ಹಚ್ಚೋಣ ಬನ್ನಿ ದೀಪ
..................................
ಹಚ್ಚೋಣ ಬನ್ನಿ ದೀಪ
ಹಂಚೋಣ ಶಾಂತಿರೂಪ
ಅಂಧಕನ ಕೋಪ, ಕಳೆಯುತ್ತಲಿಂದು
ಪ್ರೀತಿಯ ಬೆಳಕ ಬಿತ್ತೋಣ,
ಮನೆಮನಗಳಲ್ಲಿ, ಹೊಸತನಗಳಲ್ಲಿ
ಹಚ್ಚೋಣ ಬನ್ನಿ ದೀಪ
ಹಂಚೋಣ ಶಾಂತಿರೂಪ
ಮತ್ಸರದ ಮಬ್ಬ ತೊಳೆಯುತ್ತಲಿಂದು
ಸೋದರ ಭಾವ ತುಂಬೋಣ,
ಹಗೆಬಗೆಗಳಲ್ಲಿ, ಮತಭೇದಗಳಲಿ
ಹಚ್ಚೋಣ ಬನ್ನಿ ದೀಪ
ಹಂಚೋಣ ಶಾಂತಿರೂಪ
ಧಣಿದೀನರೆಲ್ಲಾ, ಸೇರುತ್ತಲಿಂದು
ಸಮತೆಯ ಸೇತುವೆ ಕಟ್ಟೋಣ,
ಅರಮನೆಗಳಲ್ಲಿ, ಬಡಗೂಡಿನಲ್ಲಿ
ಹಚ್ಚೋಣ ಬನ್ನಿ ದೀಪ
ಹಂಚೋಣ ಶಾಂತಿರೂಪ...🎆🧨
-ಹರಿತೋಟ🌷
Harsha Bhat
harsha242099
೨ ಪೋಸ್ಟ್‌ಗಳು
೧ ಅನುಯಾಯಿಗಳು
ಸೇರಿದ ದಿನಾಂಕ: ಭಾನುವಾರ, ನವೆಂಬರ್ ೦೧, ೨೦೨೬
ಓ...ನನ್ನ ಕನ್ನಡಾಂಬೆ
--------------------‐--
ಓ ...ನನ್ನ ಕನ್ನಡಾಂಬೆ,
ನಿನಗಿದೋ.. ಶುಭಾಶಯ
ನಾವು ಮಡಿಲ ಮಕ್ಕಳಮ್ಮ,
ಇರಲಿ ನಿನ್ನ ಅಭಯ
ರನ್ನಕವಿಯ, ಪಂಪನುಡಿಯ,
ಕಬ್ಬಿಗರ ಮೂಲವು
ಶರಣವಚನ, ದಾಸಪದದ
ಹೆಮ್ಮೆ ನಮ್ಮ ನಾಡು
ಸಹ್ಯಾದ್ರಿಯ, ಕಡಲತಡಿಯ,
ಯಕ್ಷ ಕಲೆಯೆ ಭವ್ಯವು
ಬೇಲೂರಿನ ಶಿಲ್ಪದೊಡಲ
ಬಿಮ್ಮು ನಮ್ಮ ನಾಡು
ಕೋಟಿ ಕಂಠ ಬೆಸೆದು ಹಾಡುವ
ನಿತ್ಯ ನೂತನ ರಾಗವು
ಸಿರಿಗನ್ನಡಂ ಗೆಲ್ಗೆಯೆಂಬ
ಉಸಿರೆ ನಮ್ಮ ಜೀವವು
-ಹರಿತೋಟ🌷