ಮೂಢ ಉವಾಚ - 167
ಅನುಭವಿಸಿದ ದುಃಖ ಭಯವಾಗಿ ಕಾಡೀತು ದುಃಖದ ಸೋಂಕೆಲ್ಲಿ ಭಯವಿಲ್ಲದವಗೆ | ಸುಖದ ನೆನಪುಗಳು ಬಯಕೆ ತರದಿರದೆ ಬಯಕೆ ದುಃಖಕ್ಕೆ ದೂಡೀತು ಮೂಢ || ..333 ಪುಟ್ಟಿಸಿದ ರವಿಯನೇ ಮುಸುಕುವುದು ಮೋಡ ನನ್ನಿಂದ ನಾಬರಲು ನನ್ನನೇ ಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೪೧ ಲೇಖನಗಳು
ಅನುಭವಿಸಿದ ದುಃಖ ಭಯವಾಗಿ ಕಾಡೀತು ದುಃಖದ ಸೋಂಕೆಲ್ಲಿ ಭಯವಿಲ್ಲದವಗೆ | ಸುಖದ ನೆನಪುಗಳು ಬಯಕೆ ತರದಿರದೆ ಬಯಕೆ ದುಃಖಕ್ಕೆ ದೂಡೀತು ಮೂಢ || ..333 ಪುಟ್ಟಿಸಿದ ರವಿಯನೇ ಮುಸುಕುವುದು ಮೋಡ ನನ್ನಿಂದ ನಾಬರಲು ನನ್ನನೇ ಮ...
ಕೀಳರಿಮೆ ಪಡಬೇಡ ಹೀಗಳೆವರ ಮುಂದೆ ಜಾರಿ ಬೀಳಲು ಬೇಡ ನಗುವವರ ಮುಂದೆ | ಜನವ ಮೆಚ್ಚಿಸಲ್ ಸುಳ್ಳು ಹೇಳಲು ಬೇಡ ಮನವು ಮೆಚ್ಚಿದೊಡೆ ಸಾಕೆಲವೊ ಮೂಢ || ..331 ಭಕ್ತಿಯಿಲ್ಲದ ಪೂಜೆ ವಿನಯವಿಲ್ಲದ ವಿದ್ಯೆ ಗುರುವಿರದ ಶಾಲ...
ಮಾಯೆಯ ಮುಸುಕಿನಲಿ ನಡೆದಿಹುದು ಜಗವು ಜಗದ ಅವಸಾನವದು ಮರೆಯಾಗೆ ಮಾಯೆ | ಹುಡುಕಾಟ ಬೆದಕಾಟ ಚಣಚಣಕು ಪರದಾಟ ಮಾಯೆಯಾಟದಲಿ ಮನವೆ ದಾಳ ಮೂಢ ||..329 ತಳಮಳಿಪ ಮನವನ್ನು ತಣಿಪುವುದೆ ಪೂಜೆ ಕುಣಿಕುಣಿವ ಮನವನ್ನು ನಿಲಿಸ...
ನಾನಿಲ್ಲ ಅವನಿಲ್ಲ ಜಗವಿಲ್ಲ ನಿದ್ದೆಯಲಿ ರಾಗ ದ್ವೇಷಗಳಿಲ್ಲ ನೋವು ನಲಿವುಗಳಿಲ್ಲ | ತಮೋತ್ತುಂಗದಲಿ ಪ್ರಶ್ನೋತ್ತರದ ಸೊಲ್ಲಿಲ್ಲ ಮಾಯಾ ಶಕ್ತಿಗೆದುರುಂಟೆ ಮೂಢ || ..327 ನಿದ್ದೆಯಿಂದೆದ್ದೊಡನೆ ನಾನು ಜನಿಸುವುದು ಒಂದ...
