ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಗ್ಗ

ಕಗ್ಗ

೧೪೧ ಲೇಖನಗಳು

ಮೂಢ ಉವಾಚ - 100

kavinagaraj ಜುಲೈ ೧೫ ಬ್ಲಾಗ್ ೪೩ ವೀಕ್ಷಣೆಗಳು

ಅಹಮಿಕೆಯ ಅಂತ್ಯವದು ಅರಿವಿನ ಶಿಖರ ವಿಷಯವಾಸನೆಯ ಕೊನೆ ವಿರಾಗ ಪ್ರಖರ | ಭೂತವದು ಕಾಡದು ಭವಿಷ್ಯದ ಭಯವಿಲ್ಲ ಜೀವನ್ಮುಕ್ತನವ ನಿರ್ವಿಕಾರಿ ಮೂಢ ||...

ಮೂಢ ಉವಾಚ - 98

kavinagaraj ಜುಲೈ ೦೬ ಬ್ಲಾಗ್ ೩೬ ವೀಕ್ಷಣೆಗಳು

ದ್ವೇಷವದು ದೂರ ಸರ್ವರಲಿ ಸಮಭಾವ ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ | ಮಮಕಾರವಿಲ್ಲ ಗರ್ವವದು ಮೊದಲಿಲ್ಲ ಸಮಚಿತ್ತದವನೆ ನಿಜ ಸನ್ಯಾಸಿ ಮೂಢ ||   ಬಿಟ್ಟುಬಿಡುವನು ಸಾಧಕನು ತೊರೆಯುವನು ಹೊರಮನದ ಕೋರಿಕೆಯನಲ್ಲಗಳೆಯುವ...

ಮೂಢ ಉವಾಚ - 96

kavinagaraj ಜುಲೈ ೦೧ ಬ್ಲಾಗ್ ೩೫ ವೀಕ್ಷಣೆಗಳು

ಭವಬಂಧನದ ಕಿಚ್ಚಿನಲಿ ಬೆಂದು ನೊಂದವಗೆ ಹಿತಕಾರಿ ಶೀತಲ ಮೃದು ಮಧುರ ಗುರುವಾಣಿ | ಸುಜ್ಞಾನಿ ಗುರುವೆರೆವ ಅನುಭವಾಮೃತ ಸವಿದು ಗುರುಮಾರ್ಗವನುಸರಿಸೆ ಧನ್ಯ ಮೂಢ || ಶ್ರದ್ಧೆಯಿರಲಿ ಧರ್ಮದಾಚರಣೆಯಲಿ ತುಡಿತವಿರಲಿ ಅರಿವ...

ಮೂಢ ಉವಾಚ - 95

kavinagaraj ಜೂನ್ ೨೭ ಬ್ಲಾಗ್ ೪೪ ವೀಕ್ಷಣೆಗಳು

ಆಳವಿಹ ಸಾಗರವ ಹಡಗು ದಾಟಿಸಬಹುದು ಭವಸಾಗರವ ದಾಟೆ ಅರಿವ ಜಹಜಿರಬೇಕು | ದಾರಿ ತೋರುವ ಗುರುಕರುಣೆಯಿರಬೇಕು ದಾಟಬೇಕೆಂಬ ಮನ ಬೇಕು ಮೂಢ ||   ಭವಬಂಧನವೆ ಕಿಚ್ಚು ಮರಣವೆ ಬಿರುಗಾಳಿ ಕಾಡ್ಗಿಚ್ಚಿನಲಿ ಸಿಲುಕಿ ಬೆಂದು ನೊಂ...

ಮೂಢ ಉವಾಚ - 94

kavinagaraj ಜೂನ್ ೨೫ ಬ್ಲಾಗ್ ೪೫ ವೀಕ್ಷಣೆಗಳು

ದೇವ ಜಾತಿಗವ ದೂರ ನೀತಿಗವ ದೂರ ಕುಲವು ಅವಗಿಲ್ಲ ಗೋತ್ರ ಮೊದಲಿಲ್ಲ | ದೇಶ ಕಾಲಗಳಿಲ್ಲ ನಾಮರೂಪಗಳಿಲ್ಲ ಅವನಿಗವನೆ ಸಮನನ್ಯರಿಲ್ಲ ಮೂಢ ||
ಗುರು ತಿಮಿರ...

