ಕಾರುಣ್ಯ ಸರಸ ಸೌಂದರ್ಯರುಚಿಗಳೆ ಸೃಷ್ಟಿ-

ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ

ಕಾರ್ಪಣ್ಯ ಕಟುಕಗಳೆನಿಪುದಿನ್ನೊಂದು ಚಣ

ತೋರದಾವುದು ದಿಟವೊ - ಮಂಕುತಿಮ್ಮ