ಜಗವೆಂತಿಹುದು ಎಷ್ಟಿಹುದು ಬಲ್ಲವರು ಇಹರೇನುಯಾರಿಗಾಗೀ ಜಗವು ರಚಿಸಿದವರಾರು |ಆದಿ ತಿಳಿಯದೀ ಜಗಕೆ ಅಂತ್ಯವಿಹುದೇನುಜಗಜನಕನೇ ಬಲ್ಲ ಪ್ರಶ್ನೆಗುತ್ತರ ಮೂಢ || ..323 ರವಿ ಸೋಮರಿಹರು ಇಹುದು ಭೂಮಂಡಲವುವಾಯು ಜಲವಿಹುದು ಆಗ...
ನಾನಾರು ಅವನಾರು ಜಗವೆಂದರೇನು ಪ್ರಶ್ನತ್ರಯಗಳು ನರರ ಕಾಡದಿಹವೇನು | ಹಿಂದಿದ್ದು ಈಗಿರುವ ಎಂದೆಂದು ಇಹವೀ ಒಗಟಿಗುತ್ತರವ ತಿಳಿದಿಹೆಯ ಮೂಢ || ..321 ನಾನಾರು ಹೇಗಿರುವೆ ಬಿಡಿಸಿ ಹೇಳುವವರಾರು ಜನನ ಮರಣಗಳ ಚಕ್ರ ತಿರುಗ...
ಹುಟ್ಟಿನಿಂ ಜಾತಿಯೆನೆ ನೀತಿಗದು ದೂರ ಪ್ರಿಯ ಸುತರು ನರರಲ್ತೆ ದೇವಾಧಿದೇವನ | ದೇವಗಿಲ್ಲದ ಜಾತಿ ಮಕ್ಕಳಿಗೆ ಬೇಕೇಕೆ ಮೇಲು ಕೀಳುಗಳ ಸರಿಸಿಬಿಡು ಮೂಢ || ..319 ಆನಂದದ ಬಯಕೆ ನಂದದೆಂದೆಂದು ಆನಂದವೇನೆಂದು ತಿಳಿಯಬೇಕಿಂದು...
ದುರ್ಜನರ ಸಂಗವದು ರಾಗದ್ವೇಷಕೆ ದಾರಿ ಒಳಕರೆಗೆ ಕಿವುಡಾಗಿ ಬೀಳುವರು ಜಾರಿ | ಕುಜನರಿಂ ದೂರಾಗಿ ಸುಜನರೊಡನಾಡೆ ಮೇಲೇರುವ ದಾರಿ ಕಂಡೀತು ಮೂಢ || .317 ದೇವನನು ಮೆಚ್ಚಿಸಲು ನಾಮ ಪಟ್ಟೆಗಳೇಕೆ ರುದ್ರಾಕ್ಷಿ ಸರವೇಕೆ ಜ...
ಭಕ್ತಿಯೆಂಬುದು ಪ್ರೀತಿ ಭಕ್ತಿಯೆಂಬುದು ರೀತಿ ಬೇಕೆಂಬುದು ಭಕ್ತಿ ಬೇಡದಿಹುದೂ ಭಕ್ತಿ | ರಾಗ ದ್ವೇಷಗಳೂ ಭಕ್ತಿ ನವರಸಗಳೂ ಭಕ್ತಿ ನಿಜ ಭಾವಾಭಿವ್ಯಕ್ತಿ ಭಕ್ತಿ ಮೂಢ || ..315 ತಿನಿಸ ಕಂಡೊಡನೆ ಹಸಿವು ಹಿಂಗುವುದೆ ಜಠರಾಗ್...
