ಸ್ವರ್ಗ ಶಾಶ್ವತವಲ್ಲ ನರಕ ಶಾಶ್ವತವಲ್ಲ ಶಾಶ್ವತವದೊಂದೆ ಸಚ್ಚಿದಾನಂದ ಭಾವ |

ಗುರುಮಾರ್ಗವನುಸರಿಸಿ ಸಾಧನೆಯ ಮಾಡೆ ಭದ್ರಪದವೊಲಿಯುವುದು ಮೂಢ ||
ಸತ್ಯಧರ್ಮಕೆ ಹೆಸರು ಕೋದಂಡರಾಮ

ನೀತಿಪಾಲನೆಗೆ ಹಿಡಿದನಾಯುಧ ಶ್ಯಾಮ |

ಮನುಕುಲಕೆ ದಾರಿದೀವಿಗೆಯು ರಾಮ ಬೆಳಕು ಕಂಡೆಡೆಯಲ್ಲಿ ಸಾಗು ನೀ ಮೂಢ || ********************** -ಕ.ವೆಂ.ನಾಗರಾಜ್.