ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಶಿ
ಶ

ಶಶಿ

shashiag

೨೦೦ ಲೇಖನಗಳು ೫೩,೪೦೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಂಕುತಿಮ್ಮನ ಕಗ್ಗ ‍ 116

ಆಗಸ್ಟ್ ೦೧ ಉಲ್ಲೇಖಗಳು ೨೦೯ ವೀಕ್ಷಣೆ

ಪರಮಾಣುವಿಂ ಪ್ರಪಂಚಗಳ ಸಂಯೋಜೀಪುದುಮರೆಯಿಂದ ಸೃಷ್ಟಿಯಂತ್ರವ ಚಾಲಿಸುವುದು ಚರಲೀಲೆಯಲಿ ಜೀವಪೆನಿಪ ಚೈತನ್ಯವದು ಪರಸತ್ತ್ವಶಕ್ತಿಯೆಲೊ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 115

ಜುಲೈ ೩೧ ಉಲ್ಲೇಖಗಳು ೨೦೭ ವೀಕ್ಷಣೆ

ಕ್ರಮದ ನಭವಿಕೃತಿ ವಾಯ್ವಾದಿ ರೂಪಗಳಂತೆಕೃಮಿ ಬೀಜದಿಂ ಮತ್ಸ್ಯ ಮೃಗ ಮನುಜರಂತೆ ಕ್ರಮ ವಿವರವೇನಿರಲಿ ಸೃಷ್ಟಿಯ ವಿಧಾನದಲಿಸಮಸದದು ಸತ್ತ್ವವನು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 114

ಜುಲೈ ೩೧ ಉಲ್ಲೇಖಗಳು ೨೫೦ ವೀಕ್ಷಣೆ

ಸೃಷ್ಟಿರೂಪಂಗಳವತಾರದೊಳ್ ಕ್ರಮ ಲಕ್ಷ್ಯ ಪುಷ್ಟವಾಗಿರ್ದೊಡೇನಿಲ್ಲದೊಡದೇನು?ಶಿಷ್ಟಮಾದುದು ಸತ್ತ್ವವದನು ಸೋಕದ ರೂಪ ದೃಷ್ಟಿ ಸತ್ತ್ವದೊಳಿರಲಿ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 113

ಜುಲೈ ೩೧ ಉಲ್ಲೇಖಗಳು ೨೪೨ ವೀಕ್ಷಣೆ

ಅಣುಸಂಖ್ಯೆಯೆಣೆಸುವನು ವಿಶ್ವದಲಿ ವಿಜ್ಞಾನಿ ಗುಣಿಸುವನು ಭೂತಶಕ್ತಿಗಳನದರಿಂದೇಂ?ಗಣಿತಸಾಧ್ಯದ ಹಿಂದಗಣ್ಯದ ಮಹತ್ತತ್ತ್ವ ವಣಗಿಹುದು ಮೂಲವದು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 112

ಜುಲೈ ೩೧ ಉಲ್ಲೇಖಗಳು ೨೪೭ ವೀಕ್ಷಣೆ

ಹಿಮಗಿರಿಯೊಳವಿತಿಹುದು ಚೈತನ್ಯದಗ್ನಿ ಕಣ ಸ್ತಿಮಿತದಿಂ ನಿಂತಿರ್ಪುದದು ಧರೆಯ ಹಿತಕೆ ಶಮದ ಸುಂದರದ ಸಾತ್ತ್ವಿಕದ ಗಾಂಭೀರ್ಯವದು ನಮಗೊಂದು ವೇದನಿಧಿ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 111

ಜುಲೈ ೩೧ ಉಲ್ಲೇಖಗಳು ೨೩೭ ವೀಕ್ಷಣೆ

ಜಡವೆಂಬುದೇನು? ಸೃಷ್ಟಿಯಲಿ ಚೇತನ ಸುಪ್ತಿ ಅಡಗಿ ನಿದ್ರಿಪುದಲ್ಲಿ ಚೈತನ್ಯದಗ್ನಿಮಿಡಿಯೆ ಪರಸತ್ತ್ವ ವಿದ್ಯುದ್ದೀಪ್ತಿಯದನಾಗ ನಡೆವುದದು ಜೀವಿವೊಲು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 110