ಕರ್ಮಕಿಂ ಮಿಗಿಲು ಜ್ಞಾನಕಿಂ ಮಿಗಿಲು ಯೋಗಕಿಂ ಮಿಗಿಲು ಭಕ್ತಿಯ ಹೊನಲು | ಮೂರರ ಗುರಿಯೆ ಭಕ್ತಿ ತಾನಾಗಿರಲು ಭಕ್ತಿಯೇ ಸಿರಿ ನೀನರಿಯೊ ಮೂಢ || ..313 ಭಕ್ತಿಯದು ಸಿದ್ಧಿಸಲು ಏಕಾಂತವಿರಬೇಕು ದೇವ ಸುಜನರೊಡೆ ಕೂಡಿಯ...
ನಯನ ನೋಡುವುದು ತನಗಾಗಿ ಅಲ್ಲ ಕಿವಿಯು ಕೇಳುವುದು ತನಗಲ್ಲವೇ ಅಲ್ಲ | ದೇಹವಿದು ದಣಿಯುವುದು ದೇಹಕೆಂದಲ್ಲ ಯಾರಿಗಾಗೆಂದು ಗೊತ್ತಿಹುದೆ ಮೂಢ || ..311 ತನ್ನಿಷ್ಟ ಬಂದಂತೆ ನಯನ ನೋಡುವುದೆ? ತಮ್ಮಿಚ್ಛೆಯಂತೆ ಕೈಕಾಲು ಆಡುವು...
ನೆಲವ ಸೋಕದಿಹ ಅನ್ನವಿಹುದೇನು ನೆಲವ ತಾಕದಿಹ ಪಾದಗಳು ಉಂಟೇನು | ಮಡಿಯೆಂದು ಹಾರಾಡಿ ದಣಿವುದೇತಕೆ ಹೇಳು ದೇವಗೇ ಇಲ್ಲ ಮಡಿ ನಿನಗೇಕೆ ಮೂಢ || ..305 ಸವಿಗವಳದ ರುಚಿಯ ಕರವು ತಿಳಿದೀತೆ ಸವಿಗಾನದ ಸವಿಯ ನಯನ ಸವಿದೀತೆ...
ಜಗಕೆ ಕಾರಣ ಒಂದು ಆಧಾರ ಒಂದು ಒಂದನೊಂದನು ಕಂಡು ಬೆರಗಾಯಿತೊಂದು | ಚಂದಕಿಂತ ಚಂದ ಒಂದಕೊಂದರ ನಂಟು ಆಧಾರಕಾಧಾರನವನೆ ಮೂಢ || ..303 ಅಲ್ಲೆಲ್ಲ ಇಲ್ಲೆಲ್ಲ ಮೇಲೆಲ್ಲ ಕೆಳಗೆಲ್ಲ ಎಲ್ಲಿಂದ ಎಲ್ಲಿಗೂ ಮುಗಿದುದೇ ಇಲ್ಲ | ಅ...
ಹುಟ್ಟು ಮೊದಲಲ್ಲ ಸಾವು ಕೊನೆಯಲ್ಲಹುಟ್ಟು ಸಾವಿನ ಕೊಂಡಿ ಬದುಕಿನಾ ಬಂಡಿ |ಹಿಂದಕೋ ಮುಂದಕೋ ಬಂಡಿ ಸಾಗುವುದುನಶಿಸಿದರೆ ಏರುವೆ ಹೊಸಬಂಡಿ ಮೂಢ || ..299 ಬಂಡಿಗೊಡೆಯನು ನೀನೆ ಪಯಣಿಗನು ನೀನೆಅವನ ಕರುಣೆಯಿದು ಅಹುದಹುದು ತಾನ...
ಬಯಸಿದರು ಸಾವೆ ಬಯಸದಿದ್ದರು ಸಾವೆ ಬೇಡವೆಂದರೆ ನೀನು ಬರದಿಹುದೆ ಸಾವು | ಬೇಡದಿರು ಮನವೆ ಬೇಡದಿಹ ಸಾವ ಅಡ್ಡದಾರಿಯಲಿ ನುಗ್ಗದಿರು ಮೂಢ || ..297 ಇತ್ತಿಹನು ಭಗವಂತ ಬದುಕಲೀ ಬದುಕು ಬದುಕುವ ಮುನ್ನ ಸಾಯುವುದೆ ಕೆಡುಕು...
