ಪುಲ್ಲಿಂಗಿಯಲ್ಲ ಸ್ತ್ರೀಲಿಂಗಿಯಲ್ಲ ನಿರ್ಲಿಂಗಿಯಲ್ಲ
ಪುಲ್ಲಿಂಗಿಯೂ ಹೌದು ಸ್ತ್ರೀಲಿಂಗಿಯೂ ಹೌದು |
ನಿರ್ಲಿಂಗಿಯೂ ಹೌದು ಏನಲ್ಲ ಏನಹುದು
ಎಲ್ಲವೂ ಅವನೆ ಅವನು ಅವನೆ ಮೂಢ ||
ದೇವರನು ಅರಸದಿರಿ ಗುಡಿ ಗೋಪುರಗಳಲಿ
ಇರದಿಹನೆ ದೇವ ಹೃದಯ ಮಂದಿರದಲಿ |
ಹೃದಯವದು ಶುದ್ಧವಿರೆ ನಡೆಯು ನೇರವಿರೆ
ಪರಮಾತ್ಮ ಒಲಿಯುವನು ಮೂಢ ||
**************
-ಕ.ವೆಂ.ನಾಗರಾಜ್.
ಪ್ರತಿಕ್ರಿಯೆ (2)