Sampada Logo

ಪೋಸ್ಟ್

ಥ್ರೆಡ್ ಸಂದರ್ಭ
ಅಡ್ಡೂರು ಕೃಷ್ಣ ರಾವ್
ಮಂಗಳೂರಿನ ಸಂಘನಿಕೇತನದಲ್ಲಿ ಸಾಹಿತ್ಯ ಕೇಂದ್ರ ಆಯೋಜಿಸಿರುವ ಮೂರು ದಿನಗಳ ಪುಸ್ತಕ ಹಬ್ಬ ನಿನ್ನೆ ಶುರುವಾಗಿದೆ. ಸಂಜೆ ಹೋದಾಗ ಅಲ್ಲಿ ಜೋಡಿಸಿಟ್ಟ ಸಾವಿರಾರು ಪುಸ್ತಕಗಳು ಗಮನ ಸೆಳೆದವು. ಯಾಕೆಂದರೆ ಬಹುಪಾಲು ಪುಸ್ತಕಗಳು ಇಲ್ಲಿನ ಪುಸ್ತಕದ ಮಳಿಗೆಗಳಲ್ಲಿ ಲಭ್ಯವಿಲ್ಲದ ಅಪರೂಪದ ಪುಸ್ತಕಗಳು. ಅಲ್ಲಿ ಹಲವರು ಪುಸ್ತಕಗಳನ್ನು ಪರಿಶೀಲಿಸುತ್ತಿದ್ದ ಮತ್ತು ಕೆಲವರು ತಾವು ಆಯ್ದ ಪುಸ್ತಕಗಳ ಖರೀದಿಗೆ ಬಿಲ್ ಮಾಡಿಸುತ್ತಿದ್ದ ನೋಟಗಳು ಜನಸಾಮಾನ್ಯರ ಪುಸ್ತಕ ಪ್ರೀತಿಯ ಬಗ್ಗೆ ಭರವಸೆ ಮೂಡಿಸಿದವು.
೧೬೪
ಕೆ.ಪಿ.ಅಶ್ವಿನ್ ರಾವ್
ಹೌದು ಸರ್, ನಾನೂ ನಿನ್ನೆ ಹೋಗಿದ್ದೆ. ಬಹಳಷ್ಟು ಶಾಲಾ ಮಕ್ಕಳು ಬಂದು ಕುತೂಹಲದಿಂದ ಪುಸ್ತಕಗಳನ್ನು ವೀಕ್ಷಿಸಿ, ಕನಿಷ್ಟ ಒಂದಾದರೂ ಪುಸ್ತಕ ಖರೀದಿಸಿ ಬಿಲ್ ನ ಸಾಲಿನಲ್ಲಿ ನಿಂತಿರುವುದು ನೋಡಿದಾಗ ಇನ್ನೂ ಮುದ್ರಿತ ಪುಸ್ತಕಗಳಿವೆ ಭವಿಷ್ಯ ಇದೆ ಎಂದನಿಸಿತು.
6:49 PM · ಸೋಮವಾರ, ಆಗಸ್ಟ್ ೧೭, ೨೦೨೬ · ೯೪ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!