ಮೂಢ ಉವಾಚ - 93

kavinagaraj ಜೂನ್ ೨೨ ಬ್ಲಾಗ್ ೬೩ ವೀಕ್ಷಣೆಗಳು

ಆಗಸದ ಬಣ್ಣವದು ತೋರುವಂತಿಹುದೇನು ನೀಲಿ ಕೆಂಪು ಕಪ್ಪಾಗಿ ತೋರುವುದೆ ಸೊಗಸು | ಅರಿತವರು ಯಾರಿಹರು ಗಗನದ ನಿಜಬಣ್ಣ ದೇವನೆಂತಿಹನೆಂದು ಗೊತ್ತಿಹುದೆ ಮೂಢ ||   ಅರಿವಿಗಸದಳನು ಅಗೋಚರವಾಗಿಹನು ಅಳತೆಗೆ ಸಿಲುಕನು ಬುದ್ಧಿ...

ಮೂಢ ಉವಾಚ - 92

kavinagaraj ಜೂನ್ ೨೦ ಬ್ಲಾಗ್ ೪೧ ವೀಕ್ಷಣೆಗಳು

ಹಣದಿಂದ ಸಿಗನು ಅಧಿಕಾರಕೆ ಬರನು ವಿದ್ಯೆಗೆ ಬಾಗನು ಸುಂದರತೆಗೊಲಿಯನು | ಚತುರತೆಗೆ ದಕ್ಕನು ಏನನಿತ್ತರೊಲ್ಲನು ನಿಜ ಪ್ರೀತಿಗೊಲಿಯುವನು ಮೂಢ ||   ದೇವನೆಲ್ಲಿಹನೆಂದು ಚಾರ್ವಾಕ ಕೇಳುವನು ಎಲ್ಲೆಲ್ಲು ಅವನೆಂದು ಆಸ್ತಿ...

ಮೂಢ ಉವಾಚ - 91

kavinagaraj ಜೂನ್ ೧೩ ಬ್ಲಾಗ್ ೫೩ ವೀಕ್ಷಣೆಗಳು

ಬ್ರಹ್ಮಜ್ಞಾನಿ ತಿಳಿದಾನು ವಿಶ್ವವೇ ಭಗವಂತ ಅಚ್ಚರಿಯ ಕಂಡಲ್ಲಿ ಅಗಾಧತೆಯ ಕಂಡಲ್ಲಿ | ರವಿ ಸೋಮರಲಿ ಜಲ ವಾಯು ನೆಲ ಜಲದಲಿ ದೇವನ ಕಾಣುವರು ನರರು ಮೂಢ ||   ಮಿತಿಯುಂಟೆ ದೇವನ ಕೊಡುಗೆ ಕರುಣೆಗೆ ರವಿ ಸೋಮ ನೆಲ ಜಲ ವಾಯ...

ಮೂಢ ಉವಾಚ - 90

kavinagaraj ಜೂನ್ ೦೯ ಬ್ಲಾಗ್ ೩೬ ವೀಕ್ಷಣೆಗಳು

ಪುಲ್ಲಿಂಗಿಯಲ್ಲ ಸ್ತ್ರೀಲಿಂಗಿಯಲ್ಲ ನಿರ್ಲಿಂಗಿಯಲ್ಲ ಪುಲ್ಲಿಂಗಿಯೂ ಹೌದು ಸ್ತ್ರೀಲಿಂಗಿಯೂ ಹೌದು | ನಿರ್ಲಿಂಗಿಯೂ ಹೌದು ಏನಲ್ಲ ಏನಹುದು ಎಲ್ಲವೂ ಅವನೆ ಅವನು ಅವನೆ ಮೂಢ ||   ದೇವರನು ಅರಸದಿರಿ ಗುಡಿ ಗೋಪುರಗಳಲಿ ಇ...

ಮೂಢ ಉವಾಚ - 89

kavinagaraj ಜೂನ್ ೦೮ ಬ್ಲಾಗ್ ೬೦ ವೀಕ್ಷಣೆಗಳು

ಸರ್ವಭೂತಾತ್ಮ ದೇವ ಸರ್ವರಿಗೆ ಸಮನು ಮಿತ್ರರಾರೂ ಇಲ್ಲ ಶತ್ರುಗಳು ಮೊದಲಿಲ್ಲ | ಜೀವಿಗಳಿವರು ಸಂಚಿತಾರ್ಜಿತ ಕರ್ಮಗಳಿಂ ಭಿನ್ನ ಫಲ ಪಡೆದಿಹರೋ ಮೂಢ ||   ತಾಯಿಯು ಅವನೆ ತಂದೆಯು ಅವನೆ ಬಂಧುವು ಅವನೆ ಬಳಗವು ಅವನೆ |...

