Sampada Logo

ಪೋಸ್ಟ್

ಅಡ್ಡೂರು ಕೃಷ್ಣ ರಾವ್
ಕನ್ನಡದ ಗಾದೆಗಳು ಸಾವಿರಾರು. ನಮಗೆಷ್ಟು ತಿಳಿದಿದೆ? "ತುಂಬಿದ ಕೊಡ ತುಳುಕೋದಿಲ್ಲ." (ಅಂದರೆ ಸದ್ದು ಮಾಡಲ್ಲ.) ಹಾಗೆಯೇ ಜ್ಞಾನವಂತರು ಬಡಾಯಿ ಕೊಚ್ಚೋದಿಲ್ಲ; ಅದು ಅರ್ಧಂಬರ್ಧ ತಿಳಿದವರ ಚಟ. (ಆ ಎರಡೂ ವರ್ಗದ ಜನರ ಬಗ್ಗೆ ಈ ಗಾದೆ ಬಳಕೆ.) ಗಮನಿಸಿ: ಗಾದೆಗಳನ್ನು ಯಾವಾಗ, ಯಾರ ಬಗ್ಗೆ ಬಳಸಬೇಕು ಎಂಬುದನ್ನು ತಿಳಿದು ಬಳಸಿದರೆ, ಗಾದೆಗಳಿಂದ ನಮ್ಮ ಮಾತು-ಬರಹ ಚಂದ. ಉದಾ: ಬೆಳ್ಳಗಿರುವುದೆಲ್ಲ ಹಾಲಲ್ಲ. ಎಲ್ಲರ ಮನೆ ದೋಸೆಯೂ ತೂತು. ಎಲ್ಲ ಬಣ್ಣ ಮಸಿ ನುಂಗಿದಂತೆ. ಉರಿಯೋ ಬೆಂಕಿಗೆ ತುಪ್ಪ ಸುರಿದಂತೆ. ಉಗುರಿಂದ ಹೋಗೋದಕ್ಕೆ ಕೊಡಲಿ ತಗೊಂಡಂತೆ. ಹುಡುಕೋ ಬಳ್ಳಿ ಕಾಲಿಗೆ ತೊಡಕಿದಂತೆ. ಸಂತೇಲಿ ನಿಂತು ಪುರಾಣ ಹೇಳಿದಂತೆ.
7:59 AM · ಭಾನುವಾರ, ನವೆಂಬರ್ ೦೮, ೨೦೨೬ · ೨೬ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!