು ಆಸಕ್ತಿದಾಯಕ ವಿಷಯ ಬರೆಯಬಹುದಲ್ಲಾ...
೭೯