ಮೂಢ ಉವಾಚ - 88

kavinagaraj ಜೂನ್ ೦೭ ಬ್ಲಾಗ್ ೩೯ ವೀಕ್ಷಣೆಗಳು

ದುಷ್ಟಶಿಕ್ಷಕ ಶಿಷ್ಟರಕ್ಷಕ ದೇವನವನೊಬ್ಬನೆ ಶಕ್ತರಲಿ ಶಕ್ತ ಬಲ್ಲಿದರ ಬಲ್ಲಿದನವನೊಬ್ಬನೆ | ಮುನಿಗಳಿಗೆ ಮುನಿ ಕವಿಗಳಿಗೆ ಕವಿಯವನೆ ಸರ್ವೋತ್ತಮರಲಿರುವವನವನೆ ಮೂಢ ||   ರವಿಯ ಬೆಳಕು ಚಂದ್ರಕಾಂತಿ ಸುಡುವಗ್ನಿ ನಿಲ್ವ...

ಮೂಢ ಉವಾಚ - 87

kavinagaraj ಜೂನ್ ೦೩ ಬ್ಲಾಗ್ ೪೮ ವೀಕ್ಷಣೆಗಳು

ತಿರುಗಿದೆ ನಿರಂತರ ಹುಟ್ಟು ಸಾವುಗಳ ಚಕ್ರ ಸಕಲ ಜೀವಗಳಲುತ್ತಮವು ಮಾನವಜನ್ಮ | ಭ್ರಮೆಗೆ ಪಕ್ಕಾಗಿ ನಿಜಗುರಿಯನರಿಯದಲೆ ಜೀವ ಹಾನಿ ಮಾಡಿಕೊಳ್ಳದಿರೆಲೆ ಮೂಢ ||   ವಿಷಯಲೋಲುಪರಾಗಿ ಬಯಸುವರು ಸುಖವ ಸುಖವನನುಸರಿಸಿ ಬಹ ದ...

ಮೂಢ ಉವಾಚ - 86

kavinagaraj ಮೇ ೩೦ ಬ್ಲಾಗ್ ೫೬ ವೀಕ್ಷಣೆಗಳು

ಜಗದ ಕಣ್ಣದುವೆ ಭಾಸ್ಕರನ ಬೆಳಕು ರವಿಯ ಮಹತಿಗೆ ಕಾರಣವು ಪ್ರಭೆಯು | ನರರು ನಮಿಪ ರವಿ ಕಿರಣದಣುವಣುವು ದೇವನಂತಃಕರಣ ಸ್ಫುರಣ ಮೂಢ ||   ಮನಮುದಗೊಳಿಸುವ ಇಂದ್ರ ಆ ಚಂದ್ರ ಸಕಲರಿಗಾಪ್ಯಾಯ ಮನಾಪಹರ ಶೀತಲ | ಶಾಂತಿ ಪ್ರ...

ಮೂಢ ಉವಾಚ - 85

kavinagaraj ಮೇ ೨೭ ಬ್ಲಾಗ್ ೫೧ ವೀಕ್ಷಣೆಗಳು

ಪದ್ಮಪತ್ರದ ಮೇಲಣ ಜಲಬಿಂದುವಿನೊಲು ಸ್ಥಿರವಲ್ಲವೀ ಬದುಕಿನಾಸೆ ಬಯಕೆಗಳು | ಮಿಂಚಿನೊಲು ಮೂಡಿ ಮರೆಯಾಗದೆ ಸುಖ ಚಂಚಲ ಮನವನಚಲಗೊಳಿಸು ಮೂಢ ||   ವಿರಾಗದಲಿ ಮನೆಯ ತೊರೆಯಬೇಕಿಲ್ಲ ತಪವನಾಚರಿಸೆ ವನವನರಸಬೇಕಿಲ್ಲ | ನಿಷ...

ಮೂಢ ಉವಾಚ - 84

kavinagaraj ಮೇ ೨೩ ಬ್ಲಾಗ್ ೬೦ ವೀಕ್ಷಣೆಗಳು

ಧರ್ಮದ ಅರಿವಿಲ್ಲ ಅರ್ಥ ಸುಳಿದಿಲ್ಲ ಸುಕಾಮಿಯೆನಿಸಿಲ್ಲ ಮುಕ್ತಿಪಥ ತಿಳಿದಿಲ್ಲ | ಪುರುಷಾರ್ಥ ಸಾಧಿಸಲಾಪದಾ ಕೊರಗಿರಲು ವಿಫಲತೆ ವೈರಾಗ್ಯ ತರದಿರದೆ ಮೂಢ ||   ಧರ್ಮದರಿವಿಹುದು ಸಕಲ ಸಂಪತ್ತುಗಳಿಹುದು ಸುಕಾಮಿಯೆಂದೆನ...

