Sampada Logo

ಪೋಸ್ಟ್

ಥ್ರೆಡ್ ಸಂದರ್ಭ
ಕೆ.ಪಿ.ಅಶ್ವಿನ್ ರಾವ್
ಮಳೆ ಕೊರತೆಯಿಂದ ಸೆಖೆಯ ಪ್ರಮಾಣ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ತಂಪಾಗಿ ಏನಾದರೂ ಕುಡಿಯುವ ಎಂದು ಮನಸ್ಸಾದಾಗ ನನಗೆ ಮೊದಲು ಹೊಳೆಯುವುದೇ ಕಬ್ಬಿನ ಹಾಲು. ಶುಂಠಿ, ನಿಂಬೆ ರಸ ಸೇರಿಸಿ ತಯಾರಿಸಿದ ಕಬ್ಬಿನ ಹಾಲು ಕುಡಿಯಲು ಅಮೃತ ಸಮಾನ. ಆದರೆ ರಸ್ತೆ ಬದಿಯಲ್ಲಿ ಕಬ್ಬಿನ ಹಾಲು ಸೇವಿಸುವಾಗ ಸ್ವಚ್ಛತೆಯ ಬಗ್ಗೆ ಗಮನವಹಿಸಿ. ಮುಖ್ಯವಾಗಿ ತಂಪು ಮಾಡಲು ಬಳಸುವ ಐಸ್ (ಮಂಜುಗೆಡ್ಡೆ) ಬಗ್ಗೆ. ಬೇಗದಲ್ಲೇ ಕಬ್ಬಿನ ಹಾಲಿನ ಬಗ್ಗೆ ವಿವರವಾದ ಲೇಖನ ನಿಮ್ಮ 'ಸಂಪದ' ದಲ್ಲಿ...
ಚಿತ್ರ
೭೨
Ashmith
Ashmith bsaravind.blr
ಬೇಗದಲ್ಲೇ ಎನ್ನುವ ಪದ ಹೆಚ್ಚಾಗಿ ಬಳಕೆಯಲ್ಲಿ ಇಲ್ಲ ಅಲ್ಲವೇ? ಇನ್ನು ಬೇಗದಲ್ಲೇ ಇದನ್ನು ಬಳಸಲು ಶುರುಮಾಡುವ...
8:26 AM · ಮಂಗಳವಾರ, ನವೆಂಬರ್ ೦೩, ೨೦೨೬ · ೨೨ ವೀಕ್ಷಣೆಗಳು
೧ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

ಕೆ.ಪಿ.ಅಶ್ವಿನ್ ರಾವ್
ನಮ್ಮ ಕರಾವಳಿ ಕರ್ನಾಟಕದಲ್ಲಿ (ಮಂಗಳೂರು) ನಾವು ಮಾತನಾಡುವಾಗ ಹೆಚ್ಚಾಗಿ 'ಬೇಗದಲ್ಲಿ ಸಿಗುವ' ಬೇಗನೇ ಬಾ ಎನ್ನುತ್ತೇವೆ. ಅದೇ ಗುಂಗಿನಲ್ಲಿ ಬೇಗದಲ್ಲೇ ಪದವನ್ನು ಬಳಸಿದೆ ಅನಿಸುತ್ತೆ. ಕರ್ನಾಟಕದಲ್ಲಿ ಬೇರೆ ಬೇರೆ ಭಾಗಗಳಲ್ಲಿ ಬಳಕೆಯಲ್ಲಿರುವ ಕನ್ನಡ ಭಾಷೆಯ ಸೊಗಸೇ ಚಂದ. ಒಂದೇ ಅರ್ಥ ನೀಡುವ ಎಷ್ಟೋಂದು ಪದಗಳಿವೆ ಅಲ್ಲವೇ? ಪ್ರತಿಕ್ರಿಯೆಗೆ ಕೃತಜ್ಞತೆಗಳು
೧೧