ಥ್ರೆಡ್ ಸಂದರ್ಭ
ಬಾಲ್ಯದ ನೆನಪು – ನಾಗರ ಪಂಚಮಿ ಎಂದರೆ ನಮಗೆ ಬಲು ಇಷ್ಟವಾದ ಹಬ್ಬ. ಏಕೆಂದರೆ ಈ ಹಬ್ಬದಲ್ಲಿ ಬಗೆಬಗೆಯ ಉಂಡೆಗಳನ್ನು ಮಾಡುವುದು ರೂಢಿ. ಹಬ್ಬದ ಮರುದಿನ ನಮ್ಮ ಗುರುಗಳು, “ನಿಮ್ಮ ನಿಮ್ಮ ಮನೆಯಲ್ಲಿ ತಯಾರಿಸಿದ ಉಂಡೆಗಳನ್ನು ನಾಳೆ ಶಾಲೆಗೆ ತೆಗೆದುಕೊಂಡು ಬರಬೇಕು,” ಎಂದು ಹೇಳಿದರು. ಆಗ ನಮಗೆ ಗುರುಗಳಿಗೆ ಉಂಡೆಗಳ ಮೇಲೆ ಆಸೆ ಇರಬಹುದು ಎಂದು ಅನಿಸಿತ್ತು.
ಮರುದಿನ ಎಲ್ಲರೂ ತಂದ ಉಂಡೆಗಳನ್ನು ದೊಡ್ಡ ಬುಟ್ಟಿಯಲ್ಲಿ ಹಾಕಿಸಿ, ಅವುಗಳನ್ನು ಎಲ್ಲ ತರಗತಿಗಳಿಗೂ ಹಂಚಲು ಹೇಳಿದರು. ಆಗ ನಮಗೆ ತಿಳಿಯಿತು—ಗುರುಗಳು ಕಲಿಸಿದ್ದು ಹಂಚಿಕೊಂಡು ತಿನ್ನುವ ಗುಣವನ್ನು ಎಂದು.
ನಿಮಗೂ ಇಂತಹ ಅನುಭವ ಆಗಿದೆಯೇ?
ಕೆ.ಪಿ.ಅಶ್ವಿನ್ ರಾವ್
ashwinrao47
ನಿಮ್ಮಗುರುಗಳದ್ದು ಉದಾತ್ತ ಗುಣ. ಹಂಚಿಕೊಳ್ಳುವ ಅಭ್ಯಾಸ ಬಾಲ್ಯದಿಂದಲೂ ಬೆಳೆದು ಬಂದರೆ ಉತ್ತಮ. ನಾಗರ ಪಂಚಮಿಯಂದು ನನ್ನ ಅಜ್ಜ ಸುರಿಯುತ್ತಿರುವ ಜೋರಾದ ಮಳೆಯ ಸೊಂಟದವರೆಗೆ ಉಕ್ಕಿ ಹರಿಯುತ್ತಿರುವ ನೀರಿನಲ್ಲಿ ಪೂಜೆಗೆ ಕರೆದುಕೊಂಡು ಹೋದದ್ದು ನಿಮ್ಮ ಬಾಲ್ಯದ ಘಟನೆಯಿಂದ ನನಗೂ ನೆನಪಾಯಿತು. ನನಗಾಗ ಹತ್ತೋ ಹನ್ನೆರಡೋ ವರ್ಷ ಇರಬೇಕು ಎಂದು ಅನಿಸುತ್ತೆ.
6:52 PM
·
ಸೋಮವಾರ, ಆಗಸ್ಟ್ ೧೭, ೨೦೨೬
·
೧೧೭ ವೀಕ್ಷಣೆಗಳು
೦
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು
ಪೋಸ್ಟ್ ಮಾಡಲು ಲಾಗಿನ್ ಆಗಿ
ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!