ಭಿತ್ತಿಯೊಂದಿಲ್ಲದಿರೆ ಚಿತ್ರವೆಂತಿರಲಹದು ?
ಚಿತ್ರವಿಲ್ಲದ ಭಿತ್ತಿ, ಸೊಗಸಹುದದೆಂತು ?
ನಿತ್ಯಸತ್ತ್ವವೆ ಭಿತ್ತಿ, ಜೀವಿತ ಕ್ಷಣಚಿತ್ರ
ತತ್ತ್ವವೀ ಸಂಬಂಧ - ಮಂಕುತಿಮ್ಮ