ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಶಿ
ಶ

ಶಶಿ

shashiag

೨೦೦ ಲೇಖನಗಳು ೫೩,೪೦೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಂಕುತಿಮ್ಮನ ಕಗ್ಗ

ಮಾರ್ಚ್ ೦೮ ಉಲ್ಲೇಖಗಳು ೨೧೧ ವೀಕ್ಷಣೆ

ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ? | ಭ್ರಮಿಪುದೇನಾಗಾಗ ಕರ್ತೃವಿನ ಮನಸು? || ಮಮತೆಯುಳ್ಳವನಾತನಾದೊಡೀ ಜೀವಗಳು| ಶ್ರಮಪಡುವುವೇಕಿಂತು? - ಮಂಕುತಿಮ್ಮ ||

ಮಂಕುತಿಮ್ಮನ ಕಗ್ಗ

ಮಾರ್ಚ್ ೦೮ ಉಲ್ಲೇಖಗಳು ೨೩೨ ವೀಕ್ಷಣೆ

ಬದುಕಿಗಾರ್ ನಾಯಕರು, ಏಕನೊ ಅನೇಕರೋ? | ವಿಧಿಯೊ ಪೌರುಷವೊ ಧರುಮವೊ ಅಂಧಬಲವೋ? || ಕುದುರುವುದದೆಂತು ಈಯವ್ಯವಸ್ಥೆಯ ಪಾಡು? | ಅದಿಗುದಿಯೆ ಗತಿಯೇನೊ? - ಮಂಕುತಿಮ್ಮ ||

ಮಂಕುತಿಮ್ಮನ ಕಗ್ಗ

ಮಾರ್ಚ್ ೦೭ ಉಲ್ಲೇಖಗಳು ೩೮೦ ವೀಕ್ಷಣೆ

ಒಳಟೆಯೇನೀ ಸೃಷ್ಟಿ? ಬಾಳಿನರ್ಥವದೇನು? | ಬಗೆದು ಬಿಡಿಸುವರಾರು ಸೋಜಿಗವನಿದನು? || ಜಗವ ನಿರವಿಸಿದ ಕೈಯೊಂದಾದೊಡೇಕಿಂತು | ಬಗೆಬಗೆಯ ಜೀವಗತಿ? - ಮಂಕುತಿಮ್ಮ ||

ಮಂಕುತಿಮ್ಮನ ಕಗ್ಗ

ಮಾರ್ಚ್ ೦೭ ಉಲ್ಲೇಖಗಳು ೩೭೧ ವೀಕ್ಷಣೆ

ದೇವರೆಂಬುದದೇನು ಕಗ್ಗತ್ತ್ ಲೆಯ ಗವಿಯೇ?| ನಾವರಿಯಲಾರದೆಲ್ಲದರೊಟ್ಟು ಹೆಸರೆ?|| ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು? | ಸಾವು ಹುಟ್ಟುಗಳೇನು? - ಮಂಕುತಿಮ್ಮ ||

ಮಂಕುತಿಮ್ಮನ ಕಗ್ಗ

ಮಾರ್ಚ್ ೦೭ ಉಲ್ಲೇಖಗಳು ೩೫೭ ವೀಕ್ಷಣೆ

ಏನು ಜೀವನದರ್ಥ ? ಏನು ಪ್ರಪಂಚಾರ್ಥ? | ಏನು ಜೀವಪ್ರಪಂಚಗಳ ಸಂಬಂಧ?|| ಕಾಣದಿಲ್ಲಿರ್ಪು ದೇನಾನುಮುಂಟೆ? ಅದೇನು?| ಜ್ಞಾನ ಪ್ರಮಾಣವೇಂ? - ಮಂಕುತಿಮ್ಮ ||

ಮಂಕುತಿಮ್ಮನ ಕಗ್ಗ

ಫೆಬ್ರ ೨೧ ಉಲ್ಲೇಖಗಳು ೨೨೨ ವೀಕ್ಷಣೆ

ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ ಮಹಿಮೆಯಿಂ ಜಗವಾಗಿ ಜೀವವೇಷದಲಿ ವಿಹರಿಪುದದೊಳ್ಳಿತೆಂಬುದು ನಿಸದವಾದೊಡ ಗಹನ ತತ್ತ್ವಕೆ ಶರಣೊ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ

ಫೆಬ್ರ ೨೧ ಉಲ್ಲೇಖಗಳು ೧೮೮ ವೀಕ್ಷಣೆ

ಜೀವ ಜಡ ರೂಪ ಪ್ರಪಂಚವನದಾವುದೋ ಆವರಿಸಿಕೊಂಡುಮೊಳನೆರೆದುಮಿಹುದಂತೆ ಭಾವಕೊಳಪಡದಂತೆ ಅಳತೆಗಳ ವಡದಂತೆ ಆ ವಿಶೇಷಕೆ ಮಣಿಯೊ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ

ಫೆಬ್ರ ೨೧ ಉಲ್ಲೇಖಗಳು ೨೪೮ ವೀಕ್ಷಣೆ

ಶ್ರೀವಿಷ್ಣು ವಿಶ್ವಾದಿಮೂಲ ಮಾಯಾಲೋಲ ದೇವ ಸರ್ವೇಶ ಪರಬೊಮ್ಮನೆಂದು ಜನಂ ಆವುದನ್ನು ಕಾಣದೊಡಮಳ್ತಿಯಿಂ ನಂಬಿಹುದೊ ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