ಮಂಕುತಿಮ್ಮನ ಕಗ್ಗ
ಮಂದಾಕ್ಷಿ ನಮಗಿಹುದು ಬಲುದೂರ ಸಾಗದದು ಸಂದೆ ಮಸುಕಿನೊಳಿಹುದು ಜೀವನದ ಪಥವು ಒಂದುಮೆಟುಕದು ಕೈಗೆ;ಏನೊ ಕಣ್ಕೆಣಕುವುದು ಸಂದಿಯವೆ ನಮ್ಮ ಗತಿ! - ಮಂಕುತಿಮ್ಮ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shashiag
ಮಂದಾಕ್ಷಿ ನಮಗಿಹುದು ಬಲುದೂರ ಸಾಗದದು ಸಂದೆ ಮಸುಕಿನೊಳಿಹುದು ಜೀವನದ ಪಥವು ಒಂದುಮೆಟುಕದು ಕೈಗೆ;ಏನೊ ಕಣ್ಕೆಣಕುವುದು ಸಂದಿಯವೆ ನಮ್ಮ ಗತಿ! - ಮಂಕುತಿಮ್ಮ
ಮೇಲೆ ಕೆಳಗೊಳಗೆ ಬಳಿ ಸುತ್ತ ಲೆತ್ತೆತ್ತಲುಂ ಮೂಲೆಮೂಲೆಯಲಿ ವಿದ್ಯುಲ್ಲ ಹರಿಯೊಂದು ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ ಚಾಲಿಪುದು ಬಿಡು ಕೊಡದೆ - ಮಂಕುತಿಮ್ಮ
ಆಹ! ಈ ಮೋಹಗಳೊ ನೇಹಗಳೊ ದಾಹಗಳೊ ಊಹಿಪೆಯ ಸೃಷ್ಟಿಯಲಿ ಹೃದಯಮಿಹುದೆಂದು ? ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ ಈ ಹರಿಬದೊಳಗುಟ್ಟೊ? - ಮಂಕುತಿಮ್ಮ
ಕದಕಗಳಿಯನು ಬಿಗಿದು ಬೊಮ್ಮ ಗುಡಿಯೊಳಗಿರಲಿ ಅದರ ಕೀಲ್ಕುಂಚಿಕೆಯ ಹೊರಕೆಸೆಯೆ ಸಾಕು ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು ಒದವಿಪರು ದಿಟದರಿವ - ಮಂಕುತಿಮ್ಮ
ನಿಶಿಯೊಳೇಂ ಕಾಣಬಾರನು ಹಗಲನೊಲ್ಲ ದೊಡೆ? ಶಶಿರವಿಗಳವನ ಮನೆಕಿಟಕಿಯಾಗಿರರೇಂ? ಮಸಕುಬೆಳಕೊಂದಾದ ಸಂಜೆಮಂಜೇನವನು ಮಿಸಿಕಿ ಸುಳಿಯುವ ಸಮಯ? - ಮಂಕುತಿಮ್ಮ
ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ ಮುಸುಕ ತಳೆದಿಹನು ಪರಬೊಮ್ಮ ನೆನ್ನುವೊಡೆ ಒಸೆದೇತಕವನೀಯನೆಮಗೊಂದು ನಿಜಕುರುಹ ನಿಶೆಯೊಳುಡುಕರದವೊಲು? - ಮಂಕುತಿಮ್ಮ
ಬೇರಯಿಸಿ ನಿಮಿಷನಿಮಿಷಕಮೊಡಲಬಣ್ಣಗಳ ತೋರಿಪೂಸರವಳ್ಳಿಯಂತೇನು ಬೊಂಮ್ಮಂ? ಪೂರ ಮೈದೋರೆನೆಂಬಾ ಕಪಟಿಯಂಶಾವ ತಾರದಿಂದಾರ್ಗೇನು - ಮಂಕುತಿಮ್ಮ
ಅವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನೆ ಅವನ ವೇಷಗಳೇಕೆ ಮರ್ಪಡುತಲಿಹವು ? ತವಕಪಡನೇತಕೋ ಕುರುಹ ತೋರಲು ನಮಗೆ ಅವಿತುಕೊಂಡಿಹುದೇಕೊ? - ಮಂಕುತಿಮ್ಮ
ಎಲ್ಲೆಲ್ಲಿಯುಂ ಮೋ ಹಸಂಭ್ರಾಂತಿಗಳ ಕವಿಸಿ ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡಿಸಿ ಗೆಲ್ಲಲಿಲ್ಲಿವನಾ ಪರೀಕ್ಷೆಯೊಳಗೆಂದು ವಿಧಿ ಸೊಲ್ಲಿಪುದು ಸರಿಯೇನೊ? - ಮಂಕುತಿಮ್ಮ
ಇರಬಹುದು ; ಚಿರಕಾಲ ಬೊಮ್ಮ ಚಿಂತಿಸಿ ದುಡಿದು ನಿರವಿಸಿಹ ವಿಶ್ವ ಚಿತ್ರವ ಮರ್ತ್ಯನರನು ಅರಿತೆನಾನೆನ್ನುವಂತಾಗೆ ಕೃತಿಕೌಶಲದ ಹಿರಿಮೆಗದು ಕುಂದಲ್ತೆ? - ಮಂಕುತಿಮ್ಮ
ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳೆಸುವೀ ಸೃಷ್ಟಿಯಲಿ ತತ್ತ್ವವೆಲ್ಲಿಯೊ ಬೆದಕಿ ನರನು ಕಷ್ಟಪಡುತಿರಲೆನುವುದೇ ಬ್ರಹ್ಮವಿಧಿಯೇನೊ ಅಷ್ಟೆ ನಮ್ಮಯ ಪಾಡು? - ಮಂಕುತಿಮ್ಮ
ನರಪರೀಕ್ಷೆಯೆ ಬೊಮ್ಮನಾಶಯವೆ? ನಮ್ಮ ಬಾಳ್ ಬರಿ ಸಮಸ್ಯಯೆ? ಅದರ ಪೂರಣವದೆಲ್ಲಿ? ಸುರಿದು ಪ್ರಶ್ನೆಗಳನುತ್ತರವ ಕುಡೆ ಬಾರದನ ಗುರುವೆಂದು ಕರೆಯುವೆಯ? - ಮಂಕುತಿಮ್ಮ