ಇರಬಹುದು ; ಚಿರಕಾಲ ಬೊಮ್ಮ ಚಿಂತಿಸಿ ದುಡಿದು

ನಿರವಿಸಿಹ ವಿಶ್ವ ಚಿತ್ರವ ಮರ್ತ್ಯನರನು

ಅರಿತೆನಾನೆನ್ನುವಂತಾಗೆ ಕೃತಿಕೌಶಲದ

ಹಿರಿಮೆಗದು ಕುಂದಲ್ತೆ? - ಮಂಕುತಿಮ್ಮ