ಮಂಕುತಿಮ್ಮನ ಕಗ್ಗ 151
ದೈವವೆನಿಸಿರುತೆ ವಿಶ್ವಪ್ರಕೃತಿಶಕ್ತಿಯಲಿ ಜೀವವಾಸನೆಗಳಲಿ ಪೂರ್ವಕೃತವೆನಿಸಿಧೀವರ್ತನೆಯಲಿ ಪೌರುಷವೆನಿಸಿ ಪರಸತ್ತ್ವ ತ್ರೈವಿಧದೊಳಿರುತಿಹುದು - ಮಂಕುತಿಮ್ಮ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shashiag
ದೈವವೆನಿಸಿರುತೆ ವಿಶ್ವಪ್ರಕೃತಿಶಕ್ತಿಯಲಿ ಜೀವವಾಸನೆಗಳಲಿ ಪೂರ್ವಕೃತವೆನಿಸಿಧೀವರ್ತನೆಯಲಿ ಪೌರುಷವೆನಿಸಿ ಪರಸತ್ತ್ವ ತ್ರೈವಿಧದೊಳಿರುತಿಹುದು - ಮಂಕುತಿಮ್ಮ
ದೊರೆ ಮೂವರಿರುವಲ್ಲಿ ಸರಯಿಹುದೆ ಸೋಜಿಗವು ಕೊರತೆ ಹೆಚ್ಚಿಕೆಗಳಿರಲಚ್ಚರಿಯದೇನು?ಬರಲಿ ಬರುವುದು;ಸರಿವುದೆಲ್ಲ ಸರಿಯಲಿ; ನಿನಗೆ ಪರಿವೆಯೇನಿಲ್ಲೆಲವೊ - ಮಂಕುತಿಮ್ಮ
ಅರಸನೊಬ್ಬನಲ್ಲ; ಮೂವರು ಬಾಳನಾಳುವರು ನರ ಕರುಮ ದೈವಗಳ;ತೊಡಕದಕೆ ಸಾಜ ಗುರಿಯಿಡದ, ಮೊದಲು ಕೊನೆಯಿರದ ದರಬಾರಿನಲಿ ಸಿರಿಯೇನೊ ತಪ್ಪೇನೊ? - ಮಂಕುತಿಮ್ಮ
ಪ್ರಕೃತಿಯಿಂ ಪೊರಗಿರುವ ನರನಾರು ಸೃಷ್ಟಿಯಲಿ?ಸ್ವಕೃತಿಯೆಂದವನೆನ್ನುವುದವಳಿರದೊಡಿರದು ಸುಕೃತವೆನಿಸುವುದವಳ ನೀಂ ವಶಕೆ ಕೊಳುವ ನಯ ವಿಕೃತಿಗೆಡೆಯಾಗದಿರೊ - ಮಂಕುತಿಮ್ಮ
ಮಾಯೆಯೊಮ್ಮೊಮ್ಮೆ ತೋರುವಳು ಮಿಗಿಲಕ್ಕರೆಯ ಮಾಯಿಪಳು ಗಾಯಯಗಳನೀವಳಿಷ್ಟಗಳ ಮೈಯ ನೀಂ ಮರೆಯೆ ನೂಕುವಳಾಗ ಪಾತಳಕೆ ಪ್ರೇಯಪೂತನಿಯವಳು - ಮಂಕುತಿಮ್ಮ
ರಾಯ ಮುದಿದಶರಥನನಾಡಿಸುತ ಕೈಕೇಯಿ ಸ್ವೀಯ ವಶದಲಿ ಕೋಸಲವನಾಳಿದಂತೆಮಾಯೆ ಬೊಮ್ಮನ ಬಿನದವಡಿಸಿ ನಮ್ಮೀ ಜಗವ ಕಾಯುವಳು ತನ್ನಿಚ್ಛೆ - ಮಂಕುತಿಮ್ಮ
ಮಾಯೆಯೇ ಸರಸಿ ನಿರ್ಗುಣ ಸತ್ತ್ವದಿಂದೇನು?ಮಾಯೆ ಬಿಡೆ ಜಗವೆತ್ತ? ಜೀವಕಥೆಯೆತ್ತ?ಮೇಯವಲ್ಲದ ಮಹಿಮೆ ಮಹಿಮೆ ಛಾಯೆಯಾ ಬ್ರಹ್ಮನದು ತಾಯವಳು ನೀಂ ಮಗುವು - ಮಂಕುತಿಮ್ಮ
ಮಾಯೆಯೇ ಸರಸಿ ನಿರ್ಗುಣ ಸತ್ತ್ವದಿಂದೇನು?ಮಾಯೆ ಬಿಡೆ ಜಗವೆತ್ತ? ಜೀವಕಥೆಯೆತ್ತ?ಮೇಯವಲ್ಲದ ಮಹಿಮೆ ಮಹಿಮೆ ಛಾಯೆಯಾ ಬ್ರಹ್ಮನದು ತಾಯವಳು ನೀಂ ಮಗುವು - ಮಂಕುತಿಮ್ಮ
ವಾಯುವಂ ಕಾಣ್ಬಾನಾರ್? ತತ್ಕ್ರಿಯೆಯ ಕಾಣನಾರ್?ಮಾಯೆಯಂತಪರೀಕ್ಷ್ಯ ಸತ್ತ್ವದೀಕ್ಷ್ಯಕೃತಿರಾಯನಂ ಕಾಣಲಾಗದೆ ಮಂತ್ರಿಯೆಡೆಸಾರ್ವ ದೇಯಾರ್ಥಿವೊಲು ನೀನು - ಮಂಕುತಿಮ್ಮ
ಧಾತ್ರಿಯನು ಮದುವೆಮಂಟಪದೊಲು ಸಿಂಗರಿಸಿ ಕ್ಷಾತ್ರದಗ್ನಿಗಳ ನರಹೃದಯಗಳೊಳಿರಿಸಿ ಕೃತಿಮದುವನೆಡೆಬಿಡದೆ ನಡೆಸಿ ನಗುವ ವಿಲಾಸಿ ಚಿತ್ರಕಾರಿಯೊ ಮಾಯೆ - ಮಂಕುತಿಮ್ಮ
ಮೂಲವಸ್ತುವದೊಂದು ಲೀಲೆಗೊಸುಗ ನೂರುಕಾಲದೃಷ್ಟಿಗೆ ಬಹುಳ ಕೇವಲದೊಳೇಕ ಸ್ಥೂಲವಿವಿಧದಿ ಬಾಳಿ ಸೂಕ್ಷ್ಮ ಸಾಮ್ಯದ ತಾಳಿ ಆಳುತಿರು ಜೀವನವ - ಮಂಕುತಿಮ್ಮ
ಹಳೆ ಸೂರ್ಯ ಹಳೆ ಚಂದ್ರ ಹಳೆ ಭೂಮಿ ಹಳೆ ನೀರು ಹಳೆ ಹಿಮಾಚಲ ಗಂಗೆ ಹಳೆ ವಂಶಚರಿತೆ ಹಳೆಯವಿವು ನೀನಿದರೊಳಾವುದನು ಕಳೆದೀಯೊ?ಹಳದು ಹೊಸತರೊಳಿರದೆ? - ಮಂಕುತಿಮ್ಮ