ಮೂಢ ಉವಾಚ - 83

kavinagaraj ಮೇ ೧೬ ಬ್ಲಾಗ್ ೪೭ ವೀಕ್ಷಣೆಗಳು

ಅಕ್ಕರೆಯ ಪಡೆದವರು ಅರಿಗಳಂತಾಡಿರಲು ಆಸರೆಯ ಪಡೆದವರು ದೂಡಿ ನಡೆದಿರಲು | ಸ್ವಾರ್ಥವೆಂಬುದು ಪ್ರೀತಿಯನೆ ನುಂಗಿರಲು ವೈರಾಗ್ಯವೆರಗದಿರೆ ಅಚ್ಚರಿಯು ಮೂಢ ||   ಮಸಣ ವೈರಾಗ್ಯವದು ಮರೆಯುವ ತನಕ ಅಭಾವ ವೈರಾಗ್ಯವದು ದೊರೆ...

ಮೂಢ ಉವಾಚ - 82

kavinagaraj ಮೇ ೧೨ ಬ್ಲಾಗ್ ೩೮ ವೀಕ್ಷಣೆಗಳು

ಪ್ರೀತಿಯಿಂದಲೆ ನಲಿವು ಪ್ರೀತಿಯಿಂದಲೆ ನೋವು ಪ್ರೀತಿಯಿಂದಲೆ ರಕ್ಷೆ ಪ್ರೀತಿಯಿಂದಲೆ ಭಯವು | ಪ್ರೀತಿಯಿಂದಲೆ ಸುಖವು ಪ್ರೀತಿಯಿಂದಲೆ ದುಃಖ ಪ್ರೀತಿಯ ಪರಿಗಳದೆನಿತೋ ತಿಳಿಯೆ ಮೂಢ ||  ಆಸೆಯಿಂದಲೆ ದುಃಖ ಆಸೆಯಿಂದಲೆ ಭಯವ...

ಮೂಢ ಉವಾಚ - 81

kavinagaraj ಮೇ ೦೨ ಬ್ಲಾಗ್ ೪೧ ವೀಕ್ಷಣೆಗಳು

ತಡ ಯೌವನವು ಮುಕ್ಕಾಗಿ ಸಂಪತ್ತು ಹಾಳಾಗಿ ಗೆಳೆಯರು ಮರೆಯಾಗಿ ಕೈಕಾಲು ಸೋತಿರಲು | ನಿಂದೆ ಮೂದಲಿಕೆ ಸಾಲಾಗಿ ಎರಗಿರಲು ಬದುಕಿನರ್ಥ ತಿಳಿದೇನು ಫಲ ಮೂಢ ||   ಬೇಟೆ ಮದಭರಿತ ಯೌವನವ ಮುಪ್ಪು ತಿನ್ನುವುದು ಸಾಕೆಂಬ ಭಾ...

ಮೂಢ ಉವಾಚ - 80

kavinagaraj ಏಪ್ರಿಲ್ ೨೯ ಬ್ಲಾಗ್ ೫೭ ವೀಕ್ಷಣೆಗಳು

ಅಂತ್ಯ ದಿನಗಳುರುಳುವುವು ಅಂತೆ ಮನುಜನಾಯುವು ಶಾಶ್ವತನು ತಾನೆಂಬ ಭ್ರಮೆಯು ಮುಸುಕಿಹುದು | ಚದುರಂಗದ ರಾಜ ಮಂತ್ರಿ ರಥ ಕುದುರೆ ಕಾಲಾಳು ಆಟದಂತ್ಯದಲಿ ಎಲ್ಲರೂ ಒಂದೆ ಮೂಢ || ಅವಿಚ್ಛಿನ್ನ ಭೂಮಿಯೊಂದಿರಬಹುದು ಮಣ್ಣಿನ...

ಮೂಢ ಉವಾಚ - 79

kavinagaraj ಏಪ್ರಿಲ್ ೨೮ ಬ್ಲಾಗ್ ೩೯ ವೀಕ್ಷಣೆಗಳು

ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ | ಬದಲಾಗದು ಬೆಳೆಯದು ನಾಶವಾಗದು ಚಿರಂಜೀವ ನಿತ್ಯ ಶಾಶ್ವತವು ಮೂಢ ||   ಅಚ್ಚರಿಯು ಅಚ್ಚರಿಯು ಏನಿದಚ್ಚರಿಯು ಆತ್ಮವಿದು ಅಚ್ಚರಿಯು...