ಅರಸನೊಬ್ಬನಲ್ಲ; ಮೂವರು ಬಾಳನಾಳುವರು
ನರ ಕರುಮ ದೈವಗಳ;ತೊಡಕದಕೆ ಸಾಜ
ಗುರಿಯಿಡದ, ಮೊದಲು ಕೊನೆಯಿರದ ದರಬಾರಿನಲಿ
ಸಿರಿಯೇನೊ ತಪ್ಪೇನೊ? - ಮಂಕುತಿಮ್ಮ