ಕರಾವಳಿ ಕರ್ನಾಟಕಕ್ಕೆ ಪ್ರತಿ ವರುಷ ಜೂನ್ ತಿಂಗಳ ಮಾಡಲ್ ವಾರದಲ್ಲಿ ಮಳೆ ಮಾರುತಗಳು ನುಗ್ಗಿ ಬರುತ್ತಿದ್ದವು. ನಂತರ ಜೂನ್ ತಿಂಗಳಿಡೀ ಮಳೆ ಹೊಯ್ಯುತ್ತಿತ್ತು. ಆದರೆ ಈ ವರುಷ ಹಾಗಾಗಲಿಲ್ಲ. ಜೂನ್ ತಿಂಗಳಲ್ಲಿ ವಾಡಿಕೆಯ ಶೇಕಡಾ ೬೦ರಷ್ಟು ಮಳೆ ಸುರಿಯಿತು. ಇದೀಗ ಆಗಸ್ಟ್ ತಿಂಗಳಿಡೀ ಜೋರಾಗಿ ಮಳೆ ಬೀಳುತ್ತಿದೆ. ಈ ಬದಲಾವಣೆಯಿಂದ ಕೃಷಿಯ ಮೇಲಾಗುವ ಪರಿಣಾಮಗಳೇನು? ಅವನ್ನು ಹೇಗೆ ಎದುರಿಸಬಹುದು?