ಮಂಕುತಿಮ್ಮನ ಕಗ್ಗ - 200
ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್ಹೊಟ್ಟೆ ತುಂಬಿದ ತೋಳ ಮಲಗೀತು : ನೀಂ ಪೆರರದಿಟ್ಟಿಸುತ ಕರುಬುವೆಯೊ - ಮಂಕುತಿಮ್ಮ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shashiag
ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್ಹೊಟ್ಟೆ ತುಂಬಿದ ತೋಳ ಮಲಗೀತು : ನೀಂ ಪೆರರದಿಟ್ಟಿಸುತ ಕರುಬುವೆಯೊ - ಮಂಕುತಿಮ್ಮ
ಪದರಪದರಗಳಿಹುವು ಗಂಟುಗಂಟುಗಳಿಹುವುಹೃದಯದಲಿ ಬುದ್ಧಿಯಲಿ ವಾಕ್ಚರ್ಯೆಗಳಲಿಇದಮಿತ್ಥಮೆಲ್ಲಿಹುದು ಮನುಜಸ್ವಭಾವದಲಿ ?ವಿಧಿಯ ಕೈಚಿತ್ರವದು - ಮಂಕುತಿಮ್ಮ
ಸತ್ಯವಂತನನರಸಲೆನುತ ಪೇಟೆಗಳೊಳಗೆಹಟ್ಟಹಗಲೊಳೆ ದೀವಿಗೆಯ ಹಿಡಿದು ನಡೆದುಕೆಟ್ಟುದೀ ಜಗವೇಂದು ತೊಟ್ಟಿಯೊಳೆ ವಸಿಸಿದನುತಾತ್ತ್ವೀಕ ಡಯೋಜೆನಿಸ್ - ಮಂಕುತಿಮ್ಮ
ಕನಲ್ಪ ಹುಲಿ ಕೆರಳ್ದ ಹರಿ ಮುಳ್ಕರಡಿ ಛಲನಾಗಅಣುಕು ಕಪಿ ಸೀಳ್ನಾಯಿ ಮೊದಲಾದ ಮೃಗದಸೆಣಸುಮುಸುಡಿಯ ಘೋರದುಷ್ಟಚೇಷ್ಟೆಗಳೆಲ್ಲವಣಗಿಹುವು ನರಮನದಿ - ಮಂಕುತಿಮ್ಮ
ಮನುಜಲೋಕವಿಕಾರಗಳನು ನೀನಳಿಸುವೊಡೆಮನಕೊಂದು ದರ್ಪಣವ ನಿರವಿಸೆಂತಾನುಂಅನುಭವಿಪರವರಂದು ತಮ್ಮಂತರಂಗಗಳಅನುಪಮಾಸಹ್ಯಗಳ - ಮಂಕುತಿಮ್ಮ
ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆಜಗಕೆ ಕಾಣಿಪುದೊಂದು ಮನೆಯ ಜನಕೊಂದುಸೊಗಸಿನೆಳಸಿಕೆಗೊಂದು ತನ್ನಾತ್ಮಕಿನ್ನೊಂದುಬಗೆಯೆಷ್ಟೊ ಮೊಗವಷ್ಟು - ಮಂಕುತಿಮ್ಮ
ಅಂತರಂಗವನೆಲ್ಲ ಬಿಚ್ಚಿ ತೋರಿಪನಾರು ?ಆಂತರಗಭೀರಗಳ ತಾನೆ ಕಂಡವರನಾರ್ಗಂತಿಗಳು ಗಂಟುಗಳು ಮಡಿಪುಮಡಿಪುಗಳಲ್ಲಿ ಸ್ವಂತಕೇ ದುರ್ದರ್ಶ - ಮಂಕುತಿಮ್ಮ
ಪರಮೇಷ್ಠಿ ನಿಜಚಾತುರಿಯನಳೆಯೆ ನಿರವಿಸಿದನೆರಡುಕೈಯಿಂದೆರಡು ಜಂತುಗಳು ಬಳಿಕಇರದೆ ತಾನವನೊಂದುಗೂಡಿಸಲು ಬೆರಗಾಯ್ತುನರಿಯ ವಾನರವು ನರ - ಮಂಕುತಿಮ್ಮ
ದೇವದಾನವರ ರಣರಂಗ ಮಾನವಹೃದಯಭಾವ ರಾಗ ಹಠಂಗಳವರ ಸೇನೆಗಳುಭೂವಿಭವೈಅಯಗಳ ಭ್ರಾಂತಿಯಲಿ ಮರೆಯುವರುಜೀವಾಮೃತವನವರು - ಮಂಕುತಿಮ್ಮ
ಪಡೆಯುಣಿಸ ಮಿಗಹಕ್ಕಿಹುಳುಗಳಂದದಿ ನರನತಡಕುವನು ; ತನ್ನಾತ್ಮದುಣಿಸ ಮರೆಯುವನುಒಡಲಿನಬ್ಬರವೇನು? ಆತುಮದ ನಾಣ್ಚೇನು ?ಪೊಡವಿಗಿದೆ ದುಮ್ಮಾನ - ಮಂಕುತಿಮ್ಮ
ಅಮೃತಕಣವಂ ಮತ್ಯುಮೃದ್ಘಟದಿ ಬಯ್ತಿರಿಸಿವಿಮೃಶಬುದ್ಧಿಗೆ ಮೋಹದುಪನೇತ್ರವಿಡಿಸಿಸಾಮ್ರಜ್ಯಮಧ್ಯದಲಿ ದುರ್ಭಿಕ್ಷವಾಗಿಪುದುಕರ್ಮತೆಯೊ ನಮ್ರತೆಯೊ ? - ಮಂಕುತಿಮ್ಮ
ಪರಿಪರಿಯ ರೂಪಕಾಂತಿಗಳ ಕಣ್ಣಾಗಿಸುವಪರಿಪರಿಯ ಫಲಮಧುರಗಳ ರಸನೆಗುಣಿಪಪರಿಪರಿಯ ಕಂಠರವಗಳ ಕಿವಿಗೆ ಸೋಕಿಸುವಗುರು ಸೃಷ್ಟಿ ರಸಿಕತೆಗೆ - ಮಂಕುತಿಮ್ಮ