ಮಂಕುತಿಮ್ಮನ ಕಗ್ಗ 140
ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದುಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದುಕ್ಷಿತಿ ಗರ್ಭಧರಿಸುವಳು ಮತ್ತು ದಿಸುವುದು ಜೀವ ಸತತ ಕೃಷಿಯೋ ಪ್ರಕೃತಿ - ಮಂಕುತಿಮ್ಮ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shashiag
ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದುಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದುಕ್ಷಿತಿ ಗರ್ಭಧರಿಸುವಳು ಮತ್ತು ದಿಸುವುದು ಜೀವ ಸತತ ಕೃಷಿಯೋ ಪ್ರಕೃತಿ - ಮಂಕುತಿಮ್ಮ
ಸೃಷ್ಟಿಕಥೆ ಕಟ್ಟುಕಥೆ ವಿಲಯಕಥೆ ಬರಿಯ ಕಥೆಹುಟ್ಟುಸಾವುಗಳೊಂದೆ ಪುರುಳಿನೆರಡು ದಶೆನಿತ್ಯಪರಿವರ್ತನೆಯೆ ಚೈತನ್ಯನರ್ತನೆಯ ಸತ್ಯ ಜಗದಲಿ ಕಾಣೊ - ಮಂಕುತಿಮ್ಮ
ಬಾನಾಚೆಯಿಂ ವಿಶ್ವಸತ್ತ್ವ ತಾನಿಳಿದಿಳೆಗೆ ನಾನೆನುವ ಚೇತನದಿ ರೂಪಗೊಂಡಿಹುದೋ?ನಾನೆನುವ ಕೇಂದ್ರದಿನೆ ಹೊರಟ ಸತ್ತ್ವದ ಪರಿಧಿಬಾನಾಚೆ ಹಬ್ಬಿಹುದೊ? - ಮಂಕುತಿಮ್ಮ
ನಾನೆನುವವನೆ ವಿಶ್ವಚಕ್ರನಾಭಿಯವಂಗೆಕಾಣಬಹ ದಿಗ್ವಿವರ ಚಕ್ರನೇಮಿಪಥಆನಂತ್ಯವೀ ಜಗಚ್ಚಕ್ರನಾಭಿಮತೆತಾನೊಂದೆ ಸತ್ತ್ವವದು - ಮಂಕುತಿಮ್ಮ
ವಿಶ್ವಪರಿಧಿಯದೆಲ್ಲೊ ಸೂಎಯಚಂದ್ರನಾಚೆವಿಶ್ವಕೇಂದ್ರವು ನೀನೆ ನೀನೆಣಿಸಿದೆಡೆಯೆನಿಶ್ವಸಿತ ಸಂಬಂಧ ನಿನಗಂ ದಿಗಂತಕಂ ಪುಷ್ಪವಾಗಿರು ನೀನು - ಮಂಕುತಿಮ್ಮ
ಸಂಪೂರ್ಣಗೋಳದಲಿ ನೆನೆದೆಡೆಯೆ ಕೇಂದ್ರವಲ ಕಂಪಿಸುವ ಕೇಂದ್ರ ನೀಂ ಬ್ರಹ್ಮ ಕಂದುಕದಿ ಶಂಪಾತರಂಗವದರೊಳು ತುಂಬಿ ಪರಿಯುತಿದೆ ದಂಭೋಳಿ ನೀನಾಗು - ಮಂಕುತಿಮ್ಮ
ಏಕದಿಂದಲನೇಕ ಮತ್ತನೇಕದಿನೇಕ ವೀ ಕ್ರಮವೆ ವಿಶ್ವದಂಗಾಂಗಸಂಬಂಧಲೋಕದಲಿ ಜಾತಿಯಲಿ ವ್ಯಕ್ತಿಯಲಿ ಸಂಸ್ಥೆಯಲಿ ಸಾಕಲ್ಯದರಿವಿರಲಿ - ಮಂಕುತಿಮ್ಮ
ಬಹಿರಂತರಗಳೊಂದು ಭೂತಭವ್ಯಗಳೊಂದುಇಹಪರಂಗಳುಮೊಂದು ವ್ಹೈತನ್ಯವೊಂದುಬಹುಪಾತ್ರನಾಟಕದಿ ಮಾಯೆ ಶತವೇಷಗಳವಹಿಸಲೀವಳು ಪತಿಗೆ - ಮಂಕುತಿಮ್ಮ
ರಾಮನುಚ್ಛ್ವಾ ಸವಲೆದಿರದೆ ರಾವಣನೆಡೆಗೆ?ರಾಮನುಂ ದಶಕಂಠನೆಲರನುಸಿರಿರನೆ? ರಾಮರಾವಣರುಸಿರ್ಗಳಿಂದು ನಮ್ಮೊಳಗಿರವೆ?ಭೂಮಿಯಲಿ ಪೊಸತೇನೊ? - ಮಂಕುತಿಮ್ಮ
ಪುಲಿ ಸಿಂಗದುಚ್ಛ್ವಾಸ, ಹಸು ಹುಲ್ಲೆ ಹಯದುಸಿರುಹುಳು ಹಾವಿಲಿಯ ಸುಯ್ಲು, ಹಲ್ಲಿ ಹದ್ಲುಯ್ಲುಕಲೆತಿರ್ಪುವೀಯೆಲ್ಲ ನಾಮುಸಿರ್ವೆಲರಿನಲಿಕಲಬೆರಕೆ ಜಗದುಸಿರು - ಮಂಕುತಿಮ್ಮ
ರಾಮನುಡಿತಿಟ್ಟು ನೆಲ,ಭೀಮನುಸಿರಿದ ಗಾಳಿ ವ್ಯೋಮದೆ ಭಗೀರಥಂ ತಂದ ಸುರತಟಿನಿ ಸೋಮನಂ ಪೆತ್ತ ಕಡಲೀ ಪುರಾತನಗಳಿರೆ ನಾಮೆಂತು ಹೊಸಬರೆಲೊ - ಮಂಕುತಿಮ್ಮ
ಧರೆಯ ನೀರ್ಗಾಗಸದ ನೀರಿಳಿದು ಬೆರೆವಂತೆನರನ ಪ್ರಾಕ್ತನಕೆ ನೂತನಸತ್ತ್ವ ಬೆರೆತುಪರಿವುದೀವಿಶ್ವಜೀವನಹರಿಯನವರತ ಚಿರಪ್ರತ್ನನೂತ್ನ ಜಗ - ಮಂಕುತಿಮ್ಮ