ಪರಬೊಮ್ಮ ನೀ ಜಗವ  ರಚಿಸಿದವನಾದಡದು

ಬರಿಯಾಟವೋ ಕನಸೊ ನಿದ್ದೆ ಕಲವರವೋ?

ಮರುಳನವನಲ್ಲದೊಡೆ ನಿಯಮವೊಂದಿರಬೇಕು

ಗುರಿಗೊತ್ತದೇನಿಹುದೊ? - ಮಂಕುತಿಮ್ಮ