ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಶಿ
ಶ

ಶಶಿ

shashiag

೨೦೦ ಲೇಖನಗಳು ೫೩,೪೦೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಂಕುತಿಮ್ಮನ ಕಗ್ಗ ‍

ಜುಲೈ ೦೪ ಉಲ್ಲೇಖಗಳು ೨೨೩ ವೀಕ್ಷಣೆ

ಎಲ್ಲ ಅರೆಬೆಳಕು ಅರೆಸುಳಿವು ಅರೆತಿಳಿವುಗಳಿಲ್ಲಿ ಎಲ್ಲಿ ಪರಿಪೂರಣವೊ ಅದನರಿಯುವನಕ ಸೊಲ್ಲಿಸುವರಾರು ಸೃಷ್ಟಿಯ ಪೇಟಿಯೊಳಗುಟ್ಟ? ಎಲ್ಲ ಬಾಳು ರಹಸ್ಯ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಜುಲೈ ೦೪ ಉಲ್ಲೇಖಗಳು ೧೬೫ ವೀಕ್ಷಣೆ

ಸ್ರಷ್ಟುಸಂಕಲ್ಪಲಿಯೆಲ್ಲ ನಮ್ಮೆದುರಿಲ್ಲ ದೃಷ್ಟಿಗೋಚರವದರೊಳೊಂದು ಗೆರೆಮಾತ್ರ ಅಷ್ಟರಿಂದಿದು ನಷ್ಟವದು ನಷ್ಟವೆನ್ನುವುದೆ? ಕ್ಲಿಷ್ಟದ ಸಮಸ್ಯೆಯದು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಜುಲೈ ೦೪ ಉಲ್ಲೇಖಗಳು ೧೬೫ ವೀಕ್ಷಣೆ

ವ್ಯರ್ಥವೆಂದೆನಿಪುದಲ ಸೃಷ್ಟಿಯಲಿ ಬಹುಭಾಗ ? ಅರ್ಥವೇಂ ಕ್ರಿಮಿಕೀಟಕೋಟಿ ರಚಿನೆಯಲಿ? ಕರ್ತನಾಲೋಚಿಸದ ದುಂದಿನವನೆಂಬ ನುಡಿ ಯರ್ಧದೃಷ್ಟಿಯ ವಿವರ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಜುಲೈ ೦೪ ಉಲ್ಲೇಖಗಳು ೨೨೮ ವೀಕ್ಷಣೆ

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಜುಲೈ ೦೪ ಉಲ್ಲೇಖಗಳು ೨೩೨ ವೀಕ್ಷಣೆ

ಚಿತ್ತದನುಭವ ಭಾವ ಸಂಭಾವನೆಗಳೆಲ್ಲ ಬತ್ತವದನು ವಿಚಾರಯುಕ್ತಿಗಳು ಕುಟ್ಟೆ ತತ್ತ್ವತಂಡುಲ ದೊರೆಗುಮದು ವಿವೇಚಿತತತ್ತ್ವ ನಿತ್ಯ ಭೋಜನ ನಮಗೆ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಜುಲೈ ೦೪ ಉಲ್ಲೇಖಗಳು ೨೧೮ ವೀಕ್ಷಣೆ

ನರಭಾಷೆ ಬಣ್ಣಿಪುದೆ ಪರಸತ್ತ್ವರೂಪವೆನು? ಅರಿಯದದು ನಮ್ಮೆದೆಯ ಭಾವಗಳನೊರೆಯೆ ಪರಮಾನುಭವಗಳುಲಿಯನುಭವಿಗಳೊಳಕಿವಿಗೆ ಒರಟುಯಾನವೊ ಭಾಷೆ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಜುಲೈ ೦೪ ಉಲ್ಲೇಖಗಳು ೨೦೫ ವೀಕ್ಷಣೆ

ಭೌತವಿಜ್ಞಾನಿ ರವಿತಾರೆಧರೆಗಳ ಚಲನ ರೀತಿ ವೇಗವನಳೆದು ಶಕ್ತಿಗಳ ಗುಣಿಪನ್ ಪ್ರೀತಿರೋಷಗಳನವನಳೆವನೇನ್ ? ಅವ್ಯಕ್ತ ಚೇತನವನರಿವನೇಂ? - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ

ಜುಲೈ ೦೪ ಉಲ್ಲೇಖಗಳು ೨೪೨ ವೀಕ್ಷಣೆ

ನಕ್ಷತ್ರಮಂಡಲದಿನಾಚೆಯಿಂದೊಂದು ದನಿ ವಕ್ಷೋಗುಹಾಂತರದಿನೊಂದು ದನಿಯಿಂತೀ ಸಾಕ್ಷಿದ್ವಯವು ನಿನ್ನೊಳೊಂದುಗೂಡಿದೊಡದೇ ಪ್ರೇಕ್ಷ ಪರಬೊಮ್ಮನದು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಮೇ ೧೪ ಉಲ್ಲೇಖಗಳು ೨೩೫ ವೀಕ್ಷಣೆ

ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ ಕಾಶಿಯಾ ಶಾಸ್ತ್ರಗಳನಾಕ್ಸ್ಫರ್ಡಿನವರು ದೇಶಕಾಲವಿಭಾಗ ಮನದ ರಾಜ್ಯದೊಳಿರದು ಶ್ವಾಸವದು ಬೊಮ್ಮನದು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಮೇ ೧೩ ಉಲ್ಲೇಖಗಳು ೨೫೪ ವೀಕ್ಷಣೆ

ಮಣಿಮಂತ್ರತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ ಮನಗಾಣಿಸಲು ನಿನಗೆ ದೈವದದ್ಭುತವ ಮನುಜರೊಳಗಾಗಾಗ ತೋರ್ಪ ಮಹನೀಯಗುಣ ವನುವಾದ ಬೊಮ್ಮನದು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಮೇ ೧೩ ಉಲ್ಲೇಖಗಳು ೧೪೭ ವೀಕ್ಷಣೆ

ಮಲೆಕಣಿವೆಗಳ ಬೆರಗು ಪ್ರಕೃತಿಕೋಪದ ಗುಡುಗು ಕೆಳೆಯೊಲವು ನಲ್ಲೆಯ ವಿಯೋಗವಿಂತಹವು ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನ ನೊಳದಯದೊಂದರಿಂ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ

ಮೇ ೧೩ ಉಲ್ಲೇಖಗಳು ೧೫೬ ವೀಕ್ಷಣೆ

ಆಗುಂಬೆಯಸ್ತಮಯ ದ್ರೋಣಪರ್ವತದುದಯ ತ್ಯಾಗರಜನ ಗಾನ ವಾಲ್ಮೀಕಿ ಕವನ ಆಗಿಸವೆ ತಾವಿಮೆಮ್ಮಂತರಂಗದಿ ಸತ್ಯ ಯೋಗಪುಲಕಾಂಕುರವ? - ಮಂಕುತಿಮ್ಮ