ಜುಲೈ ೨೫ ಉಲ್ಲೇಖಗಳು ೨೧೦ ವೀಕ್ಷಣೆ

ಹಿಮಗಿರಿಯ ಕಂಡಂಗೆ ಕ್ರಿಮಿಯ ಹಿರಿಮೆಯದೇನು?ಕ್ರಿಮಿಗೆ ಹಸಿವುಂಟಿನಿತು ಬೆದಕಾಟಮುಂಟು ಅಮಿತ ಸಂತತಿಯುಂಟು ಹಿಮಗಿರಿಯ ಸಮಯುಗದ ಕ್ರಿಮಿಪಂಕ್ತಿ ಕಿರಿದಹುದೆ? - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 109

ಜುಲೈ ೨೫ ಉಲ್ಲೇಖಗಳು ೧೮೫ ವೀಕ್ಷಣೆ

ಶಿಲೆಯಾಗಿ ನಿದ್ರಿಸುತ್ತಿರ್ದಾಕೆ ರಾಮಪದ ತಲದ ಸಂಸ್ಪರ್ಶದಿಂದೆದ್ದು ನಿಂತಂತೆ ಚಲಿಸದೆನಿಸದ ಜಡವನಾದ ಗಾಳಿಯೊ ಸೋಕೆಬಲ ತೀವಿ ಚಲಿಸುವುದು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 108

ಜುಲೈ ೨೫ ಉಲ್ಲೇಖಗಳು ೨೧೪ ವೀಕ್ಷಣೆ

ಜಡವೇನು? ಜೀವವೇಂ? ಚೈತನ್ಯ ನಿದ್ರಿಸಿರು ವೆಡೆಯೆಲ್ಲ ಜಡಲೋಕ ಕಲ್ಲು ಕಡ್ಡಿ ಕಸ ಅಡಗಿರ್ಪ ಚೈತನ್ಯವೆಚ್ಚಿರಲು ಜಂತು ಜಗ ಜಡವೆ ಜೀವದ ವಸತಿ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 107

ಜುಲೈ ೨೫ ಉಲ್ಲೇಖಗಳು ೨೨೧ ವೀಕ್ಷಣೆ

ಅಜ್ಞಾತವಾದುದನಭಾವವೆನೆ ನಾಸ್ತಿಕನು ಅಜ್ಞೇಯವೆಂದದಕೆ ಕೈಮುಗಿಯೆ ಭಕ್ತ ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ ಸ್ವಜ್ಞಪ್ತಿಶೋಧಿ ಮುನಿ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 106

ಜುಲೈ ೨೫ ಉಲ್ಲೇಖಗಳು ೨೧೮ ವೀಕ್ಷಣೆ

ಚೌಕಟ್ಟನಂತವದರೊಳು ಚಿತ್ರಪಟ ಸಾಂತ ಸಾಕಾರ ಘನತತಿ ನಿರಾಕಾರ ನಭದಿ ಲೌಕಿಕದ ಮೌಲ್ಯ ನಿರ್ಲೌಕಿಕದ ನಾಣ್ಯದಲಿ ಲೆಕ್ಕತಾತ್ತ್ವಿಕನಿಗಿದು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 105

ಜುಲೈ ೨೪ ಉಲ್ಲೇಖಗಳು ೨೨೫ ವೀಕ್ಷಣೆ

ಭಿತ್ತಿಯೊಂದಿಲ್ಲದಿರೆ ಚಿತ್ರವೆಂತಿರಲಹದು ? ಚಿತ್ರವಿಲ್ಲದ ಭಿತ್ತಿ, ಸೊಗಸಹುದದೆಂತು ?ನಿತ್ಯಸತ್ತ್ವವೆ ಭಿತ್ತಿ, ಜೀವಿತ ಕ್ಷಣಚಿತ್ರ ತತ್ತ್ವವೀ ಸಂಬಂಧ - ಮಂಕುತಿಮ್ಮ