Sampada Logo

ಪೋಸ್ಟ್

ಅಡ್ಡೂರು ಕೃಷ್ಣ ರಾವ್
ಐದನೇ ದಿನದ ಐಡಿಯಾ - ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ: ಕನ್ನಡ ಭಾಷೆಯ ವಿಶೇಷತೆಗಳನ್ನು ತಿಳಿಯೋದು. ಕೆಲವರು ಮಾತಿನಲ್ಲಿ "ಕೋಟೆ-ಗೀಟೆ", "ಬದನೆ-ಗಿದನೆ" ಎಂಬ ಪದಗಳನ್ನು ಬಳಸುವುದನ್ನು ಗಮನಿಸಿದ್ದೀರಾ? ಅವರ ಮಾತಿನ "ಗೀಟೆ", "ಗಿದನೆ" ಇಂತಹ ಪದಗಳ ಅರ್ಥವೇನು? "ಗಿದನೆ" ಎಂಬುದರ ಅರ್ಥ ಬದನೆಯ ಹಾಗಿರುವ ಇತರ ಎಲ್ಲಾ ತರಕಾರಿಗಳು. ಬಹುಶಃ ಬೇರೆ ಯಾವ ಭಾಷೆಯಲ್ಲಿಯೂ ಇಂತಹ ಪದ ಬಳಕೆ ಇಲ್ಲ. ಆದ್ದರಿಂದ ಇದು ನಮ್ಮ ಕನ್ನಡದ ಒಂದು ವಿಶೇಷತೆ. ಇದನ್ನು ಮಾನ್ಯ ಎಲ್. ಎಸ್. ಶೇಷಗಿರಿರಾಯರು ಬರೆದ "ಸುಲಭ ಇಂಗ್ಲಿಷ್" ಪುಸ್ತಕದಲ್ಲಿ ಓದಿದ ನೆನಪು. ಇಂತಹ ಬೇರೆ ವಿಶೇಷತೆಗಳನ್ನೂ ತಿಳಿಯೋಣ.
9:36 AM · ಗುರುವಾರ, ನವೆಂಬರ್ ೦೫, ೨೦೨೬ · ೪೨ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!