ಹುಟ್ಟದೇ ಇರುವವರು ಸಾಯುವುದೆ ಇಲ್ಲ
ಹುಟ್ಟಿದರು ಎನಲವರು ಸತ್ತಿರಲೆ ಇಲ್ಲ |
ಸತ್ತರು ಎನಲವರು ಹುಟ್ಟಿರಲೆ ಇಲ್ಲ
ಹುಟ್ಟುಸಾವುಗಳೆರಡು ಮಾಯೆ ಮೂಢ || ..287
ಹಿರಿಯ ಪರ್ವತದ ಬದಿಯೆ ಕಂದಕವು
ಮೂಢರಿರಲಾಗಿ ಬುದ್ಧಿವಂತಗೆ ಬೆಲೆಯು |
ಸುಖವ ಬಯಸಿರಲು ಜೊತೆಗಿರದೆ ದುಃಖ
ಒಂದರಿಂದಾಗಿ ಮತ್ತೊಂದು ಮೂಢ || ..288
*****************
-ಕ.ವೆಂ.ನಾಗರಾಜ್.
ಪ್ರತಿಕ್ರಿಯೆ (9)