ಕೆ.ಪಿ.ಅಶ್ವಿನ್ ರಾವ್
ashwinrao47
ಕನ್ನಡದ ಖ್ಯಾತ ಸಾಹಿತಿ ಹಾಗೂ ನಾಟಕಕಾರ ಟಿ ಪಿ ಕೈಲಾಸಂ ಅವರನ್ನು ಒಮ್ಮೆ ಯಾರೋ ಕೇಳಿದರಂತೆ "ಕನ್ನಡಿಗರು ಯಾರು?" ಎಂದು.
ಕೈಲಾಸಂ ಹೇಳಿದರಂತೆ "ಯಾರು ತಮಿಳರೊಂದಿಗೆ ತಮಿಳಿನಲ್ಲಿ, ಮಲೆಯಾಳಿಗಳೊಂದಿಗೆ ಮಲೆಯಾಳಂ ನಲ್ಲಿ, ಹಿಂದಿಯವರೊಂದಿಗೆ ಹಿಂದಿಯಲ್ಲಿ, ಬಂಗಾಳಿಯವರೊಂದಿಗೆ ಬಂಗಾಳಿಯಲ್ಲಿ, ಒಡಿಯಾದವರೊಂದಿಗೆ ಒಡಿಯಾದಲ್ಲಿ ಹಾಗೂ ಕನ್ನಡದವರೊಂದಿಗೆ ಇಂಗ್ಲೀಷಿನಲ್ಲಿ ಮಾತನಾಡುತ್ತಾರೋ ಅವರೇ ಕನ್ನಡಿಗರು."
ಈ ಮಾತನ್ನು ಕೈಲಾಸಂ ಹೇಳಿ ಹಲವು ದಶಕಗಳೇ ಕಳೆದಿರಬಹುದು. ಆದರೆ ಇಂದಿಗೂ ಕನ್ನಡಿಗರ ಸ್ಥಿತಿ ಬದಲಾಗಿಲ್ಲ. ರಾಜ್ಯೋತ್ಸವ ಮಾಸದಂದು ಯಾಕೋ ನೆನಪಾಯ್ತು...
9:21 AM
·
ಬುಧವಾರ, ನವೆಂಬರ್ ೦೪, ೨೦೨೬
·
೫೧ ವೀಕ್ಷಣೆಗಳು
೦
ಪ್ರತಿಕ್ರಿಯೆಗಳು
ಮರುಪೋಸ್ಟ್ಗಳು
ಇಷ್ಟಗಳು