Harsha Bhat
harsha242099
ಓ...ನನ್ನ ಕನ್ನಡಾಂಬೆ
--------------------‐--
ಓ ...ನನ್ನ ಕನ್ನಡಾಂಬೆ,
ನಿನಗಿದೋ.. ಶುಭಾಶಯ
ನಾವು ಮಡಿಲ ಮಕ್ಕಳಮ್ಮ,
ಇರಲಿ ನಿನ್ನ ಅಭಯ
ರನ್ನಕವಿಯ, ಪಂಪನುಡಿಯ,
ಕಬ್ಬಿಗರ ಮೂಲವು
ಶರಣವಚನ, ದಾಸಪದದ
ಹೆಮ್ಮೆ ನಮ್ಮ ನಾಡು
ಸಹ್ಯಾದ್ರಿಯ, ಕಡಲತಡಿಯ,
ಯಕ್ಷ ಕಲೆಯೆ ಭವ್ಯವು
ಬೇಲೂರಿನ ಶಿಲ್ಪದೊಡಲ
ಬಿಮ್ಮು ನಮ್ಮ ನಾಡು
ಕೋಟಿ ಕಂಠ ಬೆಸೆದು ಹಾಡುವ
ನಿತ್ಯ ನೂತನ ರಾಗವು
ಸಿರಿಗನ್ನಡಂ ಗೆಲ್ಗೆಯೆಂಬ
ಉಸಿರೆ ನಮ್ಮ ಜೀವವು
-ಹರಿತೋಟ🌷
9:49 PM
·
ಸೋಮವಾರ, ನವೆಂಬರ್ ೦೨, ೨೦೨೬
·
೮೩ ವೀಕ್ಷಣೆಗಳು
೦
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು