ಮೂಲವಸ್ತುವದೊಂದು ಲೀಲೆಗೊಸುಗ ನೂರು
ಕಾಲದೃಷ್ಟಿಗೆ ಬಹುಳ ಕೇವಲದೊಳೇಕ
ಸ್ಥೂಲವಿವಿಧದಿ ಬಾಳಿ ಸೂಕ್ಷ್ಮ ಸಾಮ್ಯದ ತಾಳಿ
ಆಳುತಿರು ಜೀವನವ - ಮಂಕುತಿಮ್ಮ