ಮಂಕುತಿಮ್ಮನ ಕಗ್ಗ
ಪರಬೊಮ್ಮ ನೀ ಜಗವ ರಚಿಸಿದವನಾದಡದು ಬರಿಯಾಟವೋ ಕನಸೊ ನಿದ್ದೆ ಕಲವರವೋ? ಮರುಳನವನಲ್ಲದೊಡೆ ನಿಯಮವೊಂದಿರಬೇಕು ಗುರಿಗೊತ್ತದೇನಿಹುದೊ? - ಮಂಕುತಿಮ್ಮ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shashiag
ಪರಬೊಮ್ಮ ನೀ ಜಗವ ರಚಿಸಿದವನಾದಡದು ಬರಿಯಾಟವೋ ಕನಸೊ ನಿದ್ದೆ ಕಲವರವೋ? ಮರುಳನವನಲ್ಲದೊಡೆ ನಿಯಮವೊಂದಿರಬೇಕು ಗುರಿಗೊತ್ತದೇನಿಹುದೊ? - ಮಂಕುತಿಮ್ಮ
ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯಹಿಂದೆ? ನಚ್ಚುವುದೆ ಮರೆಯೊಳಿಹುದನೆ ಸತ್ಯವೆಂದು? ಅಚ್ಚರಿಯ ತಂತ್ರವಿದು; ಬ್ರಹ್ಮ ಸೃಷ್ಟಿಗಳೇಕೊ ಮುಚ್ಚಿಹವು ಸಾಜತೆಯ - ಮಂಕುತಿಮ್ಮ
ಬ್ರಹ್ಮವೇ ಸತ್ಯ, ಸೃಷ್ಠಿಯೆ ಮಿಥ್ಯಯೆನ್ನುವೊಡೆ ಸಂಬಂಧವಿಲ್ಲವೇನಾ ವಿಷಯ ಯುಗಕೆ ? ನಮ್ಮ ಕಣ್ಮ ನಸುಗಳೆ ನಮಗೆ ಸಟೆ ಪೇಳುವೊಡೆ ನೆಮ್ಮವುದದಾರನೋ? - ಮಂಕುತಿಮ್ಮ
ಎರಡುಮಿರಬಹುದು ದುಟ;ಶಿವರುದ್ರನಲೆ ಬೊಮ್ಮ ಕರವೊಂದರಲಿ ವೇಣು, ಶಂಖವೊಂದರಲಿ ಬೆರಳ್ಗಳೆರಡಾನುಮಿರೆ ಕೈ ಚಿಟಿಕಿಯಾಡುವುದು ಒರುವನಾಡುವುದೆಂತು? - ಮಂಕುತಿಮ್ಮ
ಕಾರುಣ್ಯ ಸರಸ ಸೌಂದರ್ಯರುಚಿಗಳೆ ಸೃಷ್ಟಿ- ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ ಕಾರ್ಪಣ್ಯ ಕಟುಕಗಳೆನಿಪುದಿನ್ನೊಂದು ಚಣ ತೋರದಾವುದು ದಿಟವೊ - ಮಂಕುತಿಮ್ಮ
ಧರೆಯ ಬದುಕೇನದರ ಗುರಿಯೇನು ಫಲವೇನು? ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ ನರನು ಸಾಧಿಪುದೇನು? - ಮಂಕುತಿಮ್ಮ
ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ ಇಷ್ಟ ಮೋಹಕ ದಿವ್ಯಗುಣಗಳೊಂದು ಕಡೆ ಕಷ್ಟ ಬೀಭತ್ಸ ಘೋರಂಗಳಿನ್ನೊಂದು ಕಡೆ ಕ್ಲಿಷ್ಟವೀ ಬ್ರಹ್ಮಕೃತಿ - ಮಂಕುತಿಮ್ಮ
ಜೀವಗತಿಗೊಂದು ರೇಖಾಲೇಖವಿರಬೇಕು ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ? ಆವುದೀ ಜಗದಿ? - ಮಂಕುತಿಮ್ಮ
ನರರ ಭಯಬಯಕೆಗಳೆ ಸುರರ ತಾಯ್ತಂದೆಗಳೊ? ಸುರರಟ್ಟಹಾಸದಿನೆ ನರಭಕ್ತಿಯೊರಲೋ? ಪರಿಕಿಸುವರೇನವರ್ಗಳನ್ಯೋವ್ಯಶಕ್ತಿಗಳ? ಧರುಮವೆಲ್ಲಿದರಲ್ಲಿ? - ಮಂಕುತಿಮ್ಮ
ತಿರುತಿರುಗಿ ತೊಳಲುವುದು ತಿರಿದನ್ನವುಣ್ಣುವುದು ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು ಮರಳಿ ಕೊರಗಾಡುವುದು ನರಳುವುದು ಇರವಿದೇನೊಣರಗಳೆ? - ಮಂಕುತಿಮ್ಮ
ಕೃತ್ರಿಮವೊ ಜಗವೆಲ್ಲ ಸತ್ಯತೆಯದೆಲ್ಲಿ ಹುದೊ? ಕರ್ತ್ಯವೆನಿಸಿದನೆ ತಾಂ ಗುಪ್ತನಾಗಿಹನು ಚತ್ರವೀ ಜಗವಿದರೊಳಾರ ಗುಣವೆಂತಹುದೊ! ಯಾತ್ರಿಕನೆ, ಜಾಗರಿರೊ - ಮಂಕುತಿಮ್ಮ
ಹೊನ್ನೆಂದು ಜಗದಿ ನೀಂ ಕೈಗೆ ಕೊಂಡುದನು ವಿಧಿ ಮಣ್ಣೆನುವನ್ ಅವನ ವರ ಮಣ್ಣೆನುವೆ ನೀನು ಭಿನ್ನಮಿಂತಿರೆ ವಸ್ತು ಮೌಲ್ಯಗಳ ಗಣನೆಯೀ ಪಣ್ಯಕ್ಕೆ ಗತಿಯೆಂತೊ? - ಮಂಕುತಿಮ್ಮ