ಸತ್ಯ ಮಿಥ್ಯಗಳರಿತವರು ಹೇಳಿಹರು

ಕಾಣುವುದು ಅಸತ್ಯ ಕಾಣದಿರುವುದೆ ಸತ್ಯ |

ಕಾಣಿಪುದ ಕಾರಣವೆ ಕಾಣದಿಹ ಸತ್ಯ ಕಾಣದುದ ಕಾಣುವುದೆ ಜ್ಞಾನ ಮೂಢ ||
ಮನಶುದ್ಧಿಯಿಲ್ಲದಿರೆ ವೇದಾಂತದಿಂದೇನು ಗುರುಭಕ್ತಿಯಿಲ್ಲದಿರೆ ವಿವೇಕ ಬಹುದೇನು | ಸುಜನರೊಡನಾಡದಿರೆ ಶುದ್ದಮನವೆಲ್ಲಿಯದು ಸರಿಯಿರದ ದಾರಿಯಲಿ ಗುರಿ ದೂರ ಮೂಢ || ********************* -ಕ.ವೆಂ.ನಾಗರಾಜ್.