ಕರ್ಮಕಿಂ ಮಿಗಿಲು ಜ್ಞಾನಕಿಂ ಮಿಗಿಲು
ಯೋಗಕಿಂ ಮಿಗಿಲು ಭಕ್ತಿಯ ಹೊನಲು |
ಮೂರರ ಗುರಿಯೆ ಭಕ್ತಿ ತಾನಾಗಿರಲು
ಭಕ್ತಿಯೇ ಸಿರಿ ನೀನರಿಯೊ ಮೂಢ || ..313
ಭಕ್ತಿಯದು ಸಿದ್ಧಿಸಲು ಏಕಾಂತವಿರಬೇಕು
ದೇವ ಸುಜನರೊಡೆ ಕೂಡಿಯಾಡಲುಬೇಕು |
ಗುರುಕರುಣೆಯಲಿ ನಲಿಯುತಿರಬೇಕು
ನಿರ್ಮಮದಿ ಸಚ್ಚಿದಾನಂದ ಮೂಢ || ..314
******************
-ಕ.ವೆಂ.ನಾಗರಾಜ್.
ಪ್ರತಿಕ್ರಿಯೆ (4)