ಒಂದಲ್ಲ ಎರಡಲ್ಲ ಮೂರು ನಾಲ್ಕಲ್ಲ ಐದಲ್ಲ ಆರಲ್ಲ ಏಳಲ್ಲವೇ ಅಲ್ಲ | ಎಂಟೊಂಬತ್ತಿಲ್ಲ ಹತ್ತು ಕಂಡೇ ಇಲ್ಲ ಸರ್ವವ್ಯಾಪಕ ಶಕ್ತನೊಬ್ಬನೇ ಮೂಢ || ..295 ಚಲಿಸದೇ ಚಲಿಸುವನು ಅವನೊಬ್ಬನೇ ನೋಡದೇ ನೋಡುವನು ಅವನೊಬ್ಬನೇ |...
ಒಳಗಣ್ಣು ಮುಚ್ಚಿದ್ದು ಹೊರಗಣ್ಣು ತೆರೆದಿರಲುಕಣ್ಣಿದ್ದು ಕುರುಡನೆನಿಸುವೆಯೊ ನೀನು |ಒಳಗಿವಿ ಮುಚ್ಚಿದ್ದು ಹೊರಗಿವಿ ತೆರೆದಿರಲುನಿನ್ನ ದನಿಯೇ ನಿನಗೆ ಕೇಳಿಸದು ಮೂಢ || ..293 ಸಜ್ಜನರು ಹಿತವಾಗಿ ಧೀಬಲವು ಮೇಳವಿಸಿಜ್ಞಾನಿ...
ನುಡಿವ ಸತ್ಯವದು ಗೆಳೆತನವ ನುಂಗೀತುಬಂಧುತ್ವ ಕಳೆದೀತು ಸೌಜನ್ಯ ಮರೆಸೀತು |ಮರುಳು ಮಾಡುವ ಸುಳ್ಳಿಗಿಹ ಬೆಲೆಯಕೊಡರು ಸತ್ಯಕಿದು ಸತ್ಯ ಮೂಢ || ..289 ಸಂತೋಷ ಜೊತೆಗಿರಲು ಮತ್ತೇನೂ ಬೇಕಿಲ್ಲಮತ್ತೇನೂ ಬೇಡದಿರೆ ಸಂತೋಷ ಬಾಳೆಲ...
ಹುಟ್ಟದೇ ಇರುವವರು ಸಾಯುವುದೆ ಇಲ್ಲ ಹುಟ್ಟಿದರು ಎನಲವರು ಸತ್ತಿರಲೆ ಇಲ್ಲ | ಸತ್ತರು ಎನಲವರು ಹುಟ್ಟಿರಲೆ ಇಲ್ಲ ಹುಟ್ಟುಸಾವುಗಳೆರಡು ಮಾಯೆ ಮೂಢ || ..287 ಹಿರಿಯ ಪರ್ವತದ ಬದಿಯೆ ಕಂದಕವು ಮೂಢರಿರಲಾಗಿ ಬುದ್ಧಿವಂತಗೆ ಬೆ...
ತಿಳಿದವರು ಯಾರಿಹರು ಆಗಸದ ನಿಜಬಣ್ಣ ತುಂಬುವರು ಯಾರಿಹರು ಆಗಸದ ಶೂನ್ಯ | ಆಗಸದ ನಿಜತತ್ವ ಅರಿತವರು ಯಾರಿಹರು ಗಗನದ ಗಹನತೆಗೆ ಮಿತಿಯೆಲ್ಲಿ ಮೂಢ || ..285 ಇವರಿಂತೆ ಅವರಂತೆ ಎಂತಿರಲಿ ಏನಂತೆ ಇರುವೆ ನೀನೆಂತೆ ಬಿಟ್ಟುಬಿ...